ಹುಬ್ಬಳ್ಳಿ: ನಗರದ ಕಿತ್ತೂರ ಚನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಮೂರುಸಾವಿರ ಮಠದಿಂದ ಗಣೇಶ ಮೂರ್ತಿ ಮೆರವಣಿಗೆಯು ವಾದ್ಯಘೋಷಗಳೊಂದಿಗೆ, ಡಿಜೆ ಅಬ್ಬರದೊಂದಿಗೆ ಮೈದಾನದತ್ತ ಸಾಗಿತು.
ಮೆರವಣಿಗೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಶಿವು ಮೆಣಸಿನಕಾಯಿ, ಹಿಂದೂ ಸಂಘಟನೆಯ ಮುಖಂಡರಾದ ಸಂಜಯ ಬಡಸ್ಕರ, ಸುಭಾಷಸಿಂಗ ಜಮಾದಾರ, ಚಂದ್ರಶೇಖರ ಗೋಕಾಕ, ಜಯತೀರ್ಥ ಕಟ್ಟಿ ಮೊದಲಾದವರು ಪಾಲ್ಗೊಂಡಿದ್ದು, ಮೆರವಣಿಗೆಯಲ್ಲಿ ಕೇಸರಿ ಧ್ವಜಗಳು ರಾರಾಜಿಸಿತು.
ಮೆರವಣಿಗೆ ದಾಜೀಬಾನ ಪೇಟೆ ತುಳಜಾಭವಾನಿ ದೇವಸ್ಥಾನ ಮಾರ್ಗವಾಗಿ ಈದ್ಗಾ ಮೈದಾನ ತಲುಪಲಿದೆ. ಗಣೇಶ ಮೂರ್ತಿ ಜತೆ ಭಾರತ ಮಾತೆಯ ಭಾವಚಿತ್ರವೂ ಮೆರವಣಿಗೆಯಲ್ಲಿರುವುದು ಕಂಡುಬಂದಿತು.
ಮೆರವಣಿಗೆಯುದ್ದಕ್ಕೂ ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಹದ್ದಿನ ಕಣ್ಣಿರಿಸಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಈದ್ಗಾ ಮೈದಾನ ದಲ್ಲಿದೆ ಇದ್ದಾರೆ.