Advertisement

ಉತ್ತರದಲ್ಲಿ ಖಾಲಿಯಾಗುತ್ತಿದೆ ದಳದ ಮನೆ!

05:23 PM Dec 18, 2021 | Team Udayavani |

ಹುಬ್ಬಳ್ಳಿ: ಒಂದು ಕಾಲಕ್ಕೆ ಜನತಾ ಪರಿವಾರಕ್ಕೆ ಮಹತ್ವದಬೆಂಬಲದ ತಾಣವಾಗಿದ್ದ ಉತ್ತರ ಕರ್ನಾಟಕದಲ್ಲಿ2004ರಿಂದ ಆರಂಭವಾದ ಜನತಾ ಪರಿವಾರದಕುಸಿತ ಇಂದಿಗೂ ಮುಂದುವರಿದಿದೆ.

Advertisement

ಉಳಿದವರುಸಹ ಇದೀಗ ಜೆಡಿಎಸ್‌ಗೆ ಗುಡ್‌ಬೈ ಹೇಳುತ್ತಿದ್ದಾರೆ.ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆಇನ್ನೂ ಕೆಲವರು ಪಕ್ಷ ತೊರೆಯುವ ಸಾಧ್ಯತೆ ಇದೆ.ಉತ್ತರ ಕರ್ನಾಟಕದಲ್ಲಿ ಯಾವುದೇ ಕ್ಷೇತ್ರಕ್ಕೆಹೋದರೆ ಜನತಾ ಪರಿವಾರ ಹೆಸರಲ್ಲಿ ಸ್ಪರ್ಧಿಸಿದವರು,

ಒಂದಿಷ್ಟು ಜನರಿಗೆ ಗೊತ್ತಿದ್ದವರಿದ್ದರೂ ಸಾಕು ಕನಿಷ್ಟ5-10 ಸಾವಿರ ಮತಗಳು ಕಾಯಂ ಎನ್ನುವಂತಹಸ್ಥಿತಿ ಇದೆ. ಆದರೆ, ಪಕ್ಷ ಸಂಘಟನೆ, ಮುಖಂಡರನ್ನುಬೆಳೆಸದಿರುವುದು, ರಾಜಕೀಯ ಭವಿಷ್ಯದ ಚಿಂತೆಇನ್ನಿತರ ವಿಚಾರಗಳಿಂದಾಗಿ ಜೆಡಿಎಸ್‌ ಮುಖಂಡರುಅನ್ಯ ಪಕ್ಷಗಳಿಗೆ ವಲಸೆ ಹೋಗುತ್ತಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿದಲಿಂಗಾಯತ ನಾಯಕತ್ವದ ಕೊರತೆ ನೀಗಿಸುವ,ಲಿಂಗಾಯತ ಸಮಾಜಕ್ಕೆ ಆದ್ಯತೆ ನೀಡುವಕಾರ್ಯವನ್ನು ಜತನಾ ಪರಿವಾರ ಮಾಡಿದ್ದರಿಂದಸಹಜವಾಗಿಯೇ ಲಿಂಗಾಯತ ಸಮಾಜ ಜನತಾಪರಿವಾರ ಬೆನ್ನಿಗೆ ನಿಂತಿತ್ತು. ಸಮಾಜದವರಲ್ಲದಿದ್ದರೂರಾಮಕೃಷ್ಣ ಹೆಗಡೆ ಅವರನ್ನು ಲಿಂಗಾಯತ ನಾಯಕಎಂದು ಒಪ್ಪಿಕೊಂಡಿತ್ತು. ಯಾವಾಗ ಜನತಾ ಪರಿವಾರವಿಂಗಡಣೆಗೊಂಡು ಲಿಂಗಾಯತರಿಗೆ ಆದ್ಯತೆ ಕುಗ್ಗುತ್ತಬಂದಿತೋ ಅಲ್ಲಿಂದಲೇ ಜನತಾ ಪರಿವಾರದಿಂದಅನ್ಯಪಕ್ಷಗಳಿಗೆ ವಲಸೆ ಶುರುವಾಗಿತ್ತು. ಇಂದಿಗೂಅದು ಮುಂದುವರಿದಿದೆ.ಆಂತರಿಕ ಭಿನ್ನಾಭಿಪ್ರಾಯ, ನಾಯಕರ ಪ್ರತಿಷ್ಠೆಇನ್ನಿತರ ಕಾರಣಗಳಿಂದ ಕಾಲ ಕಾಲಕ್ಕೆ ಜನತಾಪರಿವಾರ ವಿಭಜನೆಯಾಗುತ್ತ ಸಾಗಿದಾಗಲೂಉತ್ತರದ ಜನ ಜನತಾ ಪರಿವಾರಕ್ಕೆ ತಮ್ಮದೇ ಬೆಂಬಲನೀಡುತ್ತ ಬಂದಿದ್ದರು.

2004ರ ನಂತರ ಜೆಡಿಯುಉತ್ತರದಲ್ಲಿ ಬಹುತೇಕ ಬಲ ಕಳೆದುಕೊಂಡರೂ, ಈಭಾಗದಲ್ಲಿ ಜೆಡಿಎಸ್‌ ತನ್ನದೇ ನೆಲೆ ಮುಂದುವರಿಸಿತ್ತು.ಆದರೆ, ಇದೀಗ ಇದ್ದ ನೆಲೆಯೂ ಬಹುತೇಕಶಿಥಿಲಗೊಳ್ಳತೊಡಗಿದೆ.1983ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತ್ತು.ಆಗ ಜನತಾ ಪಕ್ಷ 95 ಸ್ಥಾನ ಪಡೆದಾಗ ಅದರಲ್ಲಿಉತ್ತರ ಕರ್ನಾಟಕದ ಪಾಲು29 ಸ್ಥಾನ ಆಗಿತ್ತು. 1985ರಲ್ಲಿನಡೆದ ವಿಧಾನಸಭೆಗೆ ಮಧ್ಯಂತರಚುನಾವಣೆಯಲ್ಲಿ ಜನತಾ ಪಕ್ಷ 135ಸ್ಥಾನಗಳನ್ನು ಪಡೆದಾಗ, ಉತ್ತರದಪಾಲು 60 ಸ್ಥಾನಗಳಾಗಿತ್ತು.

Advertisement

ಒಟ್ಟುಸ್ಥಾನಗಳಲ್ಲಿ ಬಹುತೇಕ ಅರ್ಧದಷ್ಟುಸ್ಥಾನಗಳನ್ನು ನೀಡಿತ್ತು.1989ರಲ್ಲಿ ಕಾಂಗ್ರೆಸ್‌ಲಿಂಗಾಯತ ಸಮುದಾಯದ ವೀರೇಂದ್ರಪಾಟೀಲರ ನಾಯಕತ್ವದಲ್ಲಿ ಸಾಗಿದಾಗ ಉತ್ತರದಜನತೆ ಕಾಂಗ್ರೆಸ್‌ ಕಡೆ ವಾಲಿದ್ದರು. ಆ ವೇಳೆಗಾಗಲೇಜನತಾದಳಲ್ಲಿ ಬಿರುಕು ಉಂಟಾಗಿತ್ತು. ಆಗ ಕಾಂಗ್ರೆಸ್‌ಅಭೂತಪೂರ್ವ 178 ಸ್ಥಾನಗಳಲ್ಲಿ ಗೆಲುವುಸಾಧಿಸಿತ್ತು. ಜನತಾ ದಳ 24 ಸ್ಥಾನಗಳಿಗೆ ಕುಸಿದಿತ್ತು.1991ರಲ್ಲಿ ಕಾಂಗ್ರೆಸ್‌ ಅನಾರೋಗ್ಯ ನೆಪದೊಂದಿಗೆವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದಕೆಳಗಿಳಿಸಿದ್ದರಿಂದ ಲಿಂಗಾಯತ ಸಮುದಾಯಆಕ್ರೋಶಗೊಂಡಿತ್ತು.

ಅದೇ ವೇಳೆಗೆ ಜನತಾ ದಳದಲ್ಲಿರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರು ಒಗ್ಗೂಡಿಚುನಾವಣೆಗೆ ಮುಂದಾಗಿದ್ದರಿಂದ 1994ರಲ್ಲಿಜನತಾದಳ 115 ಸ್ಥಾನಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌34 ಸ್ಥಾನಗಳಿಗೆ ತಳ್ಳಲ್ಪಟ್ಟಿತ್ತು. ಬಿಜೆಪಿ ಮೊದಲ ಬಾರಿಗೆ40 ಸ್ಥಾನಗಳಿಗೆ ಜಿಗಿದಿತ್ತು.1999ರ ಚುನಾವಣೆಯಲ್ಲಿ ಜನತಾದಳವಿಭಜನೆಗೊಂಡು ಜೆಡಿಯು, ಜೆಡಿಎಸ್‌ ಎಂದಾಗಿತ್ತು.ಅದೇ ವೇಳೆಗೆ ಕಾಂಗ್ರೆಸ್‌ನ ಎಸ್‌.ಎಂ.ಕೃಷ್ಣಅವರು ಮೊಳಗಿಸಿದ ಪಾಂಚ್ಯಜನ್ಯಯಾತ್ರೆಗೆ ಜನ ಬೆಂಬಲಿಸಿ ಕಾಂಗ್ರೆಸ್‌ಗೆ132 ಸ್ಥಾನ ನೀಡಿದ್ದರು. ಜೆಡಿಯು 18ಸ್ಥಾನಗಳಲ್ಲಿ, ಜೆಡಿಎಸ್‌ 10 ಸ್ಥಾನಗಳಲ್ಲಿಗೆಲುವು ಸಾಧಿಸಿತ್ತು. ಜನತಾ ಪರಿವಾರದಒಟ್ಟು 28 ಸ್ಥಾನಗಳಲ್ಲಿ 15 ಸ್ಥಾನಗಳುಉತ್ತರ ಕರ್ನಾಟಕದ್ದಾಗಿದ್ದವು.

ಎಚ್‌ಡಿಕೆ ಬಗ್ಗೆ ಈಗಲೂ ಕ್ರೇಜ್‌:2004ರ ಚುನಾವಣೆ ವೇಳೆಗೆ ಜೆಡಿಯುನಿಂದಗೆದ್ದ 18 ಜನ ಶಾಸಕರಲ್ಲಿ ಬಹುತೇಕರು ಕಾಂಗ್ರೆಸ್‌ಕಡೆ ವಾಲಿದ್ದರು. ಅಲ್ಲಿಗೆ ಉತ್ತರದಲ್ಲಿ ಜೆಡಿಯುತನ್ನ ಬಲ ಕಳೆದುಕೊಂಡಿತ್ತಾದರೂ ಜೆಡಿಎಸ್‌ ತನ್ನನೆಲೆ ಉಳಿಸಿಕೊಳ್ಳುವ ಕಸರತ್ತು ತೋರಿತ್ತು. ಈಚುನಾವಣೆಯಲ್ಲಿ ಉತ್ತರದಲ್ಲಿ ಜೆಡಿಎಸ್‌ 18ಸ್ಥಾನಗಳನ್ನು ಗಳಿಸಿತ್ತು.

2008ರ ಚುನಾವಣೆಯಲ್ಲಿಜೆಡಿಎಸ್‌ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.ಅದರಲ್ಲಿ ಉತ್ತರದ ಪಾಲು 10 ಸ್ಥಾನಗಳಾಗಿದ್ದವು.ಚುನಾವಣೆ ಫಲಿತಾಂಶ ಬಂದ ಬೆನ್ನ ಹಿಂದೆಯೇಬಿಜೆಪಿ ನಡೆಸಿದ ಆಪರೇಷನ್‌ ಕಮಲಕ್ಕೆ ಸಿಲುಕಿದಉತ್ತರದ ಹಲವು ಜೆಡಿಎಸ್‌ ಶಾಸಕರು, ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು.ಅಲ್ಲಿಗೆ ಉತ್ತರದಲ್ಲಿ ಜೆಡಿಎಸ್‌ ಪರ್ವ ಬಹುತೇಕಕುಸಿಯತೊಡಗಿತ್ತು. ಇಷ್ಟಾದರೂ ಉತ್ತರದಲ್ಲಿಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಗ್ಗೆಜನರಿಗೆ ಇದ್ದ ಕ್ರೇಜ್‌, ಅಧಿಕಾರ ಇಲ್ಲದಾಗಲೂಅವರು ಬಂದರೆಂದರೆ ಜನರು ಸ್ವಯಂ ಪ್ರೇರಿತರಾಗಿಸೇರುತ್ತಿದ್ದರು. ಆದರೆ, ಅದನ್ನು ಸಮರ್ಪಕವಾಗಿಮತಗಳಾಗಿ ಪರಿವರ್ತನೆಗೊಳಿಸುವಲ್ಲಿ ಪಕ್ಷದನಾಯಕರು, ಈ ಭಾಗದ ಮುಖಂಡರುಯಶಸ್ವಿಯಾಗಲಿಲ್ಲ.

ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆಗೆಪಕ್ಷದ ವರಿಷ್ಠರು ಒತ್ತು ನೀಡುತ್ತಿಲ್ಲ. ಲಿಂಗಾಯತಮುಖಂಡರಿಗೆ ಮಾನ್ಯತೆ ದೊರೆಯುತ್ತಿಲ್ಲ ಎಂಬನೋವು ಅನೇಕರನ್ನು ಕಾಡತೊಡಗಿತ್ತು. ಪಕ್ಷದ ಹಲವುಮುಖಂಡರು ಅನ್ಯಪಕ್ಷಗಳ ಕಡೆ ಮುಖ ಮಾಡಿದರೆ,ಇನ್ನು ಕೆಲವರು ಮೌನಕ್ಕೆ ಜಾರಿದರು, ತಟಸ್ಥ ನಿಲುವುತಾಳಿದ್ದಾರೆ. ಇದನ್ನು ಬಳಸಿಕೊಂಡು ಬಿಜೆಪಿ ಹಾಗೂಕಾಂಗ್ರೆಸ್‌ ಪಕ್ಷಗಳು ಜೆಡಿಎಸ್‌ ಮುಖಂಡರಿಗೆ ಗಾಳಹಾಕಲು ಮುಂದಾಗಿವೆ.

ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದ ಎಚ್‌ಡಿಕೆ: ಉತ್ತರದಬೆಂಬಲ ಇಲ್ಲವಾದರೆ ಅಧಿಕಾರ ಹಿಡಿಯುವುದು ಕಷ್ಟಎಂದರಿತ ಎಚ್‌.ಡಿ. ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿಮನೆ ಮಾಡುವ ಮೂಲಕ ಉತ್ತರದಲ್ಲಿ ಪಕ್ಷಸಂಘಟನೆ ಯತ್ನ ತೋರಿದ್ದರು.

ದಕ್ಷಿಣದಲ್ಲಿದೊಡ್ಡವರು (ಎಚ್‌.ಡಿ. ದೇವೇಗೌಡ) ಸಂಘಟನೆಮಾಡುತ್ತಾರೆ. ಉತ್ತರಕ್ಕೆ ನಾನು ಆದ್ಯತೆ ನೀಡುವೆಎಂದು ಹೇಳಿದ್ದರಾದರೂ ಹೆಚ್ಚಿನ ಒತ್ತು ನೀಡದೆಮತ್ತದೇ ಸ್ಥಿತಿ ಮುಂದುವರಿದಿತ್ತು.ಉತ್ತರದಲ್ಲಿ ಪಕ್ಷ ಸಂಘಟನೆಗೆ ವರಿಷ್ಠರುಆಸಕ್ತಿ ತೋರದ್ದರಿಂದಾಗಿ ರಾಜಕೀಯ ಭವಿಷ್ಯಕಂಡುಕೊಳ್ಳಲು ಜೆಡಿಎಸ್‌ನ ಅನೇಕರು ಕಾಂಗ್ರೆಸ್‌,ಬಿಜೆಪಿ ಕಡೆ ವಾಲಿದ್ದರು. ಮುಂಬರುವ ವಿಧಾನಸಭೆಚುನಾವಣೆಯಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆಮೈತ್ರಿ ಮಾಡಿಕೊಳ್ಳಲಿದೆ ಎಂಬ ಅನಿಸಿಕೆ ಹಿನ್ನೆಲೆಯಲ್ಲಿಕ್ಷೇತ್ರದಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲುನವಲಗುಂದ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿಸುಮಾರು ಮೂರು ದಶಕಗಳಿಗಿಂತ ಹೆಚ್ಚಿನ ಕಾಲದಜನತಾ ಪರಿವಾರದ ನಂಟು ಕತ್ತರಿಸಿಕೊಂಡುಕಾಂಗ್ರೆಸ್‌ ಸೇರಿದ್ದಾರೆ.

ಮುಂಬರುವ ವಿಧಾನಸಭೆಚುನಾವಣೆ ವೇಳೆಗೆ ಇನ್ನಷ್ಟು ಜನರ ವಲಸೆ ಇಲ್ಲದಿಲ್ಲ.ಇನ್ನಾದರೂ ಉತ್ತರದಲ್ಲಿ ಪಕ್ಷ ಸಂಘಟನೆ ಹಾಗೂಕಾರ್ಯಕರ್ತರಿಗೆ ಬಲ ನೀಡುವ, ಹುಮ್ಮಸ್ಸುಹೆಚ್ಚಿಸುವ ಕಾರ್ಯಕ್ಕೆ ವರಿಷ್ಠರು ಮುಂದಾಗುವರೇಎಂದು ಜೆಡಿಎಸ್‌ ಕಾರ್ಯಕರ್ತರು ಎದುರುನೋಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next