Advertisement
ಬಹುಪಯೋಗಿ ಕಾರು ನಿಲುಗಡೆ ಕಟ್ಟಡ ನಿರ್ಮಾಣ ಕಾರ್ಯ ಆರಂಭಶೂರತನತೋರಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಕಟ್ಟಡ ನಿರ್ಮಾಣಕ್ಕಾಗಿ ದೊಡ್ಡ ತಗ್ಗು ತೆಗೆಯಲಾಗಿದ್ದು,ಅದಕ್ಕೆ ಹೊಂದಿಕೊಂಡೇ ಹುಬ್ಬಳ್ಳಿ-ಹೊಸಪೇಟೆಹೆದ್ದಾರಿ ಇದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಾಮಗಾರಿ ಸ್ಥಳದಲ್ಲಿ ಸುತ್ತಲೂತಗಡುಗಳನ್ನು ನಿಲ್ಲಿಸಿದ್ದು ಬಿಟ್ಟರೆ ಹೆಚ್ಚಿನ ಸುರಕ್ಷತೆ ಕ್ರಮ ಇಲ್ಲವಾಗಿದ್ದು, ಯಾವುದಾದರೂ ವಾಹನನಿಯಂತ್ರಣ ಕಳೆದುಕೊಂಡು ತಗ್ಗಿಗೆ ಬಿದ್ದರೆ ಆಗುವ ಅನಾಹುತ ದೊಡ್ಡ ಮಟ್ಟದ್ದಾಗಿಯೇ ಇರುತ್ತದೆ.
Related Articles
Advertisement
ಯೋಜನೆಯ ಶಂಕುಸ್ಥಾಪನೆ ಸಂದರ್ಭದಲ್ಲಿ ಗುತ್ತಿಗೆದಾರರು 24 ತಿಂಗಳು ಅಲ್ಲ 18 ತಿಂಗಳಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಘೋಷಿಸಿದ್ದರು. ಆದರೆ, ಸರಿಸುಮಾರು ಒಂದು ವರ್ಷ ಎಂಟು ತಿಂಗಳು ಕಳೆಯುತ್ತ ಬಂದರೂ, 20 ಅಡಿಗಿಂತ ಹೆಚ್ಚಿನ ಆಳದ ತಗ್ಗು ತೆಗೆದು, ಮಣ್ಣು ಮಾರಾಟವಾಗಿದ್ದು ಬಿಟ್ಟರೆ ಬೇರಾವ ಕಾಮಗಾರಿ ಪ್ರಗತಿ ಆದಂತೆ ಕಾಣುತ್ತಿಲ್ಲ. ಕಾಮಗಾರಿ ಮುಂದುವರಿಕೆಗೆ ಗುತ್ತಿಗೆದಾರರುಆಸಕ್ತಿ ತೋರುತ್ತಿಲ್ಲ ಎಂಬ ವಾದ ಒಂದು ಕಡೆಯಾದರೆ, ಯೋಜನೆಗೆ ಸಂಬಂಧಿಸಿದಂತೆ ಅಗತ್ಯವಿನ್ಯಾಸ ನೀಡುವಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಇಂಜಿನಿಯರ್‌ಗಳು ಉತ್ಸುಕತೆ ತೋರುತ್ತಿಲ್ಲವೆಂಬ ಆರೋಪವೂ ಕೇಳಿ ಬರುತ್ತಿದೆ.
ಪಾಲಿಕೆಗೆ 63ಲಕ್ಷ ರೂ. ಆದಾಯ: ಬಹುಪಯೋಗಿ ಕಾರು ನಿಲುಗಡೆ ಕಟ್ಟಡದ ಬೇಸ್ ಮೆಂಟ್‌ನಲ್ಲಿ ಮೂರು ಮಹಡಿ ಸೇರಿದಂತೆ ಒಟ್ಟು ಐದು ಅಂತಸ್ತಿನ ಕಟ್ಟಡ ಆಗಿದೆ ಎನ್ನಲಾಗುತ್ತಿದ್ದು, ಇದರಲ್ಲಿ ಸುಮಾರು 375 ಕಾರುಗಳು ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅದೇ ರೀತಿ ವಿವಿಧ ವಾಣಿಜ್ಯ ಕಟ್ಟಡಗಳು ಸೇರಿ ದಂತೆ ಮಾಲ್‌ಗಳು ಸಹ ಇದರಲ್ಲಿ ಬರುತ್ತವೆ. ಕಟ್ಟಡ ನಿರ್ಮಾಣ ಹಾಗೂ ನಿರ್ವಹಣೆಗೆ ಗುತ್ತಿಗೆದಾರರಿಗೆ 30 ವರ್ಷಗಳ ಲೀಸ್ ನೀಡಲಾಗಿದೆ.
ಕಟ್ಟಡ ಪೂರ್ಣಗೊಂಡ ನಂತರ ಕಟ್ಟಡದಲ್ಲಿ ವಾಹನ ನಿಲುಗಡೆ ಶುಲ್ಕ ಹಾಗೂ ಮಾಲ್ ಇನ್ನಿತರೆವಾಣಿಜ್ಯ ಕಟ್ಟಡಗಳಿಂದ ಬರುವ ಆದಾಯದಲ್ಲಿ ಮಹಾನಗರ ಪಾಲಿಕೆಗೆ ವಾರ್ಷಿಕ 63ಲಕ್ಷ ರೂ.ಗಳನ್ನು ನೀಡಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಶೇ.20 ದರ ಹೆಚ್ಚಳದ ಆಧಾರದಲ್ಲಿ ಪಾಲಿಕೆಗೆ ಹಣ ನೀಡಬೇಕಿದೆ. ಉಳಿದ ಆದಾಯವನ್ನು ಗುತ್ತಿಗೆದಾರರು ಪಡೆಯಬಹುದಾಗಿದೆ.
ಅಂದುಕೊಂಡಂತೆ ಯೋಜನೆ ಕಾಮಗಾರಿ ಕೈಗೊಂಡಿದ್ದರೆ, 2021ರ ಫೆಬ್ರವರಿ ವೇಳೆಗೆ ಬಹು ಪಯೋಗಿ ಕಾರು ನಿಲುಗಡೆ ಕಟ್ಟಡ ಉದ್ಘಾಟನೆಗೊಂಡು, ಮಾರ್ಚ್‌ನಿಂದ ಪಾಲಿಕೆಗೆ ಆದಾಯ ಶುರುವಾಗಬೇಕಿತ್ತು. ಫೆಬ್ರವರಿ ಬರಲು ಇನ್ನು ನಾಲ್ಕು ತಿಂಗಳು ಮಾತ್ರ ಬಾಕಿ ಇದ್ದರೂ, ತಗ್ಗು ತೆಗೆದಿದ್ದು ಬಿಟ್ಟರೆ ಬೇರೆ ಕಾಮಗಾರಿ ಆರಂಭವಾಗಿಲ್ಲ.
ಅನಾಹುತಕ್ಕೂ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ : ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಮಳೆ ನೀರು ಸಂಗ್ರಹಕ್ಕೆಂದು ತೆಗೆದಿದ್ದ ಗುಂಡಿ ಕಾಮಗಾರಿಗೆ ಸೂಕ್ತ ಭದ್ರತೆ ಇಲ್ಲದೆ ಕಾರಣ ಆಟವಾಡಲು ತೆರಳಿದ್ದ ಮೂವರು ಮಕ್ಕಳು ಗುಂಡಿಗೆ ಬಿದ್ದಿದ್ದರಾದರೂ, ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದ್ದು, ಒಬ್ಬ ಬಾಲಕಿ ಮೃತಪಟ್ಟಿದ್ದಳು. ಆದರೆ, ಕೋರ್ಟ್ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಬಹುಪಯೋಗಿ ಕಾರು ನಿಲುಗಡೆ ಕಟ್ಟಡ ಜಾಗದಲ್ಲಿ ಆಳವಾದ ತಗ್ಗು ತೆಗೆಯಲಾಗಿದ್ದು, ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲವಾಗಿದೆ. ತಡರಾತ್ರಿ ವೇಳೆ ಇಲ್ಲವೆ ಬೆಳಗಿನ ವೇಳೆ ವಾಹನ ಒಂದಿಷ್ಟು ಲಯ ತಪ್ಪಿ ಆಳವಾದ ತಗ್ಗಿಗೆ ಬಿದ್ದರೆ ದೊಡ್ಡ ಅನಾಹುತವೇ ಘಟಿಸಲಿದ್ದು, ಕಾಮಗಾರಿ ಆರಂಭಕ್ಕೆ ಇನ್ನಷ್ಟು ಭದ್ರತಾ ಕ್ರಮಕ್ಕೆ ಸಂಬಂಧಿಸಿದವರು ಮುಂದಾಗಬೇಕಿದೆ.
-ಅಮರೇಗೌಡ ಗೋನವಾರ