Advertisement

India Open 2024 badminton: ಸೆಮಿಫೈನಲ್‌ಗೆ ಎಚ್‌.ಎಸ್‌. ಪ್ರಣಯ್‌

11:44 PM Jan 19, 2024 | Team Udayavani |

ಹೊಸದಿಲ್ಲಿ: ಎಚ್‌.ಎಸ್‌. ಪ್ರಣಯ್‌ ಮೊದಲ ಬಾರಿಗೆ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಸೆಮಿಫೈನಲ್‌ ತಲುಪಿದ್ದಾರೆ. ಅವರು ಚೈನೀಸ್‌ ತೈಪೆಯ ವಾಂಗ್‌ ಝು ವೀ ವಿರುದ್ಧ 21-11, 17-21, 21-18 ಅಂತರದ ಗೆಲುವು ಸಾಧಿಸಿದರು

Advertisement

ಆದರೆ ಹಾಲಿ ಚಾಂಪಿಯನ್‌ ಹಾಗೂ ವಿಶ್ವದ ನಂ.1 ಆಟಗಾರ್ತಿ, ಕೊರಿಯಾದ ಆ್ಯನ್‌ ಸೆ ಯಂಗ್‌ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಹೊರಬಿದ್ದಿದ್ದಾರೆ.

ಶುಕ್ರವಾರದ ವನಿತಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯಾವಳಿಯ ವೇಳೆ ಮಂಡಿನೋವಿಗೆ ಸಿಲುಕಿದ 21 ವರ್ಷದ ಯಂಗ್‌ ಪಂದ್ಯವನ್ನು ತ್ಯಜಿಸಿದರು. ಸಿಂಗಾಪುರದ ಜಿಯಾ ಮಿನ್‌ ವಿರುದ್ಧ ಯಂಗ್‌ ಆಡುತ್ತಿದ್ದರು. ಆಗ 19-21, 0-3ರ ಹಿನ್ನಡೆಯಲ್ಲಿದ್ದರು. ಜಿಯಾ ಮಿನ್‌ ಕಳೆದ ವಾರವಷ್ಟೇ “ಮಲೇಷ್ಯಾ ಓಪನ್‌ ಸೂಪರ್‌ 1000′ ಕೂಟದ ಪ್ರಶಸ್ತಿಯನ್ನೆತ್ತಿದ್ದರು. ಇವರ ಸೆಮಿಫೈನಲ್‌ ಎದುರಾಳಿ, ಚೀನದ ಮಾಜಿ ನಂ.1 ಆಟಗಾರ್ತಿ ತೈ ಜು ಯಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next