Advertisement
ಮೇವು ಉತ್ಪಾದನೆಗೂ ಹೈಡ್ರೋಫೋನಿಕ್ ಪದ್ಧತಿ ಬಂದಿದೆ. ಮಣ್ಣಿನ ಸಂಪರ್ಕ ಇಲ್ಲದ ಈ ಹೊಸ ಪದ್ಧತಿಯಿಂದ ರೈತರು ವರ್ಷಪೂರ್ತಿ ರಾಸುಗಳಿಗೆ ಹಸಿರು ಮೇವು ಬೆಳೆಯಬಹುದು. ಬರಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಮೊರೆಹೋಗಿದ್ದಾರೆ. ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಬೆಳಗಾವಿಯ ಗೋಕಾಕ್ ತಾಲೂಕಿನ ಕಾಶೀನಾಥ ಮಾಳಿ ಈ ಪದ್ಧತಿಯ ಪೂರ್ಣ ಮಾಹಿತಿ ನೀಡಿದರು.
ಆಗುತ್ತಿದೆ. ನಾನು ಈ ಪದ್ಧತಿಯನ್ನು ಕಲಿತು, ಆಸಕ್ತ ರೈತರ ಮನೆ ಅಥವಾ ಶೆಡ್‌ಗಳಿಗೆ ತೆರಳಿ ಅಳವಡಿಸಿ ಬರುತ್ತೇನೆ’ ಎಂದು ಕಾಶಿನಾಥ ಮಾಳಿ ತಿಳಿಸಿದರು. 6×8 ಅಡಿ ಜಾಗದಲ್ಲಿ 72 ಕ್ರೇಟ್‌ಗಳನ್ನು ಜೋಡಿಸಿ, ಅದರಲ್ಲಿ ದನಗಳಿಗೆ ಬೇಕಾದ ಮೇವು ತಯಾರಿಸ ಬಹುದು. ಒಂದು ದಿನಕ್ಕೆ 45 ಕೆಜಿ ಮೇವು ಇದರಲ್ಲಿ ಉತ್ಪಾದಿಸಬಹುದು. ಮೊಳಕೆಯೊಡೆದ ಕಾಳು ಕ್ರೇಟ್
ಗಳಲ್ಲಿ ಹಾಕಿದ ಹತ್ತು ದಿನಗಳಲ್ಲಿ ಮೇವು ಬರುತ್ತದೆ. ಒಂದು ಕೆಜಿ ಕಾಳುಗಳಿಗೆ 9ರಿಂದ 10 ಕೆಜಿ ಮೇವು ಉತ್ಪಾದಿಸಬಹುದು. ದಿನಕ್ಕೆ 80 ಲೀ. ನೀರು ಸಾಕು. ಟ್ಯಾಂಕರ್, ನೀರು μಲ್ಟರ್, ಪೈಪ್‌ಗ್ಳು, ಟೈಮರ್ ಸೇರಿ 26 ಸಾವಿರ ರೂ. ಖರ್ಚಾಗುತ್ತದೆ. ಇದೆಲ್ಲವನ್ನೂ ನಾವು ಜೋಡಿಸುತ್ತೇವೆ. ರೈತರ ಕೆಲಸ ಕೇವಲ ಬಟನ್ ಆನ್ ಅಥವಾ ಆಫ್ ಮಾಡುವುದು ಅಷ್ಟೆ ಎನ್ನುತ್ತಾರೆ ಕಾಶಿನಾಥ್.
Related Articles
ಪೋಷ ಕಾಂಶಗಳ ಕಣಜವೇ ಇದಾಗಿರುತ್ತದೆ. ಇದನ್ನು ಸೇವಿಸುವ ಹಸುಗಳಿಂದ ಹಾಲಿನ ಗುಣಮಟ್ಟ ಮತ್ತು ಬೆಣ್ಣೆಯ ಅಂಶ ಉಳಿದ
ಹಸುಗಳಿಗಿಂತ ಅಧಿಕವಾಗಿರುತ್ತದೆ. ಅತಿ ಶೀಘ್ರ ಜೀರ್ಣವಾಗಿ ಸ್ವಲ್ಪವೂ ಅಪವ್ಯಯವಾಗದೆ, ದೇಹಕ್ಕೆ ಪೂರ್ಣ ವಾಗಿ ಲಭಿಸುವ
ಪೌಷ್ಟಿಕ ಆಹಾರ ಇದಾಗಿದೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ
(ಎನ್‌ಡಿಆರ್‌ಐ)ಯ ಹಿರಿಯ ತಾಂತ್ರಿಕ ಅಧಿಕಾರಿ ಸಿದ್ದರಾಮಣ್ಣ ತಿಳಿಸುತ್ತಾರೆ.
Advertisement
ತಯಾರಿಕೆ ವಿಧಾನಸ್ಥಳೀಯವಾಗಿ ಲಭ್ಯವಿರುವ ಯಾವುದೇ ಏಕದಳ ದ್ವಿದಳ ಧಾನ್ಯ ಬಳಸಿಯೂ ಹೈಡ್ರೋಫೋನಿಕ್ ವಿಧಾನದಲ್ಲಿ ಹಸಿರು ಮೇವು
ಉತ್ಪಾದಿಸಬಹುದು. 1 ಮೆಕ್ಕೆ ಜೋಳ ತೊಳೆದು 24 ಗಂಟೆ ನಂತರ ಕಾಟನ್ ಬಟ್ಟೆ ಅಥವಾ ಗೋಣಿ ಚೀಲದಲ್ಲಿ 48 ಗಂಟೆಗಳ
ಕಾಲ ಕಟ್ಟಿ ಇಡಬೇಕು. ಆಗ ಅದು ಮೊಳಕೆ ಕಟ್ಟುತ್ತದೆ. ನಂತರ ಟ್ರೇಗೆ ಹರಡಿ, ಪ್ರತಿ ಒಂದೂವರೆ ತಾಸಿಗೊಮ್ಮೆ 25ರಿಂದ 30 ಸೆಕೆಂಡು ನೀರು ಉಣಿಸಬೇಕು. ಕೇವಲ 8ರಿಂದ 10 ದಿನಗಳಲ್ಲಿ ಅದು 9-10 ಕೆಜಿ ತೂಗುತ್ತದೆ ಎಂದು ವಿವರಿಸಿದರು. ●ವಿಜಯಕುಮಾರ ಚಂದರಗಿ