ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್ ಗಳಿಗೆ ನಡೆದಿರುವ ಚುನಾವಣೆಗೆ ಸ್ಥಾಪಿಸಿರುವ 842 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಶಾಂತಿಯುತವಾಗಿ ಮತದಾನ ಆರಂಭವಾಗಿದೆ.
ಬೆಳಗ್ಗೆ 10 ಗಂಟೆಯವರೆಗೆ ಶೇ. 19.4 ರಷ್ಟು ಮತದಾನವಾಗಿದ್ದು, ಧಾರವಾಡ ನಗರದ ಬಹುತೇಕ ಮತಗಟ್ಟೆಗಳಲ್ಲಿ ಮತದಾರರು ಕೋವಿಡ್ ತಡೆ ನಿಯಮಗಳನ್ನು ಪಾಲಿಸುತ್ತಲೇ ಮತದಾನ ಮಾಡುತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಅವರು ಕುಟುಂಬ ಸದಸ್ಯರೊಂದಿಗೆ ವಾರ್ಡ ನಂ-13 ರ ಬುದ್ದರಕ್ಕಿತ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆ ಸಂಖ್ಯೆ-3 ಕ್ಕೆ ಆಗಮಿಸಿ, ತಮ್ಮ ಮತದಾನದ ಹಕ್ಕು ಚಲಾಯಿಸಿದರು.
ಇದನ್ನೂ ಓದಿ:ಸರಕಾರಿ ಬಂಗಲೆಗಾಗಿ ಏಳು ಪತ್ರ ಬರೆದಿದ್ದೇನೆ, ಸರಕಾರದ ಮುಂದೆ ಭಿಕ್ಷೆ ಬೇಡುವುದಿಲ್ಲ: ಹೊರಟ್ಟಿ
ಇವರ ಜತೆಗೆ ತಂದೆ, ಹಿರಿಯ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಅವರ ಪತ್ನಿ ಮತದಾನ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಈ ಚುನಾವಣೆಯಲ್ಲಿ 50 ರಿಂದ 60 ಸೀಟ್ ಗೆಲ್ಲುವ ವಿಶ್ವಾಸವಿದೆ. ಶಾಂತಿಯುತವಾಗಿ ಮತದಾನ ಸಾಗಿದ್ದು, ಎಲ್ಲ ಕಡೆ ಉತ್ತಮ ಸ್ಪಂದನೆ ಲಭಿಸಿದೆ ಎಂದರು.