Advertisement
ಈ ಇಬ್ಬರ ವಿಚಾರಣೆಗೆ ತನಿಖಾಧಿಕಾರಿ ನೇಮಿಸಲು ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು, ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾಗೆ ಪತ್ರ ಬರೆದಿವೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವಿಶೇಷ ಸಭೆ ಕರೆದು ತನಿಖಾಧಿಕಾರಿ ಮೇಮಿಸಲು ಸಾಧ್ಯವಿಲ್ಲ ಎಂದು ಖನ್ನಾ ಪ್ರತಿಕ್ರಿಯಿಸಿದ್ದಾರೆ.
ತರಬೇತುದಾರರನ್ನು ಆಯ್ಕೆ ಮಾಡುವಾಗ ಸಹ ಆಡಳಿತಾಧಿಕಾರಿ ಡಯಾನಾ ಎಡುಲ್ಜಿ ಮಾತನ್ನು ವಿನೋದ್ ರಾಯ್ ಕೇಳಿರಲಿಲ್ಲ. ಅದೇ ರೀತಿ ಇಲ್ಲೂ ಕೂಡ ರಾಯ್ ನಡೆದುಕೊಳ್ಳಲು ಸಾಧ್ಯವಿತ್ತು. ಆಧರೆ ಅವರು ಹಾಗೆ ಮಾಡಿಲ್ಲ ಎನ್ನುವುದು ಮೂಲಗಳ ಅಭಿಪ್ರಾಯ.
Related Articles
ಈ ಬಗ್ಗೆ ಬಿಸಿಸಿಐ ಆಡಳಿತಾಧಿಕಾರಿಗಳಿಗೆ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಪತ್ರ ಬರೆದಿದ್ದಾರೆ. “ಪ್ರಸ್ತುತ ಸಮಸ್ಯೆಯನ್ನು ಬಗೆಹರಿಸಲು ಬಿಸಿಸಿಐ ಪದಾಧಿಕಾರಿಗಳು ಮತ್ತು ಆಡಳಿತಾಧಿಕಾರಿಗಳ ನಡುವೆ ಸಭೆ ನಡೆಯಬೇಕು. ಹಾರ್ದಿಕ್ ಮತ್ತು ರಾಹುಲ್ ಮಾಡಿದ್ದು ಖಂಡಿತ ತಪ್ಪು. ಆದರೆ ಅವರಿಬ್ಬರನ್ನು ಕಾನೂನು ಉಲ್ಲಂ ಸಿದವರು ಎಂಬ ರೀತಿಯಲ್ಲಿ ನಡೆಸಿಕೊಳ್ಳುವುದು ಕೂಡ ತಪ್ಪು. ಅವರಿಬ್ಬರು ತಪ್ಪು ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಇಬ್ಬರೂ ಕ್ಷಮೆಯಾಚನೆ ಮಾಡಿದ್ದಾರೆ. ಭಾರತೀಯ ಕ್ರಿಕೆಟಿನ ಹಿತದೃಷ್ಟಿಯಿಂದ ಇಬ್ಬರ ಜೀವನವನ್ನು ಅತಂತ್ರದಲ್ಲಿಡಬಾರದು’ ಎಂದು ಆಗ್ರಹಿಸಿದ್ದಾರೆ.
Advertisement
ವಿಚಾರಣೆ ಮುಗಿಯುವವರೆಗೆ ಇಬ್ಬರನ್ನು ಮತ್ತೆ ಕ್ರಿಕೆಟ್ ಆಡಲು ಬಿಡಬೇಕು. ವಿಶ್ವಕಪ್ ಆರಂಭಕ್ಕೂ ಮುನ್ನ ಇಬ್ಬರಿಗೂ ಅಭ್ಯಾಸ ಅಗತ್ಯವಾಗಿದೆ. ಇಬ್ಬರಿಗೂ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಕೊಡಲೇಬೇಕು ಎಂದು ಖನ್ನಾ ಒತ್ತಾಯಿಸಿದ್ದಾರೆ.