ಮುಂಬಯಿ: ಕಠಿನ ಸ್ಪರ್ಧಿಗಳ ವಿರುದ್ಧ ಆಡುವಾಗ ಮಾನಸಿಕವಾಗಿ ಸಕಾರಾತ್ಮಕ ಬದಲಾವಣೆ ತರುವಲ್ಲಿ ಭಾರತದ ಸ್ಟಾರ್ ಆಟಗಾರ್ತಿಯರಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್ ಅವರ ಪಾಲು ಸಾಕಷ್ಟಿದೆ ಎಂದು ವಿಶ್ವ 11ನೇ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್. ಪ್ರಣಯ್ ಹೇಳಿದ್ದಾರೆ.
ಮುಂಬೈ ಜಿಮಾVನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಿಸಿಕೆ ಹಂಚಿಕೊಂಡ ಪ್ರಣಯ್, “ಎಲ್ಲಾ ಆಟಗಾರರ ನಡುವೆ ಬದಲಾಗಿರುವ ಒಂದು ವಿಚಾರವೆಂದರೆ ಗೆಲ್ಲುವ ನಂಬಿಕೆ. ಕಳೆದ ಐದಾರು ವರ್ಷಗಳಲ್ಲಿ ನಾನದನ್ನು ಗಮನಿಸಿದ್ದೇನೆ’ ಎಂದಿದ್ದಾರೆ.
ಸೈನಾ, ಸಿಂಧೂ ದೊಡ್ಡ ಟೂರ್ನಿಗಳಲ್ಲಿ ಗೆಲ್ಲಲಾರಂಭಿಸಿದಾಗ ಮತ್ತು ಚೈನೀಸ್ ಆಟಗಾರರನ್ನು ಸೋಲಿಸಲಾರಂಭಿಸಿದಾಗ ತನಗೆ ಸೇರಿದಂತೆ ಎಲ್ಲ ಆಟಗಾರರಿಗೂ ನಾಳೆ ನಾವೂ ಹೀಗೆಯೇ ಗೆಲ್ಲುತ್ತೇವೆ ಎಂಬ ಧೈರ್ಯ ಮೂಡುತ್ತಿತ್ತು ಎಂದಿರುವ ಪ್ರಣಯ್, “ನಾವು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಆಡಲಾರಂಭಿಸಿದ ದಿನಗಳಲ್ಲಿ ದೊಡ್ಡ ಆಟಗಾರರನ್ನು ನೋಡಿದಾಗೆಲ್ಲ ಗೆಲುವು ತುಂಬಾ ಕಷ್ಟ ಎಂದು ಭಾವಿಸುತ್ತಿದ್ದೆವು. ಆದರೆ ಈ ದಿನ ನಾವು ಎಷ್ಟೇ ಖ್ಯಾತ ಆಟಗಾರರ ವಿರುದ್ಧ ಸ್ಪರ್ಧೆಗಿಳಿಯುವಾಗಲೂ ಅಷ್ಟೇ ಆತ್ಮವಿಶ್ವಾಸದಲ್ಲಿರುತ್ತೇವೆ’ ಎಂದರು.
“ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಾಗ ನಾವು ನಮ್ಮ ಎದುರಾಳಿಗನ್ನು ಗೌರವಾದರಗಳಿಂದ ಕಾಣುತ್ತೇವೆ. ಯಾವತ್ತೂ ನಾನು ಈ ಖ್ಯಾತ ಆಟಗಾರರ ವಿರುದ್ಧ ಆಡುತ್ತಿದ್ದೇನೆ, ಈ ಸೂಪರ್ ಸೀರೀಸ್‌ನಲ್ಲಿ ಆಡುತ್ತಿದ್ದೇನೆ ಎಂದು ಬೀಗುವುದಿಲ್ಲÉ’ ಎಂದು ಪ್ರಣಯ್ ಹೇಳಿದರು.