Advertisement

ಆತ್ಮಹತ್ಯೆಗೆ ಯತ್ನ: ಸಿನಿಮೀಯ ರೀತಿಜೀವ ಉಳಿಸಿದ ಹೊಯ್ಸಳ ಸಿಬ್ಬಂದಿ

02:16 PM Mar 02, 2023 | Team Udayavani |

ಬೆಂಗಳೂರು: ಪುಲಕೇಶಿನಗರದಲ್ಲಿ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಸಿನಿಮೀಯ ರೀತಿಯಲ್ಲಿ ಹೊಯ್ಸಳ ಪೊಲೀಸರು ರಕ್ಷಣೆ ಮಾಡಿ ಸಾಹಸ ಮೆರೆದಿದ್ದಾರೆ.

Advertisement

ಪುಲಕೇಶಿನಗರದಲ್ಲಿ ಸುಮಾರು 30 ವರ್ಷದ ಮಹಿಳೆಯೊಬ್ಬರು ಕೌಟುಂಬಿಕ ಸಮಸ್ಯೆ ಹೊಂದಿ ಮಾನಸಿಕವಾಗಿ ನೊಂದಿದ್ದರು. ಫೆ.26ರಂದು ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಸಂಕಟ ತಾಳಲಾರದೇ ಚೀರಾಡಿದ್ದರು. ಮಹಿಳೆಯ ಕಿರುಚಾಟದ ಶಬ್ದ ಕೇಳಿದ ಸ್ಥಳೀಯರು ಮಹಿಳೆಯಿದ್ದ ಮನೆಗೆ ಹೋಗಲು ಯತ್ನಿಸಿದರೂ ಬಾಗಿಲು ಒಳಗಡೆಯಿಂದ ಲಾಕ್‌ ಆದ ಹಿನ್ನೆಲೆ ಸಾಧ್ಯವಾಗಿರಲಿಲ್ಲ.

ನಂತರ ಪುಲಕೇಶಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪುಲಕೇಶಿನಗರ ಠಾಣೆ ಇನ್‌ಸ್ಪೆಕ್ಟರ್‌ ವಿ.ಬಿ.ಕಿರಣ್‌ ಅವರು ಕರ್ತವ್ಯದಲ್ಲಿದ್ದ ಹೊಯ್ಸಳ ಗಸ್ತು ವಾಹನ ಸಿಬ್ಬಂದಿಗೆ ಸಂದೇಶ ರವಾನಿಸಿದ್ದರು. ಕೂಡಲೇ ಹೊಯ್ಸಳ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ಮನೆಗೆ ತೆರಳಿ ಬಾಗಿಲು ಒಡೆದು ಪೊಲೀಸ್‌ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತ ಹಿನ್ನೆಲೆಯಲ್ಲಿ ಸಾಯುವ ಹಂತ ತಲುಪಿದ್ದ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾಳೆ.

ಹೊಯ್ಸಳ ಸಿಬ್ಬಂದಿಗೆ ಪ್ರಶಂಸನಾ ಪತ್ರ : ಕಾರ್ಯಾಚರಣೆಯಲ್ಲಿ ಭಾಗಿಯಾದ ಮೂವರು ಪೊಲೀಸ್‌ ಸಿಬ್ಬಂದಿ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್‌ಸ್ಪೆಕ್ಟರ್‌ ವಿ.ಬಿ. ಕಿರಣ್‌, ಹೆಡ್‌ಕಾನ್‌ಸ್ಟೆàಬಲ್‌ ಸಿ.ಜಿ.ಪರಮೇಶ್ವರಪ್ಪ, ಸಬ್‌ ಇನ್‌ಸ್ಪೆಕ್ಟರ್‌ ದೊಡ್ಡ ಕೆ.ರೇವಣ್ಣ ಅವರಿಗೆ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾ ಶಂಕರ್‌ ಗುಳೇದ್‌ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next