Advertisement

ಬಾಯಿ ಹುಣ್ಣಿನ ನಿವಾರಣೆ ಹೇಗೆ ?

11:12 PM Dec 23, 2019 | mahesh |

ಬಾಯಿ ಹುಣ್ಣು ಅಥವಾ ಮೌತ್‌ ಅಲ್ಸರ್‌ ಇದು ಬಾಯಿಯ ಒಳಗಡೆ ಉಂಟಾಗುವುವ ಒಂದು ಹುಣ್ಣು. ಇದರ ನೋವು ಅಸಹನೀಯ. ಈ ಹುಣ್ಣಿನ ನೋವಿನಿಂದಾಗಿ ಜ್ವರ ಬರಬಹುದು, ಆಯಾಸವಾಗಬಹುದು ಮತ್ತು ಹಲ್ಲಿನ ಒಸಡುಗಳು ಊದಿಕೊಳ್ಳಬಹುದು. ಸಾಮಾನ್ಯವಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ, ಉಷ್ಣತೆ ಜಾಸ್ತಿಯಾದಾಗ ಬಾಯಿಯಲ್ಲಿ ಹುಣ್ಣಾಗುತ್ತದೆ. ಅದರಲ್ಲೂ ಉಪ್ಪು ಹುಳಿ ಖಾರಗಳನ್ನು ಬಾಯಿಗೆ ಹಾಕಲು ಸಾಧ್ಯವಾಗುವುದಿಲ್ಲ. ಅತಿಯಾದ ಮಸಾಲೆಯುಕ್ತ ಆಹಾರ, ಆ್ಯಸಿಡಿಕ್‌ ಆಹಾರ ನಮ್ಮ ದೇಹಕ್ಕೆ ಅಲರ್ಜಿಯಾಗುವ ಆಹಾರಗಳನ್ನು ನಾವು ಸೇವಿಸಿದರೆ ಅಥವಾ ಹಲ್ಲನ್ನು ಸರಿಯಾಗಿ ಶುಚಿಗೊಳಿಸದ ಕಾರಣದಿಂದಾಗಿ, ಅತಿಯಾದ ಒತ್ತಡ, ಇಟಮಿನ್‌ ಬಿ, ಸಿ ಸೇರಿದಂತೆ ಪೌಷ್ಠಿಕಾಂಶದ ಕೊರತೆಯಿಂದ ಬಾಯಿಯಲ್ಲಿ ಹುಣ್ಣು ಉಂಟಾಗುವ ಸಾಧ್ಯತೆ ಇದೆ.

Advertisement

ಈ ಸಮಸ್ಯೆಯಿಂದ ನಿಮಗೆ ಮುಕ್ತಿ ಬೇಕಾದರೆ ನೀವು ಮನೆಯಲ್ಲೇ ಈ ಹುಣ್ಣನ್ನು ನಿವಾರಿಸಿಕೊಳ್ಳಬಹುದು.

ತುಳಸಿ ಎಲೆ
ತುಳಸಿ ಎಲೆ ಬಾಯಿ ಹುಣ್ಣಿನ ನಿವಾರಣೆ ಮಾಡುತ್ತದೆ. ಹತ್ತು ದಿನ ತುಳಸಿ ಎಲೆ ಜಗಿದು ನೀರು ಕುಡಿಯಬೇಕು. ಇದರಿಂದಾಗಿ ಬಾಯಿ ಹುಣ್ಣು ಶಮನಗೊಳ್ಳಬಹುದು.

ಮೆಂತೆ ಎಲೆ
ಮೆಂತೆ ಎಲೆಯನ್ನು ನೀರಿನಲ್ಲಿ ಸರಿಯಾಗಿ ಕುದಿಸಿ ದಿನಕ್ಕೆ ಮೂರು ಬಾರಿ ಬಾಯಿ ಮುಕ್ಕಳಿಸುತ್ತಿದ್ದರೆ ಬಾಯಿ ಹುಣ್ಣು ನಿವಾರಣೆಗೊಳ್ಳುತ್ತದೆ.

ಅರಶಿಣ
ಸಾಮಾನ್ಯವಾಗಿ ಅರಶಿಣ ನಮ್ಮ ಎಲ್ಲರ ಮನೆಯಲ್ಲಿ ಸಿಗುವಂತ ವಸ್ತು. ಚಿಟಿಕಿ ಅರಶಿಣವನ್ನು ಹುಣ್ಣು ಆದ ಜಾಗಕ್ಕೆ ಹಚ್ಚುತ್ತಾ ಬಂದರೆ ಹುಣ್ಣು ನಿವಾರಣೆಯಾಗುತ್ತದೆ.

Advertisement

ಬಸಲೆಸೊಪ್ಪು: ಎರಡು ಬಸಲೆ ಸೊಪ್ಪನ್ನು ಚೆನ್ನಾಗಿ ಅಗೆದು ತಿನ್ನಬೇಕು. ಇದನ್ನು ದಿನದಲ್ಲಿ 3-4 ಬಾರಿ ಮಾಡಬೇಕು. ಈ ರೀತಿ ಮಾಡುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

ಜೇನುತುಪ್ಪ
ಹುಣ್ಣಾಗಿರುವ ಜಾಗದಲ್ಲಿ ಜೇನುತುಪ್ಪವನ್ನು ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆದುಕೊಂಡರೆ ಅದರ ಉರಿ ಕಡಿಮೆಯಾಗುತ್ತದೆ. ಜೇನುತುಪ್ಪಕ್ಕೆ ಅರಶಿಣ ಹಾಕಿ ಹುಣ್ಣಾದಲ್ಲಿಗೆ ಹಚ್ಚಿದರೆ 10ರಿಂದ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ ಹುಣ್ಣು ಮಾಯವಾಗುತ್ತದೆ.

ತೆಂಗಿನ ಹಾಲು
ಒಂದು ತೆಂಗಿನ ಕಾಯಿಯ ಹಾಲನ್ನು ತೆಗೆದುಕೊಂಡು ಅದನ್ನು ನಿಧಾನವಾಗಿ ಹುಣ್ಣುಗಳ ಮೇಲೆ ಮಸಾಜ್‌ ಮಾಡುತ್ತಾ ಬಂದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ. ಪ್ರತಿದಿನ ಮಲಗುವ ಮುನ್ನ ಸರಿಯಾಗಿ ಬಾಯಿ ಮುಕ್ಕಳಿಸಿ, ಉಪಹಾರದ ನಂತರವೂ ಈ ರೀತಿ ಮಾಡುವುದರಿಂದ ಬಾಯಿಯಲ್ಲಿ ಉಂಟಾಗುವ ಹುಣ್ಣನ್ನು ತಡೆಗಟ್ಟಬಹುದು.

ಟೊಮೇಟೊ
ಬಾಯಿ ಹುಣ್ಣಿಗೆ ಟೊಮೇಟೊ ಉತ್ತಮ ಕೆಲಸ ಮಾಡುತ್ತದೆ. ಹಸಿಯಾದ ಟೊಮ್ಯಾಟೋ ತಿಂದರೆ ಅಥವಾ ಟೊಮ್ಯಾಟೋ ಜ್ಯೂಸ್‌ ಮಾಡಿ ಅದರಲ್ಲಿ ಬಾಯಿ ಮುಕ್ಕಳಿಸಿಕೊಂಡರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

- ಪೂರ್ಣಿಮಾ ಪೆರ್ಣಂಕಿಲ

Advertisement

Udayavani is now on Telegram. Click here to join our channel and stay updated with the latest news.

Next