Advertisement

Udupi: ನಾಳೆ ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

10:35 AM May 09, 2024 | Team Udayavani |

ಉಡುಪಿ: ನಗರದ ಕವಿ ಮುದ್ದಣ ಮಾರ್ಗದ ಸನಿಹದಲ್ಲಿರುವ ಶ್ರೀ ಭಗವಾನ್‌ ನಿತ್ಯಾನಂದ ಮಂದಿರ ಮಠದ ಮೊದಲ ಮಹಡಿ ಯಲ್ಲಿ ಸಂಪ್ರದಾಯದಂತೆ ಪ್ರತೀ ಗುರುವಾರ ನಡೆಯುತ್ತಿರುವ ಬಾಲ ಭೋಜನ, ಅನ್ನದಾನ ಸೇವೆಗಳಿಗೆ ಅನುಕೂಲವಾಗಲು ನಿರ್ಮಿಸಲಾದ ಬಾಲಭೋಜನಾಲಯ ಮತ್ತು ಧ್ಯಾನ ಮಂದಿರದ ಲೋಕಾರ್ಪಣೆ ಮೇ 10ರ ಬೆಳಗ್ಗೆ 9ಕ್ಕೆ ನಡೆಯಲಿದೆ.

Advertisement

ಬೆಳಗ್ಗೆ 8.30ಕ್ಕೆ ಗಣಪತಿ ಹೋಮ, 9.30ರಿಂದ ಮಕ್ಕಳ ಕುಣಿತ ಭಜನ ಸ್ಪರ್ಧೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 12.30ರಿಂದ ಅನ್ನಸಂತರ್ಪಣೆ ಜರಗಲಿದೆ. ಸಂಜೆ 6ರಿಂದ ನಡೆಯಲಿ ರುವ ಧಾರ್ಮಿಕ ಸಭೆಯಲ್ಲಿ ಬಂಟ್ವಾಳ ಮಾಣಿಲ ಶ್ರೀಧಾಮದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು.

ಬೈಲಹೊಂಗಲ ಬೇವಿನಕೊಪ್ಪ ಆನಂದಾಶ್ರಮದ ಶ್ರೀ ವಿಜಯಾನಂದ ಸ್ವಾಮೀಜಿ ಶುಭಾ ಶಂಸನೆ ನೀಡಲಿದ್ದಾರೆ. ಮುಂಬಯಿ ಉದ್ಯಮಿ ಕೆ.ಕೆ. ಆವರ್ಶೇಕರ್‌ ಅಧ್ಯಕ್ಷತೆ ವಹಿಸುವರು. ಮುಂಬಯಿ ಉದ್ಯಮಿ ಸುರೇಂದ್ರ ಕಲ್ಯಾಣಪುರ, ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಭಾಗವಹಿಸಲಿದ್ದಾರೆ.

ಭಜನೆ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ 9 ಮಂದಿಯನ್ನು ಸಮ್ಮಾನಿಸಲಾಗುವುದು ಎಂದು ಮಂದಿರ ಮಠದ ಮ್ಯಾನೇಜಿಂಗ್‌ ಟ್ರಸ್ಟಿ ಕೆ.ಕೆ. ಆವರ್ಶೇಕರ್‌ ಮುಂಬಯಿ, ಕಾಂಞಂಗಾಡಿನ ವಿದ್ಯಾ ಸಂಸ್ಥೆಯ ಚೇರ್‌ಮನ್‌ ಕೆ. ದಿವಾಕರ ಶೆಟ್ಟಿ ತೋಟದಮನೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next