Advertisement

ವಿಂಬಲ್ಡನ್‌ ಸಮಯದಲ್ಲಿ ವಿಶ್ವಕಪ್‌ ವೀಕ್ಷಣೆ ಹೇಗೆ?!

03:32 PM Jul 02, 2018 | |

ಲಂಡನ್‌: ಜಾಗತಿಕ ಮಟ್ಟದ ದೊಡ್ಡ ಕ್ರೀಡಾಕೂಟಗಳು ಏಕಕಾಲದಲ್ಲಿ ಸಂಭವಿಸುವುದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಇದಕ್ಕೆ ತಾಜಾ ಉದಾಹರಣೆ, ಈ ಬಾರಿಯ ವಿಶ್ವಕಪ್‌ ಫ‌ುಟ್‌ಬಾಲ್‌ ಮತ್ತು ಸೋಮವಾರದಿಂದ ಆರಂಭವಾಗಲಿರುವ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ. ಕಾಕತಾಳೀಯವೆಂದರೆ, ವಿಶ್ವಕಪ್‌ ಫ‌ುಟ್‌ಬಾಲ್‌ ಫೈನಲ್‌ ಹಾಗೂ ವಿಂಬಲ್ಡನ್‌ ಪುರುಷರ ಫೈನಲ್‌ ಒಂದೇ ದಿನ, ಏಕಕಾಲದಲ್ಲಿ ನಡೆಯಲಿದೆ (ಜು. 15). ಈ 14 ದಿನಗಳ ಅವಧಿಯಲ್ಲೂ ವಿಶ್ವಕಪ್‌-ವಿಂಬಲ್ಡನ್‌ ಒಟ್ಟೊಟ್ಟಿಗೇ ಸಾಗಲಿವೆ.

Advertisement

4 ವರ್ಷಗಳಿಗೊಮ್ಮೆ ಬರುವ ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯನ್ನು ಕಾಣಲು ಹಾತೊರೆಯುವವರಿಗೆ ಲೆಕ್ಕವಿಲ್ಲ. ಇದಕ್ಕೆ ವಿಂಬಲ್ಡನ್‌ ಟೆನಿಸಿಗರೂ ಹೊರತಲ್ಲ. ಉದಾಹರಣೆಗೆ, ಬ್ರಿಟನ್‌ ಟೆನಿಸಿಗ ಆ್ಯಂಡಿ ಮರ್ರೆ. ಶನಿವಾರದ ಪತ್ರಿಕಾಗೋಷ್ಠಿಯೊಂದರಲ್ಲಿ ಪಾಲ್ಗೊಳ್ಳಬೇಕಿದ್ದ ಮರ್ರೆ ಇದನ್ನು ತಪ್ಪಿಸಿಕೊಂಡಿದ್ದರು. ಕಾರಣ, ಆರ್ಜೆಂಟೀನಾ- ಫ್ರಾನ್ಸ್‌ ನಡುವಿನ ಪ್ರೀ- ಕ್ವಾರ್ಟರ್‌ಫೈನಲ್‌ ಫ‌ುಟ್‌ಬಾಲ್‌ ಪಂದ್ಯ! ಇದನ್ನು ಹೇಳಿಕೊಳ್ಳಲು ಅವರು ಹಿಂಜರಿಯಲಿಲ್ಲ. ವಿಶ್ವಕಪ್‌ ನಾಕೌಟ್‌ ಸಮಯದಲ್ಲೇ ವಿಂಬಲ್ಡನ್‌ ಕಾವೇರಿಸಿಕೊಳ್ಳುವು ದರಿಂದ ರ್ಕೆಟ್‌ ಸಮರದ ಮೇಲೆ ಗಮನ ನೆಡುವುದು ಹೇಗೆ ಎಂಬ ಚಿಂತೆ ಮರ್ರೆ ಅವರದು. ಸ್ಕಾಟಿಷ್‌ ಪ್ರೀಮಿಯರ್‌ ಲೀಗ್‌ನ “ಹಿಬರ್ನಿ ಯನ್‌ ಕ್ಲಬ್‌’ನ ಕಟ್ಟಾ ಬೆಂಬಲಿಗನಾಗಿರುವ ಆ್ಯಂಡಿ ಮರ್ರೆ, ಮಾಜಿ ವೃತ್ತಿಪರ ಫ‌ುಟ್ಬಾಲಿಗನೊಬ್ಬನ ಮೊಮ್ಮಗ ಎಂಬುದನ್ನು ಮರೆಯುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next