Advertisement

ತಿಂಗಳೊಳಗೆ ಕಲಾಮಂದಿರ ಉದ್ಘಾಟನೆ

11:13 AM Jan 09, 2019 | Team Udayavani |

ಹುಬ್ಬಳ್ಳಿ: ಒಂದು ತಿಂಗಳಲ್ಲಿ ನವೀಕೃತ ಸವಾಯಿ ಗಂಧರ್ವ ಕಲಾಮಂದಿರವನ್ನು ಉದ್ಘಾಟಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಕಲಾಮಂದಿರದ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಪೇವರ್ ಕಾರ್ಯ ಬಾಕಿಯಿದ್ದು, ಅದು ಪೂರ್ಣಗೊಂಡ ನಂತರ ಇನ್ನೊಂದು ತಿಂಗಳಲ್ಲಿ ಉದ್ಘಾಟಿಸಲಾಗುವುದು ಎಂದರು.

1975ರಲ್ಲಿ ಉದ್ಘಾಟನೆಗೊಂಡ ಕಲಾಮಂದಿರವನ್ನು ನವೀಕರಿಸಲಾಗಿದೆ. ಆದರೆ ಸರಕಾರ ಸರಿಯಾಗಿ ಅನುದಾನ ನೀಡದ್ದರಿಂದ ಕಾಮಗಾರಿ ವಿಳಂಬವಾಗಿದೆ. ಮಹಾನಗರ ಪಾಲಿಕೆ 1.80 ಕೋಟಿ ರೂ. ಅನುದಾನ ನೀಡಿದ್ದು, ಒಟ್ಟು 5.30 ಕೋಟಿ ಮೊತ್ತದಲ್ಲಿ ಕಲಾಮಂದಿರ ನವೀಕರಿಸಲಾಗಿದೆ. ಎಂದು ತಿಳಿಸಿದರು

ಧ್ವನಿವರ್ಧಕ ವ್ಯವಸ್ಥೆ ನವೀಕರಿಸಲಾಗಿದೆ. ವೇದಿಕೆಯಲ್ಲಿ ಸ್ಕ್ರೀನ್‌ ಅಳವಡಿಸಲಾಗಿದ್ದು, ಇಲ್ಲಿ ಪ್ರಾಜೆಕ್ಟರ್‌ ಮೂಲಕ ಚಲನಚಿತ್ರಗಳನ್ನು ಪ್ರದರ್ಶಿಸಬಹುದಾಗಿದೆ. 2 ವರ್ಷಗಳ ಹಿಂದೆಯೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ವಿಳಂಬವಾಗಿದೆ. ಸರಕಾರ ಗುತ್ತಿಗೆದಾರರಿಗೆ ಹಣವನ್ನು ಕೂಡಲೇ ಪಾವತಿಸಬೇಕು. ಈ ದಿಸೆಯಲ್ಲಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ ಎಂದರು.

ಇನ್ನೊಂದು ತಿಂಗಳಲ್ಲಿ ಕನ್ನಡ ಭವನ ಸಿದ್ಧ:
ಡಾ| ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ಆಸನಗಳ ವ್ಯವಸ್ಥೆ ಬದಲಾಯಿಸುವ ಕಾರ್ಯ ನಡೆಯುತ್ತಿದ್ದು, ಇನ್ನೊಂದು ತಿಂಗಳಲ್ಲಿ ಭವನ ಸಿದ್ಧಗೊಳ್ಳಲಿದೆ. ಕನ್ನಡ ಭವನ ಬಂದ್‌ ಮಾಡಿ 3 ತಿಂಗಳು ಗತಿಸಿವೆ. ಕನ್ನಡ ಭವನ ಹಾಗೂ ಸವಾಯಿ ಗಂಧರ್ವ ಕಲಾ ಮಂದಿರದ ನಿರ್ವಹಣೆಗೆ ಸರಕಾರ ಆದ್ಯತೆ ನೀಡಬೇಕು ಎಂದು ಶೆಟ್ಟರ ಹೇಳಿದರು.

Advertisement

ಟೌನ್‌ ಹಾಲ್‌ 100 ವರ್ಷ ಹಳೆಯ ಕಟ್ಟಡವಾಗಿದ್ದು, ಅದು ಹುಬ್ಬಳ್ಳಿಯ ಹಳೆಯ ಕಟ್ಟಡಗಳಲ್ಲೊಂದಾಗಿದೆ. ಅದನ್ನು ನವೀಕರಿಸಲಾಗುವುದು ಎಂದು ತಿಳಿಸಿದರು. ಪಾಲಿಕೆಯ ಮಳಿಗೆಗಳನ್ನು ಸಬ್‌ಲೀಸ್‌ ನೀಡಿದ ಸಮೀಕ್ಷೆ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಸಭೆ ಕರೆದು ಸಬ್‌ಲೀಸ್‌ ಮಳಿಗೆಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಮಹಾಪೌರ ಸುಧೀರ ಸರಾಫ‌, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಲಕ್ಷ್ಮೀ ಉಪ್ಪಾರ, ಉಮೇಶ ಕೌಜಗೇರಿ, ಜಿಲ್ಲಾಧಿಕಾರಿ ದೀಪಾ ಚೋಳನ್‌, ಪಾಲಿಕೆ ಆಯುಕ್ತ ಶಕೀಲ್‌ ಅಹ್ಮದ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next