Advertisement
ನಿಮ್ಮ ಕೈಯಲ್ಲಾಗದಿದ್ದರೆ ಹೇಳಿ ನಾವೇಬೆಟ್ಟದ ಪ್ರದೇಶದೊಳಗೆ ಒಳಹೊಕ್ಕು ತರುತ್ತೇವೆಂದು ಶಿರಡಿ ನಗರ ಹಾಗೂ ಸುತ್ತಮುತ್ತಲಿನ ನಿವಾಸಿಗಳು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.ಜಿಲ್ಲಾಧಿಕಾರಿ ನಿತೇಶ ಪಾಟೀಲರ ನೇತೃತ್ವದಲ್ಲಿ ಇಲ್ಲಿನ ರಾಜನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳ ಕಾರ್ಯಾಚರಣೆಯ ವೈಖರಿಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಕಾರ್ಯಾಚರಣೆಗೆ ಸಹಕಾರನೀಡಬೇಕು ಎಂದರು.ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ,ಚಿರತೆ ಓಡಾಟದ ಪ್ರದೇಶದಲ್ಲಿ ಜನರ ಚಟುವಟಿಕೆ ಕಡಿಮೆ ಮಾಡಬೇಕಿದೆ.ಅದನ್ನು ಹಿಡಿಯಲು ಐದು ಕಡೆ ಬೋನ್ ಇರಿಸಲಾಗಿದೆ. ಕ್ಯಾಮರಾದಲ್ಲಿಸೆರೆಯಾದ ದೃಶ್ಯದಲ್ಲಿ ಚಿರತೆ ಸ್ಪಷ್ಟವಾಗಿ ಕಂಡಿಲ್ಲ. ಸೋಮವಾರ ಬೆಳಗ್ಗೆ ಅದರಓಡಾಟದ ಕುರುಹು ಸಿಕ್ಕಿದೆ.
ನೃಪತುಂಗ ಬೆಟ್ಟ ಸುತ್ತವೇ ಅದು ಓಡಾಡುತ್ತಿದೆ.ಕಾರ್ಯಾಚರಣೆ ತೀವ್ರಗೊಳಿಸಲಾಗುವುದು ಎಂದರು.ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಮಾತನಾಡಿ,ಚಿರತೆಯ ಪಗ್ ಮಾರ್ಕ್ ಸಿಕ್ಕಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ನೋಡಿದ್ದಾರೆ.40 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಅರವಳಿಕೆ ತಜ್ಞರುಕಾರ್ಯ ನಿರ್ವಹಿಸುತ್ತಿದ್ದಾರೆ. ರಾತ್ರಿ ಕಾರ್ಯಾಚರಣೆಗೆ ಅನುಕೂಲವಾಗುವಂತೆಇನಾ#Åರೆಡ್ ಡ್ರೋಣ್ ಕ್ಯಾಮೆರಾ ಬಳಸಿಕೊಳ್ಳಲಾಗುವುದು ಎಂದರು.ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ ಇಟ್ನಾಳ ಮಾತನಾಡಿ,ಚೆನ್ನೈದಿಂದ ಹಂದಿ ಹಿಡಿಯುವ ತಂಡ ಬರುತ್ತಿದೆ. ಶಿರಡಿನಗರ ಸುತ್ತಮುತ್ತಲಿ ನಹಂದಿ-ಶ್ವಾನಗಳನ್ನು ಹಿಡಿಯಲಾಗುವುದು.
ಇದರಿಂದ ಚಿರತೆಗೆ ಆಹಾರಸಿಗದಂತೆ ನೋಡಿಕೊಳ್ಳಲಾಗುವುದು ಎಂದರು.ಪಾಲಿಕೆ ಸದಸ್ಯ ವೀರಣ್ಣ ಸವಡಿ, ಚಿರತೆ ಕಾಣಿಸಿಕೊಂಡಾಗಿನಿಂದ ಜನರುಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಇದನ್ನು ಗಂಭೀರವಾಗಿಪರಿಗಣಿಸಿಲ್ಲ. ಬೆಟ್ಟದ ಒಳಗಡೆ ಹೋಗದೆ ಹೊರಗಡೆಯೇ ಪ್ರಯತ್ನಿಸುತ್ತಿದ್ದಾರೆ.ಹಗಲು ಹೊತ್ತು ಕಾರ್ಯಾಚರಣೆ ಮಾಡುತ್ತಿಲ್ಲ. ಅವರ ಬಳಿ ಸಮರ್ಪಕಶಸ್ತ್ರಾಸ್ತ್ರಗಳಿಲ್ಲ. ಹಂದಿ, ನಾಯಿ ಹಿಡಿಯುವ ಬದಲು ಚಿರತೆ ಸೆರೆ ಹಿಡಿಯಿರಿ.
ಪಟಾಕಿ ಹಾರಿಸಿ, ಮದ್ದು ಹಾರಿಸಿ, ಶಬ್ದ ಮಾಡಿ ಇಲ್ಲಿಂದ ಅದನ್ನು ಬೇರೆಡೆಕಳುಹಿಸುವ ಪ್ರಯತ್ನ ಮಾಡಬೇಡಿ. ನಿಮ್ಮಿಂದ ಹಿಡಿಯಲಾಗದಿದ್ದರೆ ಬಂಡಿಪುರ,ಮೈಸೂರಿನ ನುರಿತ ಸಿಬ್ಬಂದಿ ಕರೆಯಿಸಿ ಎಂದು ತರಾಟೆಗೆ ತೆಗೆದುಕೊಂಡರು.ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ, ವಿಜಯಾನಂದ ಹೊಸಕೋಟಿ,ವಿಶ್ವನಾಥ ಪಾಟೀಲ ಮಾತನಾಡಿ, ಚಿರತೆ ಹುಡುಕಾಟ ನಡೆಸಿದ್ದಾರೆಯೇ ವಿನಃನಿಖರ ಕಾರ್ಯಾಚರಣೆ ಮಾಡುತ್ತಿಲ್ಲ. ಚಿರತೆ ಓಡಿಸುವುದು ಮುಖ್ಯವಲ್ಲ.ಅದನ್ನು ಹಿಡಿಯಬೇಕು. ಜನರೇ ಅದನ್ನು ಗುರುತಿಸಿ ನಿಮಗೆ ಹೇಳಬೇಕಿದೆ.
ಆದರೆ ನಿಮ್ಮ ಕಣ್ಣಿಗೆ ಅದು ಬಿದ್ದಿಲ್ಲ. ಜನರ ಸುರಕ್ಷತೆಗೆ ಬೆಟ್ಟದ ಸುತ್ತಲೂ 100ಮೀಟರ್‌ಗೆ ಒಬ್ಬರನ್ನು ಗಸ್ತಿಗೆ ನೇಮಿಸಿ. ಜನರ ಮೇಲೆ ಚಿರತೆ ದಾಳಿ ಮಾಡುವಮೊದಲು ಅದನ್ನು ಸೆರೆ ಹಿಡಿಯಿರಿ ಎಂದರು.ಡಿಸಿಪಿ ಕೆ. ರಾಮರಾಜನ್, ತಹಶೀಲ್ದಾರ್ ಶಶಿಧರ ಮಾಡ್ಯಾಳ, ಪಶುವೈದ್ಯಾಧಿಕಾರಿ ಡಾ| ವಿನಿತಾ, ಆರ್‌ಎಫ್‌ಒ ಶ್ರೀಧರ ತೆಗ್ಗಿನಮನಿ, ಕೇಂದ್ರೀಯವಿದ್ಯಾಲಯದ ಪ್ರಾಂಶುಪಾಲ ರವಿ ರಾಜೇಶ ಸೇರಿದಂತೆ ಶಿರಡಿನಗರ,ಪತ್ರಕರ್ತರ ನಗರ, ವಿಶ್ವೇಶ್ವರ ನಗರ ಸೇರಿದಂತೆ ಸುತ್ತಲಿನ ಪ್ರದೇಶದ ನಿವಾಸಿಗಳುಸಭೆಯಲ್ಲಿದ್ದರು.