Advertisement
ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯ ಸುಮಾರು 142 ಶಾಲೆಗಳ ಕುರಿತು ಇಲಾಖೆಯಿಂದ ಮಾಹಿತಿ ಕಲೆ ಹಾಕಲಾಗಿದೆ. ನಗರದಲ್ಲಿ ಬಿಟ್ಟು ಬಿಡದೇ ಸುರಿದಿರುವ ಭಾರೀ ಮಳೆಗೆ ಶಾಲೆಗಳ ಸ್ಥಿತಿ ಕೂಡಾ ಚಿಂತಾಜನಕವಾಗಿತ್ತು. ಮಳೆಯ ಸಮಯದಲ್ಲಿ ಜಿಲ್ಲಾಡಳಿತದಿಂದ ರಜೆ ಘೋಷಣೆ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗಲಿಲ್ಲ.
Related Articles
Advertisement
ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರ: ಸದಾಶಿವ ಕ್ಲಸ್ಟರ್ ವ್ಯಾಪ್ತಿಯಲ್ಲಿ 2 ಕೊಠಡಿಗಳು, ಬಸವೇಶ್ವರ ನಗರ ಕ್ಲಸ್ಟರ್ ವ್ಯಾಪ್ತಿಯಲ್ಲಿ 15 ಕೊಠಡಿಗಳು, ಆನಂದನಗರ ಕ್ಲಸ್ಟರ್ ವ್ಯಾಪ್ತಿಯಲ್ಲಿ 5 ಕೊಠಡಿಗಳು ಹಾನಿಯಾಗಿರುವ ಕುರಿತು ವರದಿ ಮಾಡಲಾಗಿದ್ದು, ಇಲಾಖೆಗೆ ಮಾಹಿತಿ ನೀಡಲಾಗಿದೆ.
ಕಾಂಪೌಂಡ್ ಗೋಡೆ ಕುಸಿತ: ಹು-ಧಾ ಪೂರ್ವ ಹಾಗೂ ಕೇಂದ್ರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಿವಶಕ್ತಿ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.5 ಘಂಟಿಕೇರಿ, ಶಿರಡಿನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿಶ್ವೇಶ್ವರ ನಗರ ಸರಕಾರಿ ಪ್ರೌಢಶಾಲೆಯ ಕಾಂಪೌಂಡ್ ಗೋಡೆಗಳು ಕುಸಿದಿರುವ ಕುರಿತು ವರದಿಯಾಗಿವೆ.
ಭಾರಿ ಮಳೆಗೆ ಶಹರ ಕ್ಷೇತ್ರ ವ್ಯಾಪ್ತಿಯ ಹಲವು ಶಾಲೆಗಳಲ್ಲಿ ಸೋರಿಕೆ ಕಂಡು ಬಂದಿದೆ. ಕೌಲಪೇಟೆ ಶಾಲೆಯ ಮೇಲ್ಭಾಗದಲ್ಲಿ ಹೆಚ್ಚಿನ ಸೋರಿಕೆ ಕಂಡುಬಂದಿದ್ದು, ಅಲ್ಲಲ್ಲಿಸ್ಯ್ಲಾಬ್ ಕಿತ್ತಿರುವ ಕುರಿತು ಸಮೀಕ್ಷೆಯಲ್ಲಿ ಮಾಹಿತಿ ಸಿಕ್ಕಿದೆ. ಈ ಕುರಿತು ಇಲಾಖೆಗೆ ಸಂಪೂರ್ಣ ವರದಿ ಸಲ್ಲಿಸಲಾಗುತ್ತಿದೆ. •ಶ್ರೀಶೈಲ ಕರಿಕಟ್ಟಿ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ
•ಬಸವರಾಜ ಹೂಗಾರ