Advertisement
ಬೇಕಾಗುವ ವಸ್ತುಗಳು: ಬಟ್ಟೆ ಹಾಸಿದ ಟೇಬಲ್, ನಾಣ್ಯ
ಜಾದೂಗಾರ ತನ್ನ ಎದುರಿನ ಟೇಬಲ್‌ನ ಮಧ್ಯಭಾಗದಲ್ಲಿ ಒಂದು ನಾಣ್ಯವನ್ನು ಇರಿಸುತ್ತಾನೆ. ನಂತರ ಆ ನಾಣ್ಯವನ್ನು ಟೇಬಲ್ ಮೇಲಿನಿಂದ ನಿಧಾನಕ್ಕೆ ತನ್ನತ್ತ ಎಳೆದು, ಕೈಯಲ್ಲಿ ತೆಗೆದುಕೊಂಡು ಗಾಳಿಯಲ್ಲಿ “ಉಫ್’ ಎನ್ನುತ್ತಾ ಮಾಯ ಮಾಡಿಬಿಡುತ್ತಾನೆ.
Related Articles
ಈ ಜಾದೂವಿನ ರಹಸ್ಯ ಅಡಗಿರುವುದು ಕೈ ಚಳಕದಲ್ಲಿ. ಟೇಬಲ್‌ನ ಮಧ್ಯಭಾಗದಲ್ಲಿರುವ ನಾಣ್ಯವನ್ನು ನಿಮ್ಮತ್ತ ಎಳೆದುಕೊಳ್ಳುತ್ತಾ, ಗೊತ್ತಾಗದ ಹಾಗೆ ಕೆಳಗೆ ಬೀಳಿಸಬೇಕು. ಆಗ ನಾಣ್ಯ ನೆಲಕ್ಕೆ ಬೀಳದಂತೆ ಎಚ್ಚರ ವಹಿಸಿ. ನಂತರ ಕೇವಲ ಕೈಯನ್ನಷ್ಟೇ ಬಾಯಿಯ ಬಳಿ ತೆಗೆದುಕೊಂಡು ಹೋಗಿ, ಉಫ್ ಎಂದು ಊದಿದ ಹಾಗೆ ಮಾಡಬೇಕು. ನಾಣ್ಯ ಮಾಯವಾಗಿರುತ್ತದೆ.
Advertisement
ನೀವು ನಿಜಕ್ಕೂ ನಾಣ್ಯವನ್ನು ಗಾಳಿಯಲ್ಲಿ ಮಾಯ ಮಾಡಿದ್ದೀರಿ ಎಂದೇ ನೋಡುಗರು ಭಾವಿಸುತ್ತಾರೆ. ಹಾಗೆ ನಾಣ್ಯವನ್ನು ತಳ್ಳುವಾಗ ಸದ್ದಾಗದ ಹಾಗೆ ಹಾಗೂ ಪ್ರೇಕ್ಷಕರಿಗೆ ಗೊತ್ತಾಗದ ಹಾಗೆ ಜಾಗ್ರತೆ ವಹಿಸಿ. ಪ್ರದರ್ಶನಕ್ಕೂ ಮುನ್ನ ಈ ಜಾದೂ ಕೈಚಳಕ ಕರಗತವಾಗುವವರೆಗೆ ಪ್ರಯೋಗ ಮಾಡಿ.