Advertisement

ಹಳಿ ತಪ್ಪಿದ ಹೌರಾ –ಮುಂಬೈ ಗೀತಾಂಜಲಿ ಎಕ್ಸ್‌ಪ್ರಸ್‌ ರೈಲು

07:49 PM Mar 09, 2021 | Team Udayavani |

ಅಕೋಲಾ: ಹೌರಾ- ಮುಂಬೈ ಗೀತಾಂಜಲಿ ಎಕ್ಸ್‌ಪ್ರಸ್‌ ರೈಲು ಅಕೋಲಾ ಜಿಲ್ಲೆಯಲ್ಲಿ ಮಂಗಳವಾರ ಹಳಿ ತಪ್ಪಿದ್ದು, ಇದರಿಂದ ಆ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳಿಗೆ ತಡೆಯುಂಟಾಯಿತು.

Advertisement

ಬೋರ್ಗಾಂವ್‌ ಮಾಂಜು ಮತ್ತು ಕಟೇಪೂರ್ಣ ಸ್ಟೇಷನ್‌ ನಡುವೆ 11.15ರ ಸುಮಾರಿನಲ್ಲಿ ಈ ದುರಂತ ಸಂಭವಿಸಿದೆ. ರೈಲಿನ ಎಸ್‌ಎಲ್‌ಆರ್‌ ಕೋಚ್‌ ಹಳಿ ತಪ್ಪಿದ ಕಾರಣ, ರೈಲನ್ನು ಕೆಲಕಾಲ ನಿಲ್ಲಿಸಲಾಯಿತು.

ರೈಲ್ವೆ ಮತ್ತು ಪೊಲೀಸ್‌ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಘಟನೆ ಕುರಿತು ಪರಿಶೀಲಿಸಿ 2 ತಾಸುಗಳ ಬಳಿಕ ಹಳಿ ತಪ್ಪಿದ ರೈಲಿನ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಸಾವುನೋವು ವರದಿಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next