Advertisement

ಐಪಿಎಲ್‌: 10 ತಂಡಗಳ ಲೆಕ್ಕಾಚಾರ ಹೇಗಿದ್ದೀತು? ತಂಡಗಳು ಯಾರ ಪಾಲಿಗೆ?

12:14 PM Dec 28, 2020 | keerthan |

ಹೊಸದಿಲ್ಲಿ: ಐಪಿಎಲ್‌ ನಲ್ಲಿ ತಂಡಗಳ ಸಂಖ್ಯೆಯನ್ನು ಹತ್ತಕ್ಕೆ ಏರಿಸುವುದರಿಂದ ಹಲವು ಪ್ರಶ್ನೆಗಳು ಉದ್ಭವಿಸಿವೆ. ತಂಡಗಳನ್ನು ಯಾರು ಖರೀದಿಸುತ್ತಾರೆ ಎನ್ನುವುದು ಮೊದಲ ಪ್ರಶ್ನೆ.

Advertisement

ಗೌತಮ್‌ ಅದಾನಿಯ ಜಿಎಂಆರ್‌ ಸಮೂಹ, ಆರ್‌ಪಿಎಸ್‌ಜಿ ತಂಡದ ಮಾಜಿ ಮುಖ್ಯಸ್ಥ ಸಂಜೀವ್‌ ಗೊಯೆಂಕ ಈ ಸ್ಪರ್ಧೆಯಲ್ಲಿದ್ದಾರೆ. ಹಾಗೆಯೇ ಅಹ್ಮದಾಬಾದ್‌ ಮತ್ತು ಪುಣೆ ಸ್ಪರ್ಧೆಯಲ್ಲಿರುವ ಪ್ರಮುಖ ತಾಣಗಳು.

2011ರ ಐಪಿಎಲ್‌ನಲ್ಲೂ 10 ತಂಡಗಳನ್ನು ಆಡಿಸಲಾಗಿತ್ತು. 8 ತಂಡಗಳಿದ್ದಾಗ ಒಟ್ಟು 60 ಪಂದ್ಯಗಳು ನಡೆಯುತ್ತವೆ. 10ಕ್ಕೆ ಏರಿದರೆ ಪಂದ್ಯಗಳ ಸಂಖ್ಯೆಯೂ ಏರುತ್ತದೆ. ಆಗ ಕೂಟದ ಅವಧಿಯನ್ನೂ ಹೆಚ್ಚಿಸಬೇಕು. ಇದು ಬಿಸಿಸಿಐಗೆ ಲಾಭವಿರಬಹುದು, ಆದರೆ ಅಂತಾರಾಷ್ಟ್ರೀಯ ವೇಳಾಪಟ್ಟಿಗೆ ಅನುಕೂಲಕರವಲ್ಲ. 2011ರಲ್ಲಿ ಬಿಸಿಸಿಐ ಐಪಿಎಲ್‌ ಪಂದ್ಯಗಳ ಸಂಖ್ಯೆಯನ್ನು 74ಕ್ಕೆ ಏರಿಸಿತ್ತು. ಈ ಬಾರಿ 94ಕ್ಕೆ ಹೆಚ್ಚಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಇದನ್ನು ಬಿಸಿಸಿಐ ಹೇಗೆ ನಿಭಾಯಿಸುತ್ತದೆ ಎನ್ನುವುದು ಮುಖ್ಯ ಪ್ರಶ್ನೆ.

ಇದನ್ನೂ ಓದಿ:ಐಸಿಸಿ ದಶಕದ ತಂಡ ಪ್ರಕಟ : ಏಕದಿನ,ಟಿ-ಟ್ವಿಂಟಿಯಲ್ಲಿ ಧೋನಿ ನಾಯಕ : ಭಾರತೀಯರೇ ಮೇಲುಗೈ

5 ತಂಡಗಳ 2 ಗುಂಪು?

Advertisement

2011ರ ಮಾದರಿಯನ್ನು ಅನುಸರಿಸುವುದು ಸದ್ಯ ಬಿಸಿಸಿಐ ಮುಂದಿರುವ ಪ್ರಮುಖ ಆಯ್ಕೆ. ಅಂದರೆ 10 ತಂಡಗಳನ್ನು ತಲಾ ಐದು ತಂಡಗಳ ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಪಂದ್ಯಗಳ ಸಂಖ್ಯೆಯನ್ನು ಕಡಿತ ಮಾಡುವುದು. ಬಿಸಿಸಿಐ ಇದಕ್ಕೆ ಮುಂದಾದೀತೇ? ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next