Advertisement

Hubli; ಪರಸ್ಪರ ಹೊಡೆದಾಟ ಪ್ರಕರಣ; ರೌಡಿಶೀಟರ್‌ ಸೇರಿ 6 ಮಂದಿ ಬಂಧನ

06:02 PM Aug 26, 2024 | Team Udayavani |

ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಆನಂದನಗರದ ಮದಿನಿ ಮಸೀದಿ ಸೇತುವೆ ಬಳಿ ಅಕ್ಕಪಕ್ಕದ ನಿವಾಸಿಯ ಯುವಕರು ರಸ್ತೆಯಲ್ಲಿ ಪರಸ್ಪರ ಹೊಡೆದಾಡಿಕೊಂಡು, ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿ ಪೊಲೀಸರು ಓರ್ವ ರೌಡಿಶೀಟರ್ ಸೇರಿ ಆರು ಜನರನ್ನು ಬಂಧಿಸಿದ್ದಾರೆ.

Advertisement

ಕ್ಷುಲ್ಲಕ ವಿಷಯವಾಗಿ ಪರಸ್ಪರರು ಹೊಡದಾಡಿಕೊಂಡಿದ್ದಾರೆ. ನಂತರ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಎರಡು ಕಡೆಯ ಒಟ್ಟು ಆರು ಜನರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next