Advertisement
ಅದು ಈವರೆಗೆ ನಡೆಸಲಾಗಿರುವ ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ ಮನುಷ್ಯರ ಮೇಲೆ ಉತ್ತಮ ಪರಿಣಾಮ ಬೀರಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸಾಮಾನ್ಯ ನೆಗಡಿಯನ್ನು ಉಂಟು ಮಾಡುವಂಥ ವೈರಾಣುಗಳನ್ನು ಜಿಂಪಾಜಿಗಳ ದೇಹಕ್ಕೆ ಸೇರಿಸಿ, ಅಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ಹಾಗೂ ಪ್ರೊಟೀನುಗಳನ್ನು ಪಡೆದು ಅದರಿಂದ ಈ ಲಸಿಕೆ ತಯಾರಿಸಲಾಗಿದೆ. ಹಾಗಾಗಿ ಇದಕ್ಕೆ ಚಿಂಪಾಝೀಸ್ ಅಡೆನೊವೈರಸ್ ವೈರಲ್ ವೆಕ್ಟರ್ (ಸಿಎಚ್‌ಎಡಿಒಎಕ್ಸ್‌ಎಲ್) ಎಂಬ ಹೆಸರಿಡಲಾಗಿದೆ.
Related Articles
ಪ್ರಾಥಮಿಕ ಪರೀಕ್ಷೆಗಳನ್ನು ದಾಟಿರುವ ಈ ಲಸಿಕೆಯನ್ನು ಈಗ ಅಂತಿಮ ಚರಣದ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. 18ರಿಂದ 55 ವರ್ಷದೊಳಗಿನ 1,077 ಆರೋಗ್ಯವಂತ ಯುವಕರನ್ನು ಆಯ್ದು ಅವರಿಗೆ ಈ ಲಸಿಕೆ ನೀಡಲಾಗಿತ್ತು.
Advertisement
ಎಪ್ರಿಲ್, ಮೇ ತಿಂಗಳಲ್ಲಿ ಯು.ಕೆ.ಯ ಐದು ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. ಒಮ್ಮೆ ಲಸಿಕೆ ನೀಡಿದರೆ ಅದರ ಪರಿಣಾಮವಾಗಿ 56 ದಿನ ಕಾಲ ಆ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಬಲಿಷ್ಟವಾಗಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಲಸಿಕೆ ದರ ಎಷ್ಟು?ಈ ಲಸಿಕೆಯ ಒಂದು ಡೋಸ್‌ನ ಬೆಲೆ ಯೂರೋಪ್‌ನಲ್ಲಿ 2.5 ಯೂರೋ (ಅಂದಾಜು 213 ರೂ.) ಆಗಿರಲಿದೆ. ಇಟಲಿಯ ಆರೋಗ್ಯ ಇಲಾಖೆಯೇ ಇದನ್ನು ದೃಢಪಡಿಸಿದೆ. ಇದನ್ನು ತಯಾರಿಸಲು ಪರವಾನಿಗೆ ಪಡೆದಿರುವ ಆ್ಯಸ್ಟ್ರಾಜೆನಿಕಾ ಕಂಪನಿ ಕೂಡ, ವಿಶ್ವ ಎದುರಿಸುತ್ತಿರುವ ಇಂಥ ತುರ್ತು ಪರಿಸ್ಥಿತಿಯಲ್ಲಿ ಲಾಭ ಮಾಡಿಕೊಳ್ಳುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಬ್ರಿಟನ್‌ನಲ್ಲಿ ತಯಾರಾಗುವ ಈ ಲಸಿಕೆ ವಿಶ್ವದ ಇತರೆಡೆ ತಲುಪಿದಾಗ ಸಾಗಾಣಿಕೆ ವೆಚ್ಚವೂ ಸೇರಿ ಇದರ ಒಟ್ಟಾರೆ ವೆಚ್ಚ ಹೆಚ್ಚಾಗಲೂಬಹುದು. ಪ್ರಯೋಗ ಎಲ್ಲೆಲ್ಲಿ ನಡೆಯುತ್ತಿದೆ?
ಬ್ರೆಜಿಲ್, ದಕ್ಷಿಣ ಆಫ್ರಿಕಾದಲ್ಲೂ ಅಲ್ಲಿನ ಸ್ಥಳೀಯರ ಮೇಲೆ ಈ ಪರೀಕ್ಷೆಗಳು ನಡೆಯುತ್ತಿವೆ. ಸದ್ಯದಲ್ಲೇ ಅಮೆರಿಕದಲ್ಲೂ ಪರೀಕ್ಷೆಗಳು ಆರಂಭವಾಗಲಿವೆ.