Advertisement

ಹೊಯ್ಸಳೇಶ್ವರ ದೇಗುಲಕ್ಕೆ ಹೆಚ್ಚಿದ ಪ್ರವಾಸಿಗರು

04:10 PM Aug 30, 2021 | Team Udayavani |

ಹಳೇಬೀಡು: ಕೊರೊನಾ ಭೀತಿಯಿಂದ ಭಯದಿಂದ ಕಳೆದ ಆರು ತಿಂಗಳುಗಳಿಂದ ವಿಶ್ವಭೂಪಟದಲ್ಲಿ ಹೆಸರು ಮಾಡಿರುವ ಹೊಯ್ಸಳೇಶ್ವರ ದೇವಾಲಯಕ್ಕೆ ಪ್ರವಾಸಿಗರು ಮುಖಮಾಡದೇ ಬಣಗುಡುತ್ತಿದ್ದ ಹೊಯ್ಸಳೇಶ್ವರ ದೇವಾಲಯಕ್ಕೆ ಪ್ರವಾಸಿಗರು ಆಗಮಿಸುತ್ತಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

Advertisement

ಹೊಯ್ಸಳರಕಾಲದಲ್ಲಿ ನಿರ್ಮಾಣವಾಗಿರುವ ಸುಂದರ ಸೂಕ್ಷ್ಮ ಕೆತ್ತನೆ ಹೊಂದಿರುವ ಶಿಲ್ಪಕಲಾ ಸೌಂದರ್ಯ ಸವಿಯಲು ದೇಶ ವಿದೇಶಗಳಿಂದ ಸಾವಿರಾರು ಮಂದಿ ಪ್ರವಾಸಿಗರುಆಗಮಿಸಿ, ಹೊಯ್ಸಳೇಶ್ವರ, ಕೇದಾರೇಶ್ವರ ದೇಗುಲ, ಜೈನಬಸದಿಗಳಿಗೆ ಬರುತ್ತಿದ್ದರು. ಆದರೆಕೊರೊನಾ ಮಹಾಮಾರಿಯಿಂದ ದೇವಾಲಯದ ಪ್ರವೇಶವನ್ನು ಪ್ರವಾಸೋಧ್ಯಮ ಇಲಾಖೆ ರದ್ದುಮಾಡಿತ್ತು. ಇತ್ತೀಚೆಗೆ ದೇಗುಲ ತೆರೆಯಲು ಅನುಮತಿ ಸರ್ಕಾರ ನೀಡಿದ್ದು, ಪ್ರವಾಸಿಗರು ದ್ವಿಗುಣಗೊಳ್ಳುತ್ತಿದ್ದಾರೆ.

ರಾಜ್ಯದ ಪ್ರವಾಸಿಗರೇ ಹೆಚ್ಚು: ಅಂತರಾಜ್ಯ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರುಕಡಿಮೆ ಸಂಖ್ಯೆಯಲ್ಲಿ ಆಗಮಿಸಿದರೆ ರಾಜ್ಯದೊಳಗಡೆ ಹಾಸನ ಜಿಲ್ಲೆಒಳಗೊಂಡಂತೆ ದಕ್ಷಿಣ ಕರ್ನಾಟಕ ಜಿಲ್ಲೆಗಳಾದ ಬೆಂಗಳೂರು,ಮಂಗಳೂರು, ಮೈಸೂರು, ಮಂಡ್ಯ, ರಾಮನಗರ,ಚಾಮರಾಜನಗರ, ಉಡುಪಿ, ಸೇರಿದಂತೆ ಹಲವು ಜಿಲ್ಲೆಗಳಿಂದನೂರಾರು ಪ್ರವಾಸಿಗರು ದೇವಾಲಯದ ವೀಕ್ಷಣೆಗೆಆಗಮಿಸುತ್ತಿರುವುದರಿಂದ ಪ್ರವಾಸೋದ್ಯ ಇಲಾಖೆಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿದೆ.

ಹಚ್ಚ ಹಸುರಿನ ಹೊರಾಂಗಣ: ಹಳೇಬೀಡಿನ ಹೊಯ್ಸಳೇಶ್ವರದೇವಾಲಯದ ಒಟ್ಟು ಸುಮಾರು 15 ಎಕ್ಟೇರ್‌ ಪ್ರದೇಶದವಿಶಾಲವಾದ ಉದ್ಯಾನವನ ಹೊಂದಿದ್ದು, ಮುಂಗಾರು ಮಳೆಸುರಿಯುತ್ತಿರುವ ಕಾರಣ ಇಡೀ ಉದ್ಯಾನವನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಈಉದ್ಯಾನವನದಲ್ಲಿರುವ ವಿವಿಧ ರೀತಿಯ ಸಾವಿರಾರು ಹೂಗಿಡಗಳು ದೇಗುಲದ ಮೆರಗನ್ನುಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next