Advertisement
ಹುಬ್ಬಳ್ಳಿ: ವಿವೇಕಾನಂದರನ್ನು ಅರ್ಥೈಯಿಸಿಕೊಂಡರೆ ಹೆಮ್ಮೆ ಎನ್ನಿಸುತ್ತದೆ. ಜತೆಗೆ ಮನದಲ್ಲಿ ರಾಷ್ಟ್ರಭಕ್ತಿ ಪುಟಿದೇಳುತ್ತದೆ ಎಂದು ವಿಜಯಪುರ ಹಾಗೂ ಗದುಗಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಹೇಳಿದರು.
Related Articles
Advertisement
ವಿವೇಕಾನಂದರ ಜನಿಸದಿದ್ದರೆ ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಅವರ ಪ್ರೇರಣೆಯಿಂದಲೇ ಸುಭಾಸ್ ಚಂದ್ರಬೋಸ್ ಅವರು ಸೈನ್ಯ ಕಟ್ಟಿದರು. ಹಲವು ಕ್ರಾಂತಿಕಾರಿಗಳು ತಮ್ಮದೇ ಹೋರಾಟ-ತ್ಯಾಗ ಮಾಡಿದರು. ಮತ್ತೂಂದು ಕಡೆ ಗಾಂಧೀಜಿಯವರ ನೇತೃತ್ವದಲ್ಲಿಯೂ ಹೋರಾಟ ನಡೆಯಿತು. ಸ್ವಾರ್ಥ ಬಿಟ್ಟು ರಾಷ್ಟ್ರ ಮೊದಲು ಎಂಬ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಮೂಡಿದಾಗ ಭಾರತ ಜಗದ್ಗುರು ಸ್ಥಾನಕ್ಕೇರುವುದು ಖಚಿತ. ಇಂದಿನ ಶಿಕ್ಷಣಕ್ಕೆ ಭಾವನೆಗಳೇ ಇಲ್ಲವಾಗಿದ್ದು, ಕೇವಲ ಗುಲಾಮರನ್ನು ಸೃಷ್ಟಿಸುವ ಸಾಧನವಾಗಿದೆ. ದೇಶದ ಸಮಸ್ಯೆ-ಸವಾಲುಗಳನ್ನು ಅರ್ಥೈಯಿಸಿಕೊಂಡು ಅವುಗಳನ್ನು ಮೆಟ್ಟಿ ನಿಂತು ಭಾರತವನ್ನು ಮತ್ತೆ ಜಗದ್ಗುರುವಾಗಿಸಲು ಒಂದು ಹೆಜ್ಜೆ ಮುಂದೆ ಇರಿಸೋಣ ಎಂದರು. ವಿವೇಕಾನಂದರ ಚಿಕಾಗೋ ಭಾಷಣಗಳ ಕುರಿತಾಗಿ ಆರೆಸ್ಸೆಸ್ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಬಿ.ವಿ. ವಸಂತಕುಮಾರ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ಬಾದಾಮಿ ಇದ್ದರು. ಸಾಯಂಕಾಲ ನಡೆದ ಸಮಾರೋಪದಲ್ಲಿ ಹುಬ್ಬಳ್ಳಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ರಘುವೀರಾನಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಪ್ರಜ್ಞಾಪ್ರವಾಹ ರಾಷ್ಟ್ರೀಯ ಸಂಯೋಜಕ ರಘುನಂದ, ನಿರಾಮಯ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಬಾಳಿಕಾಯಿ, ಎಚ್.ವಿ.ಪಾಟೀಲ, ದೇವರಾಜ ದಾಡಿಬಾವಿ, ಕಲ್ಲಪ್ಪ ಮೊರಬದ, ಗುರು ಬನ್ನಿಕೊಪ್ಪ ಇನ್ನಿತರರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಧರ್ಮ ನಿಂತ ನೀರಾಗಬಾರದು. ದೀನ, ಪಾಪಿ ಹಾಗೂ ದರಿದ್ರರಲ್ಲಿಯೂ ದೇವರನ್ನು ಕಂಡವರು ವಿವೇಕಾನಂದರು. ವಿಶ್ವಕ್ಕೆ ಗುರುವಾಗಿದ್ದ ಭಾರತ ಇಂದು ದುಸ್ಥಿತಿಗೆ ತಲುಪಲು ಜನಸಾಮಾನ್ಯರನ್ನು ನಿರ್ಲಕ್ಷ್ಯ ಮಾಡಿದ್ದೇ ಕಾರಣ. ಉಪನಿಷತ್ತು, ವೇದಗಳು ಹಾಗೂ ಆತ್ಮಜ್ಞಾನವನ್ನು ವಿದೇಶಗಳಲ್ಲಿ ಬೋಧಿಸಿದ ಮೊದಲಿಗರು ವಿವೇಕಾನಂದರು.
ಎಸ್.ಬಿ.ನಿತ್ಯಾನಂದ, ಮೈಸೂರಿನ ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಸಂಸ್ಥಾಪಕ