ಗಂಗಾವತಿ; ಬಿಜೆಪಿ ಮಾಜಿ ಶಾಸಕ ಹಿರಿಯ ಮುಖಂಡ ಜಿ.ವೀರಪ್ಪ ಕೇಸರಟ್ಟಿಯ ನಿವಾಸಕ್ಕೆ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ್ ಭೇಟಿ ನೀಡಿ ವೀರಪ್ಪ ಹಾಗೂ ಅವರ ಪುತ್ರ ಜಿ. ಶ್ರೀಧರ ಜತೆಗೆ ಒಂದು ತಾಸಿಗೂ ಹೆಚ್ಚು ಗುಪ್ತವಾಗಿ ಚರ್ಚೆ ನಡೆಸಿದ್ದಾರೆ.
ಮುಂಬರುವ ಜಿ.ಪಂ. ತಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಇಬ್ಬರು ಮುಖಂಡರ ಭೇಟಿ ಕುತೂಹಲ ಮೂಡಿಸಿದೆ.
ಈ ಹಿಂದೆ ಗಂಗಾವತಿ ಎಪಿಎಂಸಿ ಅಧ್ಯಕ್ಷರಾಗಿದ್ದ ಜಿ.ವೀರಪ್ಪ ಅವರನ್ನು ಅವಿಶ್ವಾಸಗೊಳಿಸುವ ಸಂದರ್ಭದಲ್ಲಿ ಮಾಜಿ ಸಂಸದ ಎಚ್.ಜಿ.ರಾಮುಲು ಕೃಪಕಟಾಕ್ಷದಿಂದ ಐದು ವರ್ಷ ಅಧ್ಯಕ್ಷರಾಗಿ ನಂತರ ಕನಕಗಿರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದು ಶಾಸಕರಾಗಿದ್ದರು. ನಂತರ ಕನಕಗಿರಿ ಕ್ಷೇತ್ರ ಎಸ್ಸಿಯಾಗಿದ್ದರಿಂದ ರಾಜಕೀಯವಾಗಿ ನೆಪಥ್ಯಕ್ಕೆ ಸರಿದಿದ್ದಾರೆ. ಸದ್ಯ ಜೆಡಿಎಸ್ ನಲ್ಲಿರುವ ಎಚ್.ಆರ್.ಶ್ರೀನಾಥ ಹಾಗೂ ಬಿಜೆಪಿಯಲ್ಲಿರುವ ಜಿ.ವೀರಪ್ಪ ಒಂದಾಗಿ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆನ್ನಲಾಗಿದೆ.
ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 18648 ಸೋಂಕಿತರು ಗುಣಮುಖ; 7810 ಹೊಸ ಪ್ರಕರಣ ಪತ್ತೆ
ಸೌಜನ್ಯದ ಭೇಟಿ: ಮಾಜಿ ಸಂಸದ ಎಚ್.ಜಿ.ರಾಮುಲು ಹಾಗೂ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ್ ಜಿಲ್ಲೆಯ ಹಿರಿಯ ರಾಜಕೀಯ ಧುರೀಣರಾಗಿದ್ದು ಪಕ್ಷ ಬೇಧ ಮರೆತು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.ಇವತ್ತು ಶ್ರೀನಾಥ್ ಮನೆಗೆ ಆಗಮಿಸಿ ಕುಶಲೋಪರಿ ವಿಚಾರ ಮಾಡಿದ್ದಾರೆ. ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮಾಜಿ ಶಾಸಕ ಜಿ.ವೀರಪ್ಪ ಉದಯವಾಣಿ ತಿಳಿಸಿದ್ದಾರೆ