Advertisement

ಆಧುನಿಕ ಕಾಮಗಾರಿಯ ನಡುವೆ ಪಕ್ಷಿಗಳ ರಕ್ಷಣೆಗೆ ಏನು ಮಾಡಬಹುದು

04:19 PM Nov 07, 2019 | keerthan |

ಮಣಿಪಾಲ: ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಸಂದರ್ಭದಲ್ಲಿ ಮರಗಳನ್ನು ಕಡಿಯವಾಗ ಪಕ್ಷಿ ಸಂಕುಲದ ರಕ್ಷಣೆಗೆ ಏನು ಕ್ರಮಗಳನ್ನು ಕೈಗೊಳ್ಳಬಹುದು? ಎಂದು ಉದಯವಾಣಿ ಓದುಗರಿಗೆ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ಶರತ್ ಪೂಜಾರಿ: ತಲೆ ಸರಿ ಇಲ್ಲದೆ ಇರುವ ಕಮಂಗಿಗಳು ಸರ್ಕಾರಿ ಕೆಲಸಗಳಲ್ಲಿ ಇದ್ದರೆ ಹೀಗೇ ಆಗೋದು. ಹಣದ ಆಸೆಗೆ ನಮ್ಮ ಪರಿಸರನ ನಾವೇ ಹಾಳು ಮಾಡೋದು. ಸ್ವಲ್ಪನು ಜವಾಬ್ದಾರಿ ಇಲ್ಲದೆ ಇರುವ ಅದಿಕಾರಿಗಳು. ಪಕ್ಷಿಗಳು ಏನ ಕಷ್ಟ ಅನುಭವಿಸ್ತ ಇದ್ದಾವೆ ಮುಂದೆ ಇದೇ ತರ ಆ ಅಧಿಕಾರಿಗಳು ಕೂಡ ಅನುಭವಿಸಬೇಕು.

ಚಂದು ನಾಯಕ: ಪ್ರತೀ 7 ಅಥವಾ 10 ಕಿ.ಮೀ ನಲ್ಲಿ ಸರಕಾರ ಒಂದಿಷ್ಟು ಜಾಗ ಖರೀದಿಸಿ ಅಲ್ಲಿ ಮರಗಳು ಮತ್ತು ಹಣ್ಣಿನ ಗಿಡಗಳನ್ನು ಹಾಕಬೇಕು ಆಗ ಅನುಕೂಲ ಮತ್ತು ಆಹಾರ ಎರಡು ದೊರಕುತ್ತದೆ, ಹಣ್ಣಿನ ಗಿಡ ಮರಗಳಿದ್ದರೆ ಸಾಮಾನ್ಯವಾಗಿ ತುಂಬಾ ಜಾತಿಯ ಪಕ್ಷಿಗಳು ಹಣ್ಣು ತಿನುತ್ತವೆ. ಹಾಗೂ ಅಲ್ಲಿ ಏನಾದರು ಎಲ್ಲಾ ಜಾತಿಯ ಪಕ್ಷಿಗಳು ಬರತೊಡಗಿದಾಗ ಆ ಜಾಗವನ್ನು ಪ್ರವಾಸಿಗರು ನೋಡುವ ಅನುಕೂಲ ಮಾಡಬಹುದು ಮತ್ತು ಖರ್ಚು ಮಾಡುವ ಹಣ ವಾಪಸ್ ಪಡೆಯಬಹುದು.

ರೋಹಿಂದ್ರನಾಥ್ ಕೋಡಿಕಲ್: ಎಲ್ಲಾ ಗೊತ್ತಿದ್ದೂ ನಾಶ ಮಾಡುವ ನಮಗೆ ಯಾತಕ್ಕೆ ಅಭಿಪ್ರಾಯ ತಿಳಿಸಿ ಎಂದು ಕೇಳುತಿರಿ? ನಮಗೆ ಮನೆಯಲ್ಲಿ ನಾಲ್ಕು ಕಾರ್, ಐದು ಆರು ಬೈಕ್ ಬೇಕು. ರಸ್ತೆ ಎಲ್ಲಿಂದ ತರೋಣ?

ಮಹದೇವ ಗೌಡ: ಯಾವುದೆ ಮರಗಳನ್ನ ಕಡಿಯುವ ಒಂದು ವರ್ಷಕ್ಕೂ ಮುನ್ನ 10ಕಿ.ಮೀ ಒಂದರಂತೆ ಕೆರೆಗಳನ್ನು ಮಾಡಿ ಸರ್ಕಾರಿ ಭೂಮಿಯಲ್ಲಿ ಗರಿಷ್ಟ ಸಾಧ್ಯವಿರುವಷ್ಟು ಉದಾೄನವನಗಳನ್ನು ಮಾಡಿ ಹೊಸ ಹಣ್ಣಿನ ಮರಗಳ ಗಿಡಗಳ ನೆಡುವದರ ಜೊತೆಗೆ ಒಂದೊಂದು ಗುಂಟೆಯ ಜಾಗದಲ್ಲಿ ಪಕ್ಷಿಗಳಿಗೆ ಬೇಕಾಗಿರುವ ಕಾಳುಗಳನ್ನ ಬಿತ್ತನೆ ಮಾಡಿ ( ರಾಗಿ, ಜೋಳ , ಮುಸುಕಿನ ಜೋಳ, ದ್ವಿದಳ ದಾನ್ಯಗಳ ) ಕೆಲವು ಇಲಾಖೆಗಳಿಂದ ರಕ್ಷಣೆ ಮಾಡಿಸಿ ರಕ್ಷಣೆ ಮಾಡಿಸಿ ಪಕ್ಷಿಗಳಿಗೆ ಮತ್ತು ಧವಸ ಧಾನ್ಯಗಳನ್ನೂ ಚಲ್ಲಿಸಿ ಪಕ್ಷಿಗಳಿಗೆ ಆಹಾರ ದೊರಕುವಂತೆ ಮಾಡಿದರೇ ಪಕ್ಷಿಗಳ ಸಂತತಿ ಉಳಿಸಕೊಳ್ಳಬಹುದೆನೋ . ರೈತರು ಭೂಮಿಗೆ ರಾಸಯಿನಕ ಗೊಬ್ಬರ ಕಡಿಮೆ ಹಾಕುವದರಿಂದ, ಮನುಷ್ಯರು ಮೊಬೈಲ್ ನಲ್ಲಿ ಕಡಿಮೆ ಮತಾಡುದೂ ಸಹ ಪಕ್ಷಿಗಳ ಸಂತತಿ ಹೆಚ್ಚಲು ಪರೊಕ್ಷ ಕಾರಣವಾಗಬಹುದೆನೋ .

Advertisement

ಸುಮಿತ್ ಬಿರ್ವ: ಪಕ್ಷಿಗಳಿಗೆ ಯಾವ ಮರ ಎಲ್ಲಾ ಋತು ಮಾನದಲ್ಲಿ ಹೆಚ್ಚು ಆಶ್ರಯ ತಾಣ ಆಗಿರುತ್ತೆ ಅಂತ ಮರಗಳ ಗಿಡಗಳನ್ನು ಹೆಚ್ಚು ಬೆಳೆಸುವ ಜವಾಬ್ದಾರಿ ಸರ್ಕಾರ ಮಾಡ್ಬೇಕು. ಯಾವ ಪಕ್ಷಿಯ ಸಂತತಿ ಅಳಿವಿನಂಚಿನಲ್ಲಿನ ಪಕ್ಷಿಗಳ ಸಂತತಿ ಹೆಚ್ಚುಸುವ ಬಗೆ ಏನಾದ್ರು ಪರ್ಯಾಯ ಮಾರ್ಗ ಸರ್ಕಾರ ಕಂಡುಕೊಳ್ಳುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next