Advertisement

Kolkata Case ಪ್ರತಿಭಟನಾನಿರತ ವೈದ್ಯರಿಗೆ ಕೆಲಸ ಪುನರಾರಂಭಿಸಲು ಹೇಳಿದ ಸುಪ್ರೀಂ ಕೋರ್ಟ್

06:40 PM Aug 22, 2024 | Team Udayavani |

ಹೊಸದಿಲ್ಲಿ:ಕೋಲ್ಕತಾದ ಆರ್‌.ಜಿ.ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆಯ ಅ*ತ್ಯಾಚಾರ ಮತ್ತು ಹ*ತ್ಯೆ ಪ್ರಕರಣದ ಕುರಿತು ಪ್ರತಿಭಟನೆ ನಡೆಸುತ್ತಿರುವ ವೈದ್ಯರಿಗೆ ಗುರುವಾರ ಸುಪ್ರೀಂ ಕೋರ್ಟ್ ಕೆಲಸ ಪುನರಾರಂಭಿಸಲು ಸೂಚಿಸಿದ್ದು,ಮತ್ತೆ ಕರ್ತವ್ಯಕ್ಕೆ ಸೇರಿದ ನಂತರ ಯಾವುದೇ ಪ್ರತಿಕೂಲ ಕ್ರಮ ಕೈಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದೆ.

Advertisement

‘ಕೋಲ್ಕತಾದ ಪ್ರಕರಣದ ಪ್ರತಿಭಟನೆಗೆ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ’ ಎಂದು ನಾಗ್ಪುರದ ಏಮ್ಸ್‌ನ  ವೈದ್ಯರ ಪರ ವಕೀಲರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠಕ್ಕೆ ತಿಳಿಸಿದ್ದರು.

ಇದನ್ನೂ ಓದಿ: High Court: ಲೈಂಗಿಕ ಕಿರುಕುಳ; ಕ್ರಮವಹಿಸದ್ದಕ್ಕೆ ಕೋರ್ಟ್ ತರಾಟೆ

“ಒಮ್ಮೆ ನೀವು ಕರ್ತವ್ಯಕ್ಕೆ ಮರಳಿದರೆ, ಪ್ರತಿಕೂಲ ಕ್ರಮಗಳನ್ನು ತೆಗೆದುಕೊಳ್ಳದಂತೆ ನಾವು ಅಧಿಕಾರಿಗಳಿಗೆ ಸೂಚಿಸುತ್ತೇವೆ. ವೈದ್ಯರು ಕೆಲಸ ಮಾಡದಿದ್ದರೆ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳು ಹೇಗೆ ನಡೆಯುತ್ತವೆ. ತೊಂದರೆಯಾದರೆ ನಮ್ಮ ಬಳಿಗೆ ಬನ್ನಿ, ಮೊದಲು ಕೆಲಸಕ್ಕೆ ಹೋಗಿ ವರದಿ ಮಾಡಿ” ಎಂದು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next