Advertisement

ಹುಬ್ಬಳ್ಳಿ-ಬೆಂಗಳೂರು ರೈಲು ಜೋಡು ಮಾರ್ಗ ಕಾಮಗಾರಿ ತೀವ್ರಕ್ಕೆ ಸೂಚನೆ

04:13 PM May 20, 2017 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ-ಬೆಂಗಳೂರು ಹಾಗೂ ಹುಬ್ಬಳ್ಳಿ-ಹೊಸಪೇಟೆ ನಡುವಿನ ಜೋಡು ರೈಲು ಮಾರ್ಗ ನಿರ್ಮಾಣ ಕಾಮಗಾರಿ ಮುಂದಿನ ಮೂರು ವರ್ಷದೊಳಗೆ ಸಾರ್ವಜನಿಕ ಸೇವೆಗೆ ಬಳಕೆಯಾಗುವಂತಾಗಬೇಕು.

Advertisement

ಜತೆಗೆ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ರೈಲು ಸಂಚಾರದ ಸುರಕ್ಷತೆ ಹಾಗೂ ಸಮಯ ಪಾಲನೆಗೆ ಮೊದಲಾದ್ಯತೆ ನೀಡಬೇಕೆಂದು ರೈಲ್ವೆ ಸಹಾಯಕ ಸಚಿವ ಮನೋಜ ಸಿನ್ಹಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ನೈರುತ್ಯ ರೈಲ್ವೆ ವಲಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹುಬ್ಬಳ್ಳಿ-ಧಾರವಾಡ ನಡುವಿನ ರೈಲು ಜೋಡು ಮಾರ್ಗ ನಿರ್ಮಾಣ ಕಾಮಗಾರಿ ತೀವ್ರಗೊಳಿಸಬೇಕು. 

2020ರೊಳಗೆ ಎಲ್ಲ ಮಾನವ ರಹಿತ ರೈಲು ಗೇಟ್‌ಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು ಎಂದರು. ನೈರುತ್ಯ ರೈಲ್ವೆ ವಲಯದ ಸರಕು ಸಾಗಣೆ ಹಾಗೂ ಪ್ರಯಾಣಿಕರ ಸಂಚಾರ ಹೆಚ್ಚುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಳ್ಳಬೇಕು. 

ಅದೇ ರೀತಿ ಪ್ರಮುಖ ಸ್ಥಳಗಳಾದ ಬೆಂಗಳೂರು, ಯಶವಂತಪುರ, ಹುಬ್ಬಳ್ಳಿ ಮತ್ತು ಮೈಸೂರುನಂತಹ ಪ್ರಮುಖ ನಿಲ್ದಾಣಗಳಲ್ಲಿ ಟರ್ಮಿನಲ್‌ ನಿರ್ಬಂಧಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವಂತೆ ಸಲಹೆ ನೀಡಿದರು. 

Advertisement

ರೈಲುಗಳಲ್ಲಿ ಟಿಕೆಟ್‌ ತಪಾಸಣೆ ಕಾರ್ಯ ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕಿದೆ. ಟಿಕೆಟ್‌ ತಪಾಸಣಾಧಿಕಾರಿಗೆ ಗುರಿ ನಿಗದಿ ಪಡಿಸುವಂತೆ ಸಚಿವರು ಸೂಚಿಸಿದರು. 

ಉಚಿತ ವೈಫೈ ಸೇವೆಗೆ ಚಾಲನೆ: ಇದೇ ಸಂದರ್ಭದಲ್ಲಿ ರೈಲ್ವೆ ಸಹಾಯಕ ಸಚಿವ ಮನೋಜ ಸಿನ್ಹಾ ಅವರು, ರೈಲುಸೌಧದಲ್ಲಿ ವೈಫೈ ವಲಯಕ್ಕೆ ಚಾಲನೆ ನೀಡಿದರು. ನೈರುತ್ಯ ರೈಲ್ವೆ ವಲಯ ಸಿಗ್ನಲ್‌ ಮತ್ತು ದೂರಸಂಪರ್ಕಕ್ಕಾಗಿ ತಡೆರಹಿತ ವೈಫೈ ಸೇವೆ ರೂಪಿಸಿದ್ದು,

-ಈ ವೈಫೈ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗ್ಳಿಗೆ ರೈಲುಸೌಧ ವ್ಯಾಪ್ತಿಯಲ್ಲಿ ದೊರೆಯಲಿದೆ. ಸಂಸದ ಪ್ರಹ್ಲಾದ ಜೋಶಿ, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಗುಪ್ತಾ, ಹಿರಿಯ ಅಧಿಕಾರಿಗಳಾದ ಪಿ.ಎ.ಲಮ^ರೆ, ಅಶೋಕ ಗುಪ್ತಾ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next