Advertisement

ಎನ್‌ 95 ಮಾಸ್ಕ್ ಗಳನ್ನು ಸ್ವಚ್ಛಗೊಳಿಸಬಹುದೇ? ಇಲ್ಲಿದೆ ಮಾಹಿತಿ

04:19 PM May 29, 2020 | Hari Prasad |

ಸದ್ಯ ಎಲ್ಲಾ ಕಡೆ ಕೋವಿಡ್ ಅಟ್ಟಹಾಸ ಮೆರೆಯುತ್ತಿದೆ.ಚೀನಾದಲ್ಲಿ ಶುರುವಾದ ಈ ಸೋಂಕು ಇತರ ದೇಶಗಳಿಗೂ ಹರಿಡಿ ಇದೀಗ ತನ್ನ ಅಟ್ಟಹಾಸವನ್ನು ಭಾರತದಲ್ಲಿಯೂ ಮೆರೆಯುತ್ತಿದೆ.

Advertisement

ದಿನದಿಂದ ದಿನಕ್ಕೆ ಈ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸೋಂಕಿನಿಂದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುಲು ಹ್ಯಾಂಡ್‌ವಾಶ್‌, ಹ್ಯಾಂಡ್‌ ಸ್ಯಾನಿಟೈಸರ್‌ ಇದರೊಂದಿಗೆ ಅತೀ ಮುಖ್ಯವಾಗಿ ಪೇಸ್‌ ಮಾಸ್ಕ್ ಗಳನ್ನು ಬಳಸುತ್ತಿದ್ದಾರೆ.

ಈ ಫೇಸ್‌ ಮಾಸ್ಕ್ ಬಳಸುವ ವಿಧಾನದ ಕುರಿತು ಒಂದಿಷ್ಟು ವಿಧಾನಗಳು ನಮಗೆ ಗೊತ್ತಿರಬೇಕು. ಫೇಶ್‌ ಮಾಸ್ಕನ್ನು ಹೇಗೆ ಬಳಸಬೇಕು, ಎಷ್ಟು ದಿನ ಬಳಸಬೇಕು ಎಂಬುವುದರ ಕುರಿತು ನಿಮಗೆ ತಿಳಿದಿರಬೇಕು.

ನಾವು ಬಳಸುವ ಸಾಮಾನ್ಯ ಮಾಸ್ಕ್ ಇರಬಹುದು, ಎನ್‌ 95 ಮಾಸ್ಕ್ ಗಳೇ ಇರಬಹುದು. ಅವುಗಳನ್ನು ಎಷ್ಟು ದಿನಗಳ ಕಾಲ ಬಳಸಬಹುದು ಎಂದು ನಮಗೆ ಅವಶ್ಯವಾಗಿ ಗೊತ್ತಿರಬೇಕು.

ಸೋಂಕು ಹರಡದಂತೆ ರಕ್ಷಣೆ ನೀಡುವ ಮಾಸ್ಕ್
ಕೋವಿಡ್ ವೈರಸ್‌ ವ್ಯಕ್ತಿಯೊಬ್ಬರ ಬಾಯಿಯ ದ್ರವದ ಅಥವಾ ಮೂಗಿನ ಮೂಲಕ ಇನ್ನೊಬ್ಬರಿಗೆ  ಸುಲಭವಾಗಿ ಹರಡುವ ಸಾಧ್ಯತೆಗಳಿರುತ್ತದೆ. ಇದನ್ನು ತಪ್ಪಿಸಲು ಮಾಸ್ಕ್ ಗಳನ್ನು ಬಳಸುತ್ತೇವೆ. ಸದ್ಯ ಮಾಸ್ಕ್ ಗಳು ಜನರ ಜೀವವನ್ನು ಕಾಪಾಡುವ ಜೀವರಕ್ಷಕದಂತೆ ಕೆಲಸ ಮಾಡುತ್ತಿದೆ. ಕೋವಿಡ್ ಚೀನಾದಲ್ಲಿ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು ಅದು ಎಲ್ಲಾ ದೇಶವ್ಯಾಪಿ ಹರಡತೊಡಗಿದೆ.

Advertisement

ಈ ಸೋಂಕಿನ ವಿರುದ್ದ ಹೋರಾಡಲು ತಜ್ಞರು ಮಾಸ್ಕ್ ಎಷ್ಟು ಅವಶ್ಯಕ ಎಂದು ತಿಳಿಸುತ್ತಾ ಬಂದರೆ ಇದರಲ್ಲಿ ಕೆಲವು ದುರುಪಯೋಗಗಳು ಕೂಡ ಇವೆ. ಮಾರುಕಟ್ಟೆಯಲ್ಲಿ ಇಂದು ಬಗೆ ಬಗೆಯ ಮಾಸ್ಕ್ ಗಳ ಹಾವಳಿ ಹೆಚ್ಚಾಗುತ್ತಿದೆ. ಆದರೆ ಜನರಿಗೆ ಯಾವ ರೀತಿಯ ಮಾಸ್ಕ್ ಖರೀದಿ ಮಾಡಬೇಕು ಎಂಬ ಗೊಂದಲ ಮೂಡಿದೆ. ಮಾರುಕಟ್ಟೆಯಲ್ಲಿ ನಕಲಿ ಮಾಸ್ಕ್ ಗಳು ಕೂಡ ಲಗ್ಗೆ ಇಟ್ಟಿವೆ.

ಒಂದೇ ಮಾಸ್ಕನ್ನು ತಿಂಗಳುಗಳ ಕಾಲ ಬಳಸುವುದು ಹೇಗೆ?
ಕೆಲವರು ದುಬಾರಿ ವೆಚ್ಚ ಕೊಟ್ಟು ಎನ್‌95 ಮಾಸ್ಕ್ ಕೊಂಡುಕೊಂಡಿರುತ್ತಾರೆ. ಇನ್ನು ಕೆಲವರು ಒಂದು ಮಾಸ್ಕ್ ಅನ್ನು ತಿಂಗಳು ಕಾಲ ಬಳಸುತ್ತಾರೆ. ಆದರೆ ಒಂದು ನಿಮಗೆ ನೆನಪಿರಲಿ ಮೈಕ್ರೋನ್‌ ಗಾತ್ರದಲ್ಲಿರುವ ಇರುವ ಕೋವಿಡ್ ವೈರಸ್‌ ನಿಮ್ಮ ಮಾಸ್ಕ್ ಅನ್ನು ನುಸುಳಿಕೊಂಡು ನಿಮ್ಮ ದೇಹ ಸೇರಲು ಹೆಚ್ಚು ಸಮಯ ಬೇಕಾಗಿಲ್ಲ. ಇದರಿಂದ ನಿಮಗಿಂತ ಮೊದಲೇ ನಿಮ್ಮ ಮಾಸ್ಕ್ ಸೋಂಕಿಗೆ ಒಳಗಾಗಿರುತ್ತದೆ. ಹೀಗಾಗಿ ತಿಂಗಳುಗಳ ಕಾಲ ಒಂದೇ ಮಾಸ್ಕ್ ಬಳಸುವುದು ಅಪಾಯಕಾರಿ. ಆದರೆ ಎನ್‌95 ಮಾಸ್ಕ್ ಅನ್ನು ಬಳಸಬಹುದೇ ಎಂಬುವುದರ ಕುರಿತು ಸಂಶೋಧನೆಯೊಂದು ಹೀಗೆ ಹೇಳುತ್ತದೆ.

ಎನ್‌95 ಮಾಸ್ಕ್ ನ ಕುರಿತು ಅಧ್ಯಯನ ಹೀಗೆ ಹೇಳುತ್ತದೆ:
ಅಧ್ಯಯನವೊಂದು ಎನ್‌95 ಮಾಸ್ಕ್ ಮತ್ತು ಅದರ ಸ್ವಚ್ಛಗೊಳಿಸುವಿಕೆ, ಮರುಬಳಕೆಯ ಕುರಿತು ಹೀಗೆ ಹೇಳುತ್ತದೆ.  ಬಹಳ ದಿನಗಳಿಂದ ಎನ್‌ 95 ಮಾಸ್ಕ್ ತೊಟ್ಟು ಕೋವಿಡ್ ವೈರಸ್‌ ಸೋಂಕಿತ ರೋಗಿಗಳ ಜೊತೆ ನಿರಂತರವಾಗಿ ಒಡನಾಟ ಇಟ್ಟುಕೊಂಡಿರುವವರು ಎನ್‌ 95 ಮಾಸ್ಕ್ ಗಳ ದುಬಾರಿ ವೆಚ್ಚದ ಕಾರಣ ಮತ್ತು ಎಲ್ಲಾ ಕಡೆಯೂ ಸುಲಭವಾಗಿ ಲಭ್ಯವಿಲ್ಲದ ಕಾರಣ ಜತೆಗೆ ಸಂದರ್ಭದ ಒತ್ತಡ ಹೆಚ್ಚಿರುವ ಕಾರಣದಿಂದ ಇದೇ ಮಾಸ್ಕ್ ಗಳನ್ನು ಡಿಸ್ ಇನ್ ಫೆಕ್ಟ್ ಮಾಡಿ ಮತ್ತೂಮ್ಮೆ ಉಪಯೋಗಿಸಲು ಕೆಲವೊಂದು ಸಲಹೆ ನೀಡಿದ್ದಾರೆ.

ಶಾಖ ಒದಗಿಸುವುದು
ಹೆಚ್ಚಾಗಿ ವೈರಸ್‌ ಸೋಂಕಿತ ರೋಗಿಗಳ ಜೊತೆ ಒಡನಾಟ ಇಟ್ಟುಕೊಂಡಿರುವವರು ಎನ್‌ 95 ಗಳ ಫೈಬರ್‌ ಪದರದಲ್ಲಿ ವೈರಸ್‌ ಗಳು ಸಿಕ್ಕಿ ಹಾಕಿಕೊಂಡಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಇವುಗಳನ್ನು ಸುಮಾರು 70 ಡಿಗ್ರಿ ಸೆಲ್ಸಿಯಸ್‌ ನ ತಾಪಮಾನದಲ್ಲಿ ಸುಮಾರು 5 ನಿಮಿಷಗಳ ಕಾಲ ಶಾಖ ಒದಗಿಸಿದರೆ, ವೈರಸ್‌ ಗಳು ಸಾಯುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಈ ಮಾಸ್ಕ್ ಅನ್ನು 50 ಬಾರಿ ಪ್ರಯೋಗಿಸಬಹುದು.

ಎನ್‌ 95 ಮಾಸ್ಕ್ ಅನ್ನು ಈ ರೀತಿ ಸ್ವಚ್ಛ ಮಾಡಬೇಡಿ…
ಎನ್‌95 ಮಾಸ್ಕ್ ಅನ್ನು ಸೋಪ್‌, ಬ್ಲೀಚಿಂಗ್‌ ಪೌಡರ್‌, ಸ್ಟೀಮ್‌ ಉಪಯೋಗಿಸಿ ಸ್ವಚ್ಛ ಮಾಡಬೇಡಿ. ಈ ಮಾಸ್ಕ್ ನಲ್ಲಿರುವ ಒಳಪದರ ಮತ್ತು ಹೀಗೆ ಮಾಡುವುದರಿಂದ ಅದರ ಸೋಸುವಿಕಡೆಯ ಸಾಮರ್ಥ್ಯ ಹಾಳಾಗುತ್ತದೆ. ಇದರಿಂದ ನೀವು ಸುಲಭವಾಗಿ ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಇದೆ.

– ಪೂರ್ಣಿಮಾ ಪೆರ್ಣಂಕಿಲ

Advertisement

Udayavani is now on Telegram. Click here to join our channel and stay updated with the latest news.

Next