Advertisement
ಇಲ್ಲಿನ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿಕಾಂ ಕಲಿಯುತ್ತಿರುವ ಅಮೃತ್ ಮಾವಿನಕಟ್ಟಿ ಎನ್ನುವ ವಿದ್ಯಾರ್ಥಿಯ ಎರಡನೇ ವರ್ಷದ ಶುಲ್ಕವನ್ನು ಕೆ.ಎಲ್.ರಾಹುಲ್ ಅವರು ಪಾವತಿ ಮಾಡಿದ್ದಾರೆ. 3 ಮತ್ತು 4 ನೇ ಸೆಮಿಸ್ಟರ್ ನ 75,504 ರೂ. ಪಾವತಿಸಿದ್ದಾರೆ. ಇದರ ಮೂಲಕ ಕಳೆದ ವರ್ಷ ಬಿಕಾಂ ಮೊದಲ ವರ್ಷದ ಶುಲ್ಕ ಪಾವತಿ ಮಾಡುವ ಸಂದರ್ಭದಲ್ಲಿ ಎರಡನೇ ವರ್ಷದ ಶುಲ್ಕ ಭರಿಸುವ ಭರವಸೆ ನೀಡಿದ್ದರು. ಬಡ ಪ್ರತಿಭಾನ್ವಿತ ವಿದ್ಯಾರ್ಥಿ ಅಮೃತ್ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದವರು.
Related Articles
Advertisement
ಕೊಂಡಿಯಾದ ಮಂಜುನಾಥ: ಇಲ್ಲಿನ ಸಮಾಜ ಸೇವಕ ಮಂಜುನಾಥ ಹೆಬಸೂರ ಅವರ ಮೂಲಕ ಕೆ.ಎಲ್. ರಾಹುಲ್ ಮೊದಲನೇ ವರುಷದ ಕಾಲೇಜಿನ ಪೂರ್ತಿ ಶುಲ್ಕವನ್ನು ಭರಿಸಿದ್ದರು. ಅದೇ ರೀತಿ ಈಗ ಎರಡನೇ ವರುಷದ ಶುಲ್ಕವನ್ನು ಭರಿಸಿದ್ದಾರೆ. ಕಳೆದ ವರ್ಷ ವಿದ್ಯಾರ್ಥಿಯ ಸಂಕಷ್ಟದ ಕುರಿತು ದಾನಿಗಳ ಗಮನ ಸೆಳೆಯುವ ಕೆಲಸವಾಗಿತ್ತು. ಅದಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಸ್ಪಂದಿಸಿದ್ದರು. ವಿದ್ಯಾರ್ಥಿಯ ಪ್ರಗತಿ ಪರಿಗಣಿಸಿ ಅವರೇ ಕರೆ ಮಾಡಿ ಎರಡನೇ ವರ್ಷದ ಶುಲ್ಕವನ್ನು ಭರಿಸಿದ್ದಾರೆ. ವಿದ್ಯಾರ್ಥಿ ಅಮೃತ್ ಕೂಡ ಅವರ ವಿಶ್ವಾಸವನ್ನು ಉಳಿಸಿಕೊಂಡಿದ್ದಾನೆ ಎಂದು ಮಂಜುನಾಥ ಹೆಬಸೂರ ತಿಳಿಸಿದರು.