Advertisement
ಬ್ಯಾಂಡ್ ಏಡ್ ಆವಿಷ್ಕಾರವಾಗುವುದಕ್ಕೆ ಮುಂಚೆ ಜನರು ಹತ್ತಿಯ ಉಂಡೆಯನ್ನು ಗಾಯದ ಮೇಲಿಟ್ಟು ಅದರ ಸುತ್ತ ಬಟ್ಟೆ ಕಟ್ಟುತ್ತಿದ್ದರು. ಅದಕ್ಕೂ ಮುಂಚೆ ಎಲೆ ಮುಂತಾದ ಪ್ರಾಕೃತಿಕ ವಸ್ತುಗಳನ್ನೇ ಬಳಸಿ ಗಾಯದ ಮೇಲೆ ಹಚ್ಚುತ್ತಿದ್ದರು. ಇವ್ಯಾವುವೂ ಸುರಕ್ಷಿತ ವಿಧಾನ ಆಗಿರಲಿಲ್ಲ. ಅದರಿಂದ ಹುಣ್ಣಾಗುವ ಸಾಧ್ಯತೆ ಇದ್ದವು. ಈ ಕಾರಣಕ್ಕೇ ಬ್ಯಾಂಡ್ ಏಡ್ ಸಂಶೋಧನೆಯಾಗಿದ್ದು.
ಬ್ಯಾಂಡ್ ಏಡ್‌ಅನ್ನು ಆವಿಷ್ಕರಿಸಿದ್ದು ಅರ್ಲ್ ಡಿಕ್ಸನ್ ಎಂಬ ವ್ಯಕ್ತಿ. ಆತ 1920ರ ಸಮಯದಲ್ಲಿ ಕಾರ್ಖಾನೆಯೊಂದರಲ್ಲಿ ನೌಕರನಾಗಿದ್ದ. ಆತನ ಪತ್ನಿ ಅಪಘಾತಕ್ಕೀಡಾದಾಗ ಆಕೆಯ ಕೈಬೆರಳುಗಳು ಜಖಂಗೊಂಡಿದ್ದವು. ಎರಡು ಮೂರು ದಿನಗಳಿಗೆ ಒಮ್ಮೆಯಾದರೂ ಗಾಯದ ಸುತ್ತ ಸುತ್ತಿದ್ದ ಬಟ್ಟೆಯನ್ನು ಬದಲಿಸಬೇಕಿತ್ತು. ಅಲ್ಲದೆ ಆತ ನ ಪತ್ವಿ ಆಗಾಗ್ಗೆ ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವಾಗ ಗಾಯ ಮಾಡಿಕೊಳ್ಳುತ್ತಿದ್ದಳು. ಪದೇಪದೆ ಗಾಯದ ಸುತ್ತ ಬಟ್ಟೆ ಬದಲಿಸುವುದೇ ಕೆಲಸವಾದಾಗ ಅರ್ಲ್, ರೋಸಿ ಹೋಗಿದ್ದ. ಮೊದಲ ಬ್ಯಾಂಡ್ ಏಡ್
ಅದಕ್ಕಾಗಿ ಆತ ಒಂದು ಪರಿಹಾರವನ್ನು ಕಂಡುಕೊಂಡ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಳಸಲ್ಪಡುತ್ತಿದ್ದ ಟೇಪ್ ರೋಲನ್ನು ಕೈಗೆತ್ತಿಕೊಂಡು ಅದರ ಮೇಲೆ ಔಷಧಿ ಲೇಪಿಸಿದ. ಅದರ ಮೇಲೆ ತೆಳುವಾದ ಬಟ್ಟೆಯನ್ನು ಹೊದಿಸಿ ಕವರ್ ಮಾಡಿದ. ಈಗ ಬೇಕೆಂದಾಗ ಟೇಪ್ ರೋಲನ್ನು ತನಗೆ ಬೇಕಾದಷ್ಟು ಮಾತ್ರವೇ ಕಟ್ ಮಾಡಿಕೊಂಡು ಗಾಯದ ಮೇಲೆ ಕಟ್ಟಬಹುದಿತ್ತು. ಇದು ಜಗತ್ತಿನ ಮೊದಲ ಬ್ಯಾಂಡ್ ಏಡ್!
Related Articles
ಜಗತ್ತಿನ ಮೊದಲ ಬ್ಯಾಂಡ್ ಏಡ್ ಮಾರುಕಟ್ಟೆಗೆ ಬಂದಿದ್ದು 1921ರಲ್ಲಿ. ಖಾಸಗಿ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಅದರ ಮೂಲ ಸ್ವರೂಪವನ್ನು ಬದಲಿಸಿ ಮೇಲಿಂದ ಮೇಲೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿತು. ಬ್ಯಾಂಡ್ ಏಡ್ ಮೇಲೆ ಗಾಳಿಯಾಡಲು ಚಿಕ್ಕ ಚಿಕ್ಕ ರಂಧ್ರಗಳು, ಔಷಧ ಪಟ್ಟಿ ಇವೆಲ್ಲವೂ ಆನಂತರದ ಸುಧಾರಣೆಗಳು.
Advertisement
ಹಿತ