Advertisement

ಪಾಲಿಕೆಯಿಂದ ಅನಧಿಕೃತ ಡಬ್ಬಾ ಅಂಗಡಿ ತೆರವು

08:50 PM Mar 05, 2021 | Team Udayavani |

ಹುಬ್ಬಳ್ಳಿ: ಇಲ್ಲಿನ ದುರ್ಗದ ಬಯಲು ಹಾಗೂ ಕಲಾದಗಿ ಓಣಿಯಲ್ಲಿ ರಸ್ತೆಸಂಚಾರಕ್ಕೆ ತೊಂದರೆಯಾಗುತ್ತಿದ್ದ ಅನಧಿಕೃತ ಡಬ್ಬಾ ಅಂಗಡಿಗಳನ್ನು ಪೊಲೀಸರ ಸಹಕಾರದೊಂದಿಗೆ ಮಹಾನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.

Advertisement

ಡಬ್ಬಾ ಅಂಗಡಿಗಳನ್ನುತೆರವುಗೊಳಿಸಿದರಲ್ಲದೇ ಯಾವುದೇ ಕಾರಣಕ್ಕೂ ರಸ್ತೆ ಮೇಲೆ ಡಬ್ಬಾ ಅಂಗಡಿ ಇಡದಂತೆ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿದರು. ಕೆಲ ಅಂಗಡಿಗಳಮಾಲೀಕರು ಬಾರದ ಹಿನ್ನೆಲೆಯಲ್ಲಿ ಕೆಲ ಡಬ್ಬಾಗಳನ್ನು ವಶಕ್ಕೆ ಪಡೆದರು. ದುರ್ಗದ ಬಯಲಿನ ಕಾರುಪಾರ್ಕಿಂಗ್‌ ಸ್ಥಳದಲ್ಲಿದ್ದ ಚಪ್ಪಲಿ ಹಾಗೂ ತಿಂಡಿ-ತಿನಿಸುಗಳಅಂಗಡಿಗಳನ್ನು ತೆರವುಗೊಳಿಸಿದರು.ಮುಂದಿನ ದಿನಗಳಲ್ಲಿ ಮತ್ತೆ ಅನಧಿಕೃತವಾಗಿ ಡಬ್ಬಾ ಅಂಗಡಿಗಳನ್ನುಇಟ್ಟರೆ ಮುಲಾಜಿಯಿಲ್ಲದೆ ಜಪ್ತಿ ಮಾಡುವುದಾಗಿ ಪಾಲಿಕೆ ಅ ಧಿಕಾರಿಗಳು ಎಚ್ಚರಿಕೆ ನೀಡಿದರು.

ಪಾಲಿಕೆ ಜಾಗ ಹಾಗೂ ರಸ್ತೆಅತಿಕ್ರಮಣ ಮಾಡಿ ಡಬ್ಬಾಅಂಗಡಿಗಳನ್ನು ಇಟ್ಟುಕೊಂಡ ಕಾರಣಕ್ಕೆನೋಟಿಸ್‌ ಕೊಡುವ ಅಗತ್ಯವಿಲ್ಲ .ಸ್ವತ್ಛತೆ ಕಾಪಾಡುತ್ತಿಲ್ಲವೆಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ವ್ಯಾಪಾರಿಗಳ ಆಕ್ಷೇಪ: ಕಾರ್ಯಾಚರಣೆಗೆವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.ಕಳೆದ 35-40 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು, ಇಲ್ಲಿಯವರೆಗೆ ಯಾರೂಸಮಸ್ಯೆ ಮಾಡಿರಲಿಲ್ಲ. ಆದರೆ ಪಾಲಿಕೆ ಸಿಬ್ಬಂದಿ ಏಕಾಏಕಿ ಬಂದು ಡಬ್ಬಾಅಂಗಡಿಗಳನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕನಿಷ್ಠ ಪಕ್ಷ ನೋಟಿಸ್‌ನೀಡಬಹುದಿತ್ತು. ಇದಾವುದನ್ನುಮಾಡದೆ ನಮ್ಮ ಹೊಟ್ಟೆ ಮೇಲೆ ಕಲ್ಲಾಕುವ ಕೆಲಸಕ್ಕೆ ಪಾಲಿಕೆ ಅಧಿ ಕಾರಿಗಳು ಮುಂದಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳೀಯ ವಾಣಿಜ್ಯ ಕಟ್ಟಡದಮಾಲೀಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಇದೇ ವ್ಯಾಪಾರದ ಮೇಲೆ ಸಾಲಮಾಡಲಾಗಿದೆ. ಇದು ತಿಂಡಿ ತಿನಿಸುಗಳಪ್ರದೇಶವಾಗಿದ್ದು, ಯಾವ ಅ ಧಿಕಾರಿಗಳುಇಲ್ಲಿಯವರೆಗೆ ಯಾವುದೇ ಸಮಸ್ಯೆಮಾಡಿರಲಿಲ್ಲ. ಇದೀಗ ಪಾಲಿಕೆ ಸಿಬ್ಬಂದಿಏಕಾಏಕಿ ತೆರವುಗೊಳಿಸುತ್ತಿದ್ದಾರೆಂದುವ್ಯಾಪಾರಿಗಳು ಅಸಮಾಧಾನವ್ಯಕ್ತಪಡಿಸಿದರು.ಈ 35 ಅಂಗಡಿಗಳನ್ನು ನಂಬಿಸುಮಾರು 200 ಹೆಚ್ಚು ಜನರು ಕೆಲಸಮಾಡುತ್ತಿದ್ದಾರೆ. ಹಲವು ಕುಟುಂಬಗಳುಇದೇ ಉದ್ಯೋಗ ಅವಲಂಬಿಸಿವೆ.ಕೇಂದ್ರ ಸರಕಾರ ಒಂದೆಡೆ ಬೀದಿಬದಿವ್ಯಾಪಾರಿಗಳಿಗೆ ಉತ್ತೇಜನ ನೀಡಲುಸಾಲಾ ಇನ್ನಿತರೆ ಸೌಲಭ್ಯ ನೀಡುತ್ತಿದೆ.ಆದರೆ ಇಲ್ಲಿನ ಪಾಲಿಕೆಯವರು ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವಕೆಲಸ ಮಾಡುತ್ತಿದ್ದಾರೆಂದುವ್ಯಾಪಾರಿಗಳು ಅಸಮಾಧಾನವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next