Advertisement
ಜು. 31ರ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ಕೈಗಾರಿಕೋದ್ಯಮಿಗಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಬೇರೆ ರಾಜ್ಯಕ್ಕಿಂತ ಸ್ಥಳಾಂತರ ಮಾಡುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರ. ಸ್ವಾಭಾವಿಕವಾಗಿ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಯಾವ ಕೈಗಾರಿಕೆಗಳು ರಾಜ್ಯ ಬಿಟ್ಟು ಹೊರ ಹೋಗುವ ಉದಹಾರಣೆ ಇಲ್ಲ ಎಂದರು.
Related Articles
Advertisement
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಎಸ್‌ಸಿ, ಎಸ್‌ಟಿ ಹಣ ವರ್ಗಾವಣೆ ಮಾಡಿದ್ದಾರೆ ಅನ್ನುವುದು ದೊಡ್ಡ ಆರೋಪ ಮಾಡಿದ್ದಾರೆ. ಅವರಿಗೆ ಯಾರು ಈ ಅಂಕಿ ಸಂಖ್ಯೆ ಕೊಟ್ಟಿದ್ದು..?. ನಿಮ್ಮ ತಟ್ಟೆಯಲ್ಲಿ ಏನು ಬಿದ್ದಿದೆ ನೋಡಿಕೊಳ್ಳಬೇಕು. ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತಾ ಹೇಳುವುದಲ್ಲ. ನಾವು ಹಣ ವರ್ಗಾವಣೆ ಮಾಡಿಲ್ಲ. ಕಾರ್ಯಕ್ರಮಕ್ಕೆ ಅದನ್ನು ಉಪಯೋಗ ಮಾಡಿದ್ದೇವೆ ಎಂದರು.
ಬಿಜೆಪಿಯವರು ಕೇವಲ ಪ್ರಚಾರಕ್ಕೆ ಮಾತನಾಡುತ್ತಾರೆ. ಅದೇ ಹಿನ್ನೆಲೆಯಲ್ಲಿ ಸಂಸತ್ತಲ್ಲಿ ರಾಹುಲ್ ಗಾಂಧಿಯ ಜಾತಿ ಬಗ್ಗೆ ಮಾತನಾಡಿದ್ದಾರೆ. ಸಚಿವ ಅನುರಾಗ್ ಠಾಕೂರ ಹೇಳಿಕೆ ಏನನ್ನು ತೋರಿಸುತ್ತದೆ. ಅದಕ್ಕಾಗಿ ಈ ರೀತಿಯ ಕೀಳುಮಟ್ಟದ ಭಾಷೆ ಬಳಸುತ್ತಾರೆ ಎಂದರು.
ಬೆಂಗಳೂರಿನಲ್ಲಿ ದೊರೆತ ಮಾಂಸ ನಾಯಿಯದ್ದು ಅಲ್ಲ. ಆದರೆ ಅಲ್ಲಿಗೆ ಕೆಲವರು ಹೋಗಿ ಗಲಾಟೆ ಮಾಡಿದ್ದಾರೆ. ಪುನೀತ್ ಕೆರಹಳ್ಳಿ ಶಾಂತಿ ಭಂಗ ಮಾಡಿದ್ದಾರೆ. ಅವರ ಮೇಲೆ ಕ್ರಮ ಆಗಿದೆ. ಹಿಂದೆ ಕೂಡ ಅವರ ಮೇಲೆ ಕೆಲ ಕೇಸ್‌ಗಳಿವೆ. ಅಲ್ಲಿ ಕಳಪೆ ಮಾಂಸ ಮಾರಾಟ ವಿಚಾರ ಇಲ್ಲ ಎಂದರು.
ರಾಜಕೀಯಕ್ಕೆ ನಾನು ಸನ್ಯಾಸಿ ಆಗಿ ಬಂದಿಲ್ಲ. ಸಿಎಂ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಅಂತಹ ಸಂದರ್ಭವೂ ಇಲ್ಲ. ಉತ್ತಮ ಆಡಳಿತ ನೀಡುತ್ತಿದ್ದೇವೆ ಎಂದರು.