Advertisement

UV Fusion: ದೇವರ ಚಿತ್ರಣ ಎಂತಾ ಅದ್ಬುತ

07:05 AM Jan 07, 2024 | Team Udayavani |

ಪ್ರಪಂಚದ ಸೃಷ್ಟಿಕರ್ತನೀಗೆ ನನ್ನ ನಮನ.. ಪ್ರಪಂಚದ ಅತ್ಯುತ್ತಮ ಇಂಜಿನಿರ್ಯ ಯಾರೆಂದು ಹೇಳಬಲ್ಲಿರಾ..?

Advertisement

ನನ್ನನ್ನು ಕೇಳಿದರೆ ನಾನು ಹೇಳುವೆ ಆ ಮಹಾಪುರುಷ ದೇವರು ಎಂದು… ಪ್ರಪಂಚದಲ್ಲಿ ಎಲ್ಲವನ್ನು ಸೃಷ್ಟಿ ಮಾಡಿದ, ಅದರಲ್ಲಿ ಅತ್ಯಂತ ಬುದ್ಧಿಜೀವಿಯಾಗಿ ಮನುಷ್ಯನನ್ನು ಸೃಷ್ಟಿ ಮಾಡಿದ ಅವನ ಜೊತೆಯಲ್ಲಿ ಒಳ್ಳೆಯದು ಮತ್ತು ಕೆಟ್ಟದು, ಎರಡನ್ನು ಕೊಟ್ಟು ಕಳುಹಿಸಿದ.. ಮನುಷ್ಯನು ಅವನ ಜೀವನೋಪಾಯಕ್ಕಾಗಿ ಮಿತಿ ಇಲ್ಲದೆ ಅವನಿಗೇ ಸರಿ  ಅನಿಸಿರುವುದೆಲ್ಲ ಮಾಡುತ್ತಾ ಹೊರಟ, ಆದರೆ ಮೇಲೆ ಕುಳಿತು ಎಲ್ಲವನ್ನು ವೀಕ್ಷಿಸಿಸುತ್ತಿರುವ ಆ ಮಹಾಪುರುಷ ಒಂದಕ್ಕೊಂದು ಜೋಡಣೆ ಇಟ್ಟು ಮುಂದೆ ನಡಿ  ಮಗನೇ.. ಎಂದ

ಮಿತಿ ಮೀರಿದ ಆಸೆಯ ಕಡೆಗೆ ಪಯಣ.. ಎಷ್ಟಿದರು ಸಾಕಾಗದ ವಿಚಿತ್ರ ಜೀವನ, ನನ್ನ ಸ್ನೇಹಿತ ಅವನು ಕಂಡ ಮನುಷ್ಯನ ಮಾನವೀಯ ದೃಶ್ಯವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದ.. ನಮ್ಮ ಜನ ಹೇಗೆ ಅಂದ್ರೆ ಸೂರ್ಪ ಮಾರ್ಕಟ್‌ ನಂತಹ ಮಹಾ ಅಂಗಡಿಗೆ ಹೋಗಿ ಸಾವಿರಗಟ್ಟಲೆ ಖರ್ಚು ಮಾಡುತ್ತಾರೆ..

ಅದೇ ಸೂಪರ್ ಮಾರ್ಕಟ್‌ ಮುಂದೆ ನಿಂತಿದ್ದ ಒಬ್ಬ ಅಜ್ಜಿ ಭಿಕ್ಷೆ ಬೇಡುತ್ತಿರುತ್ತಾಳೆ ಅವಳಿಗೆ ಹತ್ತು ರೂಪಾಯಿ ಕೊಡದೆ ಅವಳಿಗೆ ಕಾಣದೆ ಮರೆಮಾಚಕೊಂಡು ಬರುತ್ತಾರೆ ಎಂತಾ ವಿಚಿತ್ರ ಅಲ್ವಾ ಎಂದನು.. ಒಂದು ಹೋತಿನ ಊಟಕ್ಕಾಗಿ ಏಷ್ಟೋ ಜನ ಭೀಕ್ಷೆ ಬೇಡುತ್ತಾರೆ ಅದೇ, ಏಷ್ಟೋ ಜನರು ಅವರಿಗೆ ವರ್ಷವಿಡೀ ಕೂತು ತಿನ್ನುವಷ್ಟು ಇದ್ದರು ಒಂದು ಹೊತ್ತಿನ ಊಟವನ್ನು ಸರಿಯಾಗಿ ತಿನ್ನುವುದಿಲ್ಲ, ಎಂತಾ ಚಿತ್ರಣ ದೇವರದು..

ಏಷ್ಟು ಸತ್ಯದ ಮಾತು ನೋಡಿ.. ನಾವು ಕೂಡ ಇದನು ಅನುಭವಿಸಿರುತ್ತೇವೆ.. ಕಂಡರು ಕಣ್ಣದ ರೀತಿಯಲ್ಲಿ ಹೋಗಿರುತ್ತೇವೆ.., ದೇವರು ಎಲ್ಲವನು ಕೊಟ್ಟು ನಾವು ಅದನು ಹೇಗೆ ಉಪಯೋಗಿಸಿಕೊಳ್ಳುತ್ತೇವೆಯೋ ಅದರ ಮೇಲೆ ಮತ್ತೆ ನಮಗೆ  ಕೊಡಬೇಕಾದ್ದುದನ್ನು ಕೊಡುತ್ತಾ ಬರ ತೊಡಗಿದ..

Advertisement

ಯಾಕೇ ಹೀಗೆ ಹೇಳುತ್ತಿರುವ ಎಂದರೆ ನನ್ನ ಒಂದು ಅನುಭವ, ಪರೀಕ್ಷೆಯಲ್ಲಿ ಮಿತಿ ಮೀರಿ ನಕ್ಕ ಆ ದಿನ ನೆನಪಾಗುತ್ತದೆ… ಆ ಪರೀಕ್ಷೆಯಲ್ಲಿ ನಾವು ಆ ಸ್ಥಳದ ವಿಸ್ತೀರ್ಣ ಕಂಡುಹಿಡಿಯಬೇಕಿತ್ತು. ಕ್ರಮವಾಗಿ ಮೊದಲ ಹಾಜಾರಿ ಸಂಖ್ಯೆಯಂತೆ ಪರೀಕ್ಷೆ ನಡೆದಿತ್ತು. ನನ್ನ ಸ್ನೇಹಿತರೆಲ್ಲಾ ಪರೀಕ್ಷೆ ಮೇಲ್ವಿಚರಕರು ನೀಡಿರುವ  ಸ್ಥಳದ ಅಳತೆ ಮಾಡಿ ಅಳತೆಯನ್ನು ಪಟ್ಟಿಯಲ್ಲಿ ನಮೂದಿಸಿಕೊಂಡು ಹೋಗಿ ವಿಸ್ತೀರ್ಣ ಕಂಡುಹಿಡಿಯಿತ್ತಿದರು.. ‌

ನನ್ನ ಸರದಿ ಬರುವಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯ… ನೀನು ಊಟ ಮಾಡಿ ಬಂದು ಅಳತೆ ಮಾಡುವಂತಿ ಎಂದರು, ಆಯ್ತು ಎಂದು ನಾನು ಹೊರಟೆ, ಎಲ್ಲರಿಗಿಂತ ಮೊದಲು ಊಟ ಮಾಡಿ ಬಂದು ಆ ಸ್ಥಳದ ಅಳತೆ ಮಾಡಿ ವಿಸ್ತೀರ್ಣ ಕಂಡುಹಿಡಿದು ಕುಳಿತಿದೆ. ಏಕೆಂದರೆ ಪರೀಕ್ಷೆ ಆಗಿರುವುದರಿಂದ ಎಲ್ಲರಿಗೂ ಒಂದೇ ಸ್ಥಳವನ್ನು ಕೂಡುತ್ತಾ ಬಂದಿದ್ದರು, ಅದರಿಂದ ನಾನು ಕೂಡ ಅದೇ ನನಗೂ ಕೊಡಬಹುದು ಎಂದೂ ಭಾವಿಸಿದೆ ಸ್ನೇಹಿತರ ಸಹಾಯದಿಂದ ಒಂದು ತಪ್ಪು ಇಲ್ಲದೇ ಮೊದಲೇ ಅಳತೆ ಮಾಡಿ ವಿಸ್ತೀರ್ಣ ಕಂಡುಹಿಡಿದು ಕುಳಿತಿದೆ.. ಆದರೆ ದೇವರ ಚಿತ್ರಣನೇ ಬೇರೆ ಇತ್ತು, ಊಟ ಮಾಡಿ  ಬಂದಂತಹ ಮೇಲ್ವಿಚಾರಕರು ಇವಾಗ ಸ್ಥಳ ಬದಲು ಮಾಡೋಣ ಎಂದರು….

ನನಗೆ ಒಂದು ಕಡೆ ಆಶ್ಚರ್ಯ ಇನ್ನೊಂದು ಕಡೆ ಮಿತಿ ಮೀರಿದ ನಗು, ನಾವು ಒಂದು ಭಾವಿಸಿದರೆ. ದೇವರೇ ಇನ್ನೊಂದನ್ನು ನಿರ್ಮಿಸಿರುತ್ತಾರೆ, ನಾವು ಮಾಡಿದ ಕರ್ಮ ನಾವೇ ಅನುಭವಿಸಬೇಕು ಇದೊಂದು ಭಗವಂತನ ಮಹತ್ವದ ಚಿತ್ರಣ….  ನೀವು ಕೂಡ ಇದನು ಏಷ್ಟೋ ಸರಿ ಅನುಭವಿಸಿರುತ್ತೀರಾ. ಅದರಿಂದ ನಮಗೆ ಬೇರೆಯವರಿಗೆ ಒಳ್ಳೆಯದು ಮಾಡಲು ಸಾಧ್ಯವಾದಷ್ಟು ಒಳ್ಳೆಯದು ಮಾಡೋಣ, ಆಗದಿದ್ದರೆ ಕೆಟ್ಟದನು ಬಯಸದೆ ನಮ್ಮ ಪಾಡಿಗೆ ನಾವು ಇರೋಣ ..

ದೇವರ ಚಿತ್ರಣವನ್ನು ನೆನೆಸಿಕೊಂಡಾಗ ನನಗೆ ಚಂದ್ರನ ಮೇಲೆ ಮೊದಲು ಕಾಲಿಟ್ಟ ಸಾಧಕ ನೀಲ್‌ ಆರ್ಮ್ ಸ್ಟ್ರಾಂಗ್‌ ಅವರ ಮಾತುಗಳು ನೆನಪಾಗುತ್ತದೆ. ಜುಲೈ 20 1969 ರಂದು ಮನುಕುಲಕ್ಕೆ ಐತಿಹಾಸಿಕ ದಿನ, ಅಂದು ಇಬ್ಬರು ಗಗನಯಾತ್ರಿಗಳು ಚಂದ್ರನ ನೆಲದ ಮೇಲೆ ಪಾದಸ್ಪರ್ಶಿಸಿದ್ದರು.

ಇದರಲ್ಲಿ ಮೊದಲಿಗರು ನೀಲ್‌ ಆರ್ಮ್ ಸ್ಟ್ರಾಂಗ್‌ ಇವರು ಭೂಮಿಗೆ ಹಿಂದಿರುಗಿ ಬಂದಾಗ ಅವರನ್ನು ಯಾರೋ ಪ್ರಶ್ನಿಸಿದರಂತೆ, ನೀವು ಭೂಲೋಕವನ್ನು ನೋಡಿದ್ದೀರಾ, ಅಂತರಿಕ್ಷದಲ್ಲಿ ಸಂಚರಿಸಿದ್ದೀರಾ, ಚಂದ್ರಲೋಕದಲ್ಲಿ ನಡೆದಾಡಿದ್ದೀರಿ, ನಿಮಗೆ ಎಲ್ಲಾದರೂ ದೇವರು ಕಂಡನೆ.? ಇದಕ್ಕೆ ಅವರು ಮನಮುಟ್ಟುವಂತೆ ಉತ್ತರಿಸಿದರು, ನನಗೆ ಎಲ್ಲೂ ದೇವರು ಕಾಣಲಿಲ್ಲ, ಆದರೆ ಅವನ ಅದ್ಭುತ ಸೃಷ್ಟಿ ಕಂಡು ಬಂತು. ಎಂತಾ  ಅರ್ಥಗರ್ಭಿತ ನುಡಿ ಅಲ್ವೇ…

ದೇವರು ಈ ಪ್ರಪಂಚವನ್ನು ಸೃಷ್ಟಿಸಲು ಹೊರಟಾಗ ಒಳ್ಳೆಯದು ಮತ್ತು ಕೆಟ್ಟದ್ದನ್ನು ಎರಡನ್ನು ಸೃಷ್ಟಿಸಿದ, ನಾನು ಒಂದು ಕೆಲಸದ ನಿಮಿತ್ತ ಹುಬ್ಬಳ್ಳಿ ನಗರಕ್ಕೆ ಹೋಗಿದೆ ಅಲ್ಲಿ ನಾ ಕಂಡ ಒಂದು ಘಟನೆ ನನ್ನ ಜೀವನದ ಹಾದಿಗೆ ತುಂಬಾ ಧೈರ್ಯವನ್ನು ತುಂಬಿತ್ತು, ನಾನು ಒಂದು ರಸ್ತೆ ಪಕ್ಕ ನಿಂತು ಚಾ ಕುಡಿಯುತ್ತಿದೆ.

ಅಲೆ ಪಕ್ಕದಲ್ಲಿ ಒಂದು ವಾಹನಗಳ ದುರಸ್ತಿ ಅಂಗಡಿ ಇತ್ತು. ಅಲ್ಲಿ ಓರ್ವ ಯುವಕ ವಾಹನ ಚಕ್ರವನ್ನು ದುರಸ್ತಿ ಮಾಡುತ್ತಿದ್ದ. ಅವನನ್ನು ಕಂಡು ನಾನು ಆಶ್ಚರ್ಯಚಕಿತನಾದೆ, ಎಕೆಂದರೆ ಅವನ ಒಂದು ಕೈ ಮತ್ತು ಒಂದು ಕಾಲು ಸರಿ ಇಲ್ಲ, ನಡೆದಾಡುವಾಗ ಇಡೀ ದೇಹವೇ ಅಲುಗಾಡುತ್ತದೆ ಈ ತರಹದ ಸ್ಥಿತಿಯಲ್ಲೂ ಅವನು ತನ ಕೆಲಸವನ್ನು ಬೇರೆಯವರ ಸಹಾಯವನ್ನು ಪಡಿಯದೆ ಅಚ್ಚುಕಟ್ಟಾಗಿ ಮಾಡುತ್ತಿದ್ದ.  ಇದನ್ನು ಕಂಡ ನನಗೆ ಅನಿಸಿತು, ದೇವರು ನಮಗೆ ಎಲ್ಲಾ ದೇಹದ ಭಾಗವನ್ನು ಸರಿಯಾಗಿ ನೀಡಿದ್ದಾನೆ. ಯೋಚನೆ ಮಾಡುವ ಶಕ್ತಿಯನ್ನು ನೀಡಿದ್ದಾನೆ, ಆದರೂ ಕೂಡ ನಾವು ಒಂದು ಕೆಲಸವನ್ನು ಮಾಡಲು ಹೊರಟಾಗ ಹತ್ತಾರು ಸಮಸ್ಯೆಗಳಿಂದ ಆ ಕೆಲಸವನ್ನು ಹೊರೆಯೆಂದು  ತಿಳಿದುಕೊಳ್ಳುತ್ತೇವೆ ಅಲ್ಲವೇ…!

ಅದಕ್ಕೆ ಪರಿಹಾರ ಇರುವುದನ್ನು ಮರೆತುಬಿಡುತ್ತೇವೆ, ಆ ಯುವಕ ತನ ದೇಹದ ಸ್ಥಿತಿ ಸರಿ ಇಲ್ಲವೆಂದು ಹಿಂದೆ ಸರಿದಿದ್ದರೆ ಆತನ ಜೀವನ ಕತ್ತಲೆಯ ಕೋಣೆಯಾಗಿರುತ್ತಿತ್ತು.. ಅದರೆ ಅವನೂ ಅದಕ್ಕೊಂದು ಪರಹಾರವನ್ನು ಹುಡುಕಿಕೊಂಡು.. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ ಮತ್ತು ಅಷ್ಟೇ ಅದನ್ನು ಸಾಧಿಸುವ ಛಲ ಇರಲಿ. ದೇವರು ತನ್ನ ಚಿತ್ರಣದಲ್ಲಿ ಎಲ್ಲವನ್ನು ನಿರ್ಮಿಸಿದ್ದಾನೆ. ಅವನು ಎಂದು ನಮ್ಮನ್ನು ಕೈಬಿಡುವುದಿಲ್ಲ, ಕೆಲವರಿಗೆ ಅವನ ಅವರ ಮಾಡುವ ಕೆಲಸದಲ್ಲಿ ಕಾಣಿಸಿಕೊಳ್ಳುತ್ತಾನೆ, ಕೆಲವರಿಗೆ ಅವನ ನಂಬಿಕೆಯಲ್ಲಿ ಕಾಣಿಸಿಕೊಳ್ಳುತ್ತಾನೆ,

ಭರತ್‌ ನಾಯ್ಕ

ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next