Advertisement
ಓಲಾ-ಉಬರ್ ಮಾದರಿಯ ಆ್ಯಪ್ ಆಧಾರಿತ ಹವಾ ನಿಯಂತ್ರಿತ ಟ್ಯಾಕ್ಸಿಗಳಿಗೆ ಕಿ.ಮೀ.ಗೆ 12 ರೂ. ಹಾಗೂ ಹವಾನಿಯಂತ್ರಿತವಲ್ಲದ ಟ್ಯಾಕ್ಸಿಗಳಿಗೆ ಕಿ.ಮೀ.ಗೆ 10 ರೂ. ಕನಿಷ್ಠ ದರ ನಿಗದಿಪಡಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
Related Articles
Advertisement
ಯಾವ ಲೆಕ್ಕಾಚಾರದ ಆಧಾರದಲ್ಲಿ ದರ ನಿಗದಿ? ಒಂದು ದಿನಕ್ಕೆ ವಾಹನದಟ್ಟಣೆ ಇರುವ ಬೆಂಗಳೂರಿನಂತಹ ನಗರದಲ್ಲಿ ಒಂದು ಟ್ಯಾಕ್ಸಿ ಸರಾಸರಿ 150 ಕಿ.ಮೀ. ಸಂಚರಿಸುತ್ತದೆ. ಟ್ಯಾಕ್ಸಿ ಬೆಲೆ ಸರಾಸರಿ 8 ಲಕ್ಷ ರೂ. ಆಗುತ್ತದೆ. ಈ ವಾಹನ 10 ವರ್ಷ ಕಾರ್ಯಾಚರಣೆ ಮಾಡಬಹುದು. ಚಾಲಕನ ವೇತನ ದಿನಕ್ಕೆ 500 ರೂ. ಎಂದು ಅಂದಾಜಿಸಲಾಗಿದೆ. ಇದೆಲ್ಲವನ್ನೂ ಲೆಕ್ಕಹಾಕಿ ದರ ನಿಗದಿ ಸಮಿತಿ ಯು ಕಿ.ಮೀ.ಗೆ ನಾನ್-ಎಸಿ 10 ಮತ್ತು ಎಸಿಗೆ 12 ರೂ. ನಿಗದಿಪಡಿಸಿದೆ ಎಂದು ಸಾರಿಗೆ ಆಯುಕ್ತ ಎಂ.ಕೆ. ಅಯ್ಯಪ್ಪ ತಿಳಿಸಿದ್ದಾರೆ. ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಇದು ಅನುಮೋದನೆಗೊಂಡ ನಂತರ ಕನಿಷ್ಠ ದರ ಜಾರಿಗೆ ಬರಲಿದೆ ಎಂದೂ ಅವರು ಸ್ಪಷ್ಟಪಡಿಸಿದರು. ಇವರೆನಂತಾರೆ?
ನಗರದಲ್ಲಿ ಸಂಚರಿಸುವ ಸಾಮಾನ್ಯ ಟ್ಯಾಕ್ಸಿ ಸೇವೆಗಳಿಗೆ ಗರಿಷ್ಠ ದರ ಕಿ.ಮೀ.ಗೆ 14.5 ರೂ. (ನಾನ್ ಎಸಿ) ಮತ್ತು 19.5 ರೂ. (ಎಸಿ) ನಿಗದಿಪಡಿಸಲಾಗಿದೆ. ಅಂದರೆ, ಇದಕ್ಕಿಂತ ಕಡಿಮೆ ದರದಲ್ಲೂ ಸೇವೆಗೆ ಅವಕಾಶ ಇದೆ. ಆದರೆ, ಕನಿಷ್ಠ ದರದಲ್ಲಿ ಇದು ಸಾಧ್ಯವಿಲ್ಲ. ಆಗ ಸಹಜವಾಗಿ ಗ್ರಾಹಕರಿಗೆ ಹೊರೆಯಾಗಲಿದೆ.
-ಟ್ಯಾಕ್ಸಿ ಚಾಲಕ, ಇಂದಿರಾನಗರ ದರ ನಿಗದಿಪಡಿಸುವುದರಿಂದ ವಾಹನ ಚಾಲಕ ಅಥವಾ ಮಾಲೀಕನಿಗೆ ತನ್ನ ದಿನದ ಸಂಪಾದನೆಯ ಲೆಕ್ಕ ಸಿಗುತ್ತದೆ. ಅದರಿಂದ ಆತ ವಾಹನದ ಸಾಲದ ಕಂತು ಪಾವತಿ, ಕುಟುಂಬ ನಿರ್ವಹಣೆ, ಇಂಧನ ಸೇರಿದಂತೆ ಎಲ್ಲದರ ಲೆಕ್ಕವೂ ಗೊತ್ತಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಗರದಲ್ಲಿ ಸ್ಪರ್ಧಾತ್ಮಕ ದರದಿಂದ ಹೆಚ್ಚಾಗಿದ್ದ ವಾಹನಗಳ ದಟ್ಟಣೆ ತಗ್ಗುತ್ತದೆ. ಈ ಹಿನ್ನೆಲೆಯಲ್ಲಿ ಕನಿಷ್ಠ ದರ ನಿಗದಿ ನಿರ್ಧಾರ ಸೂಕ್ತವಾಗಿದೆ.
-ರಾಧಾಕೃಷ್ಣ ಹೊಳ್ಳ, ಬೆಂಗಳೂರು ಪ್ರವಾಸಿ ವಾಹನಗಳ ಮಾಲಿಕರ ಸಂಘದ ಅಧ್ಯಕ್ಷ ಕನಿಷ್ಠ ದರದಿಂದ ಓಲಾ-ಉಬರ್ ಚಾಲಕರು ಅಥವಾ ಮಾಲೀಕರಿಗಾಗಲಿ ಲಾಭ ಆಗುವುದಿಲ್ಲ. ಯಾಕೆಂದರೆ, 10 ರೂ. ನಿಗದಿಪಡಿಸಿದರೂ ಇದರಲ್ಲಿ 3 ರೂ. ಆ್ಯಪ್ ಸೇವಾ ಕಂಪೆನಿಗಳಿಗೆ ಕಮೀಷನ್ ಕೊಡಬೇಕು. ಮತ್ತೆ ನಮಗೆ ಉಳಿಯುವುದು ಕಿ.ಮೀ.ಗೆ 7 ರೂ. ಇದರಿಂದ ಏನು ಪ್ರಯೋಜನ ಆದಂತಾಯ್ತು? ಆಟೋಗಳಿಗೇ ಕಿ.ಮೀ.ಗೆ 13.5 ರೂ. ಇದೆ. ಕೊನೆಪಕ್ಷ ಈ ದರವನ್ನಾದರೂ ನಿಗದಿಪಡಿಸಬೇಕಿತ್ತು
-ತನ್ವೀರ್ ಪಾಷ, ಓಲಾ-ಉಬರ್ ಚಾಲಕರು ಮತ್ತು ಮಾಲಿಕರ ಸಂಘದ ಅಧ್ಯಕ್ಷ * ವಿಜಯಕುಮಾರ್ ಚಂದರಗಿ