Advertisement

ಹುವಾವೇ ಬ್ಯಾಂಡ್‍ 6 ಭಾರತದಲ್ಲಿ ಬಿಡುಗಡೆ

06:07 PM Jul 16, 2021 | Team Udayavani |

ನವದೆಹಲಿ: ಪ್ರಸಿದ್ಧ ಹುವಾವೇ ಕಂಪೆನಿ ಸ್ಮಾರ್ಟ್‍ ಬ್ಯಾಂಡ್‍ ಗಳಲ್ಲಿ ಉನ್ನತ ತಂತ್ರಜ್ಞಾನಗಳನ್ನು ನೀಡುವಲ್ಲಿ ಹೆಸರಾಗಿದ್ದು, ತನ್ನ ಹೊಸ ಉತ್ಪನ್ನ ಹುವಾವೇ ಬ್ಯಾಂಡ್‍ 6 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ಆರೋಗ್ಯ ಮತ್ತು ಫಿಟ್‌ನೆಸ್‍ ನಿರ್ವಹಣೆ, ವಿನ್ಯಾಸ ಮತ್ತು ಬ್ಯಾಟರಿ ಕಾಲಾವಧಿಯ ದೃಷ್ಟಿಯಿಂದ ಸ್ಮಾರ್ಟ್ ಬ್ಯಾಂಡ್‌ನ ಬೆಲೆಯಲ್ಲಿ ಸ್ಮಾರ್ಟ್ ವಾಚ್ ತರಹದ ಅನುಭವವನ್ನು ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.
ಆರೋಗ್ಯ ಪರಿವೀಕ್ಷಣೆಯ ವೈಶಿಷ್ಟ್ಯಗಳು ಸ್ಮಾರ್ಟ್ ಬ್ಯಾಂಡ್ ಬಳಕೆದಾರರಿಗೆ ಅತ್ಯಂತ ಜನಪ್ರಿಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಹುವಾವೇ TruSeenTM 4.0 ಮತ್ತು ಹೊಸ ಸ್ಮಾರ್ಟ್ ಪವರ್-ಸೇವಿಂಗ್ ಅಲ್ಗಾರಿದಮ್ ಅನ್ನು ಆಧರಿಸಿದ ಹಾರ್ಡ್‌ವೇರ್ ಮಾಡ್ಯೂಲ್‌ ಹೊಂದಿದೆ.

ಪೂರ್ತಿ ದಿನದ SpO2 ಪರಿವೀಕ್ಷಣೆಯನ್ನು ಬೆಂಬಲಿಸುತ್ತದೆ. ಇದು ಬಳಕೆದಾರರ ಆರೋಗ್ಯವನ್ನು ಪರಿವೀಕ್ಷಣೆ ಮಾಡುತ್ತದೆ ಮತ್ತು ರಕ್ತದ ಆಮ್ಲಜನಕದ ಮಟ್ಟವು ಕಡಿಮೆಯಾದಾಗ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಮೂಲಕ ತ್ವರಿತ ಕ್ರಮ ತೆಗೆದುಕೊಳ್ಳಲು ಮತ್ತು ಅವರ ಆರೋಗ್ಯದ ಬಗ್ಗೆ ಹೆಚ್ಚು ಮುಂಜಾಗ್ರತೆಯಾಗಿ ಕಾಳಜಿವಹಿಸಲು ಸಹಾಯ ಮಾಡುತ್ತದೆ. ಇದು ನಿರಂತರ, ವಾಸ್ತವಿಕ ಮತ್ತು ನಿಖರವಾದ ಹೃದಯ ಬಡಿತ, ನಿದ್ರೆ ಮತ್ತು ಒತ್ತಡದ ಪರಿವೀಕ್ಷಣೆಯನ್ನು ಸಹ ಒದಗಿಸುತ್ತದೆ. ವಿಶ್ರಾಂತ ಹೃದಯ ಬಡಿತ ತುಂಬಾ ಹೆಚ್ಚಿದ್ದರೆ ಅಥವಾ ತುಂಬಾ ಕಡಿಮೆಯಾಗಿದ್ದರೆ ಅದು ಬಳಕೆದಾರರನ್ನು ಎಚ್ಚರಿಸುತ್ತದೆ.

1.47-ಇಂಚಿನ, ಶೇ. 64 ಸ್ಕ್ರೀನ್ ಟು ಬಾಡಿ ಅನುಪಾತದೊಂದಿಗೆ AMOLED ಪೂರ್ಣ-ವೀಕ್ಷಣಾ ಡಿಸ್‍ ಪ್ಲೇ ಅನ್ನು ಹೊಂದಿರುವ ಹುವಾವೇ ಮೊದಲ ಸ್ಮಾರ್ಟ್ ಬ್ಯಾಂಡ್ ಆಗಿದೆ. ಅಂದರೆ ಇದು ಸ್ಟೈಲಿಶ್ ನೋಟವನ್ನು ಉಳಿಸಿಕೊಂಡೇ ಹೆಚ್ಚಿನ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಹುವಾವೇ ಬ್ಯಾಂಡ್ 6 ಇದು 1.47-ಇಂಚಿನ AMOLED ಪೂರ್ಣ ವೀಕ್ಷಣಾ ಡಿಸ್ ಪ್ಲೇ ಸ್ಪಷ್ಟ ತೋರಿಕೆಗಾಗಿ 194 * 368 ರೆಸಲ್ಯೂಶನ್ ಮತ್ತು 282PPI ಯನ್ನು ಹೊಂದಿದೆ. ವರ್ಣರಂಜಿತ ಪರದೆಯು ಬಳಕೆದಾರರಿಗೆ ಹೆಚ್ಚಿನ ಮಾಹಿತಿಯ ಸ್ಪಷ್ಟತೆಯನ್ನು ಒದಗಿಸುತ್ತದೆ ಮತ್ತು ಹೆಚ್ಚು ಬಳಕೆದಾರ ಸ್ನೇಹಿ ಡಿಸ್ಪ್ಲೇ ಅನುಪಾತದಲ್ಲಿ ವ್ಯಾಯಾಮ ಮತ್ತು ಆರೋಗ್ಯದ ಡೇಟಾವನ್ನು ನೀಡುತ್ತದೆ. ಸ್ಮಾರ್ಟ್‌ಫೋನ್ ಟಚ್‌ಸ್ಕ್ರೀನ್ ಬಳಸುವಂತೆಯೇ ಬಳಕೆದಾರರು ಸುಲಭವಾಗಿ ಮೇಲಕ್ಕೆ ಮತ್ತು ಕೆಳಕ್ಕೆ, ಎಡ ಮತ್ತು ಬಲಕ್ಕೆ ಸ್ವೈಪ್ ಮಾಡಬಹುದು.

ಎರಡು ವಾರಗಳ ಬ್ಯಾಟರಿ ಬಾಳಿಕೆ

Advertisement

ಹೆಚ್ಚಿನ-ದಕ್ಷತೆಯ ಚಿಪ್‌ಸೆಟ್ ಮತ್ತು ಸ್ಮಾರ್ಟ್ ಪವರ್-ಸೇವಿಂಗ್ ಅಲ್ಗೋರಿದಮ್ ಬೆಂಬಲಿತವಾಗಿರುವ HUAWEI ಬ್ಯಾಂಡ್ 6 ನಿರಂತರ ಹೃದಯ ಬಡಿತ ಮತ್ತು ಪರಿಪೂರ್ಣ ನಿದ್ರೆಯ ಪರಿವೀಕ್ಷಣೆಯನ್ನು 14 ದಿನಗಳ ಬ್ಯಾಟರಿ ಕಾಲಾವಧಿಯೊಂದಿಗೆ ತಡೆರಹಿತವಾಗಿ ಮಾಡಲು ಶಕ್ತವಾಗಿದೆ. ಇದಲ್ಲದೇ,ಹುವಾವೇ ಬ್ಯಾಂಡ್ 6 ಇದು ಮ್ಯಾಗ್ನೆಟಿಕ್ ಚಾರ್ಜರ್ ಮೂಲಕ ವೇಗವಾಗಿ ಜಾರ್ಜ್ ಆಗುತ್ತದೆ. ಐದು ನಿಮಿಷಗಳಷ್ಟು ಕಾಲ ಚಾರ್ಜ್ ಮಾಡಲಾದ ಸ್ಮಾರ್ಟ್ ಬ್ಯಾಂಡ್ ಎರಡು ದಿನಗಳವರೆಗೆ ಕಾರ್ಯ ನಿರ್ವಹಿಸುವಂತೆ ತನ್ನ ಚಾರ್ಜ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಕೇವಲ 18 ಗ್ರಾಂ ತೂಕ ಹೊಂದಿದೆ.

HUAWEI ಬ್ಯಾಂಡ್ 6 ರ ಫಿಟ್‌ನೆಸ್ ವೈಶಿಷ್ಟ್ಯಗಳು ಸಹ ಬಳಕೆದಾರರಿಗೆ ಸಂಪೂರ್ಣ ಹೊಸ ಅನುಭವವನ್ನು ತರುತ್ತವೆ. 96 ವರ್ಕ್ಔಟ್ ಮೋಡ್‌ಗಳಲ್ಲಿ ಒಳಾಂಗಣ ಮತ್ತು ಹೊರಾಂಗಣ ಓಟ, ಸೈಕ್ಲಿಂಗ್ ಮತ್ತು ಸ್ಕಿಪ್ಪಿಂಗ್‌ನಂತಹ 11 ವೃತ್ತಿಪರ ವ್ಯಾಯಾಮದ ವಿಧಗಳು ಮತ್ತು ಫಿಟ್‌ನೆಸ್, ಮತ್ತು ನೃತ್ಯ ಪ್ರಕಾರಗಳು ಸೇರಿದಂತೆ 85 ಕ್ಕೂ ಹೆಚ್ಚು ಕಸ್ಟಮೈಸ್ ಮಾಡಲಾದ ವಿಧಗಳು ಸೇರಿವೆ, ಇದು ವ್ಯಾಯಾಮ ಅಭ್ಯಾಸದ ವ್ಯಾಪಕ ವ್ಯಾಪ್ತಿಯನ್ನು ನೀಡುತ್ತದೆ. ಹೃದಯ ಬಡಿತದ ವ್ಯತ್ಯಾಸ ದತ್ತಾಂಶ ಮತ್ತು ವ್ಯಾಯಾಮ ದತ್ತಾಂಶದಂತಹ ಬಹು ಆಯಾಮದ ನಿಯತಾಂಕಗಳ ಆಧಾರದ ಮೇಲೆ ಬಳಕೆದಾರರ ವ್ಯಾಯಾಮ ಸಾಮರ್ಥ್ಯಗಳನ್ನು ಆಳವಾಗಿ ವಿಶ್ಲೇಷಿಸಲು HUAWEI TruSportTM ವೃತ್ತಿಪರ ವ್ಯಾಯಾಮ ಅಲ್ಗಾರಿದಮ್ ಅನ್ನು HUAWEI ಬ್ಯಾಂಡ್ 6 ಅಳವಡಿಸಿಕೊಂಡಿದೆ.

HUAWEI ಬ್ಯಾಂಡ್ 6 ಭಾರತದ ಗ್ರಾಹಕರಿಗೆ Amazon.in ನಲ್ಲಿ ಲಭ್ಯವಿದೆ. ಇದರ ದರ 4490 ರೂ. ಅಮೆಜಾನ್‍ ಪ್ರೈಮ್‍ ಡೇ ಸಮಯದಲ್ಲಿ ಮಾರಾಟದ ಸಮಯದಲ್ಲಿ ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಲಭ್ಯವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next