Advertisement

ಬೈಕ್‌ ಏರ್‌ ಫಿಲ್ಟರ್‌ ನಿರ್ವಹಣೆ ಹೇಗೆ? 

03:11 PM Jul 20, 2018 | Team Udayavani |

ಎಂಜಿನ್‌ ಒಳಗಡೆ ಪೆಟ್ರೋಲ್‌ ಅನ್ನು ದಹಿಸಲು ನೆರವಾಗುವ ಗಾಳಿ ಹಾದು ಹೋಗುವುದು ಏರ್‌ಫಿಲ್ಟರ್‌ ಮೂಲಕ. ಇದರಿಂದ ಎಂಜಿನ್‌ ಒಳಗಡೆ ಕಸ, ಧೂಳು ಹೋಗುವುದಕ್ಕೆ ತಡೆಯಾಗುತ್ತದೆ. ಪ್ರತಿ ಬಾರಿ ಸರ್ವೀಸ್‌ ವೇಳೆ ಏರ್‌ ಫಿಲ್ಟರ್‌ ಅನ್ನು ತೆಗೆದು ಪರೀಕ್ಷಿಸುತ್ತಿರಬೇಕು. ಏರ್‌ ಫಿಲ್ಟರ್‌ ಶುಚಿಯಾಗಿರುವುದರಿಂದ ಉತ್ತಮ ಮೈಲೇಜ್‌, ಪಿಕಪ್‌ ಸಾಧ್ಯವಾಗುತ್ತದೆ.

Advertisement

ಎಲ್ಲಿರುತ್ತವೆ?
ಏರ್‌ ಫಿಲ್ಟರ್‌ಗಳು ಬೈಕ್‌ನ ಪಾರ್ಶ್ವದಲ್ಲಿ ಅಥವಾ ರೈಡರ್‌ ಸೀಟ್‌ ಕೆಳಭಾಗದಲ್ಲಿ ಇರಬಹುದು. ಎಂಜಿನ್‌ ಏರ್‌ ಇಂಟೇಕ್‌ನ ಪೈಪ್‌ ಮುಂಭಾಗ ಇವುಗಳನ್ನು ಅಳವಡಿಸಲಾಗಿರುತ್ತದೆ. ಏರ್‌ ಫಿಲ್ಟರ್‌ಗಳಲ್ಲಿ ವೃತ್ತಾಕಾರವಾದ, ಚಪ್ಪಟೆಯಾದ ಏರ್‌ಫಿಲ್ಟರ್‌ಗಳು, ರೇಸಿಂಗ್‌ ಬೈಕ್‌ಗಳಲ್ಲಿ ತ್ರಿಕೋನಾಕೃತಿ ಶೈಲಿಯ ಏರ್‌ಫಿಲ್ಟರ್‌ಗಳು ಇರುತ್ತವೆ. 

ಎಂಜಿನ್‌ ಉಸಿರಾಟಕ್ಕೆ ನೆರವು
ಉತ್ತಮ ಏರ್‌ಫಿಲ್ಟರ್‌ನಿಂದಾಗಿ ಎಂಜಿನ್‌ ಶುದ್ಧ ಗಾಳಿ ಹೋಗಲು ನೆರವಾಗುತ್ತದೆ. ಏರ್‌ ಫಿಲ್ಟರ್‌ನಲ್ಲಿ ಧೂಳು, ಕಸ ಇದ್ದರೆ ಎಂಜಿನ್‌ ಶಬ್ದದಲ್ಲಿ ವ್ಯತ್ಯಾಸ ಬರಬಹುದು ಅಥವಾ ಎಂಜಿನ್‌ ಬಂದ್‌ ಬೀಳುವುದು, ಬೇಗನೆ ಸ್ಟಾರ್ಟ್‌ ಆಗದೇ ಇರುವುದು ಇತ್ಯಾದಿ ಸಮಸ್ಯೆಗಳು ಕಾಡಬಹುದು.

ಶುಚಿಗೊಳಿಸೋದು ಹೇಗೆ?
ನಿಮ್ಮ ಬೈಕ್‌ನಲ್ಲಿ ಏರ್‌ಫಿಲ್ಟರ್‌ ಎಲ್ಲಿದೆ ಎಂಬುದನ್ನು ಯೂಸರ್‌ ಮ್ಯಾನ್ಯುವಲ್‌ ನೋಡಿ ತೆರೆಯಿರಿ. ಏರ್‌ಫಿಲ್ಟರ್‌ ನಲ್ಲಿ ವ್ಯಾಪಕ ಧೂಳು ಕೂತಿದ್ದರೆ ಸ್ಪಾಂಜ್‌ನಿಂದ ಅದನ್ನು ಕ್ಲೀನ್‌ ಮಾಡಬೇಕು. ಈ ವೇಳೆ ಅದರ ಮೇಲೆ ಯಾವುದೇ ಒತ್ತಡ ಹಾಕುವಂತಿಲ್ಲ ಅಥವಾ ವ್ಯಾಕ್ಯೂಮ್‌ ಕ್ಲೀನರ್‌ ಮೂಲಕ ಹಾಗೂ ಹೈಪ್ರಶರ್‌ ಏರ್‌ ಹಿಡಿಯುವ ಮೂಲಕ ಧೂಳನ್ನು ತೆಗೆಯಬೇಕು. ಬಳಿಕ ಮೊದಲಿದ್ದಂತೆಯೇ ಬೈಕ್‌ ಒಳಗಡೆ ಅದನ್ನು ಅಳವಡಿಸಿ.

ಏರ್‌ಫಿಲ್ಟರ್‌ ಕ್ಲೀನರ್‌
ಆರಂಭದಲ್ಲಿ ಧೂಳನ್ನು ತೆಗೆದ ಬಳಿಕ ಏರ್‌ ಫಿಲ್ಟರ್‌ನಲ್ಲಿ ಇರಬಹುದಾದ ಕಿರು ಕಣಗಳನ್ನು ತೆಗೆದು ಹಾಕಲು ಏರ್‌ ಫಿಲ್ಟರ್‌ ಕ್ಲೀನರ್‌ ಎಂಬಸ್ಟ್ರೆ ಇದೆ. ಇದು ಮಾರುಕಟ್ಟೆಯಲ್ಲಿ ಲಭ್ಯ. ಈಸ್ಟ್ರೆಯನ್ನು ಬಿಟ್ಟ ಮೇಲೆ ಕನಿಷ್ಠ 15 ನಿಮಿಷ ಬಿಸಿಲಿನಲ್ಲಿ ಏರ್‌ಫಿಲ್ಟರನ್ನು ಒಣಗಲು ಬಿಡಬೇಕು. ಸಂಪೂರ್ಣ ಒಣಗಿದ ಬಳಿಕವಷ್ಟೇ ಅದನ್ನು ಬೈಕ್‌ಗೆ ಅಳವಡಿಸಿ. 

Advertisement

ಬದಲಾವಣೆ ಯಾವಾಗ?
ಸಾಮಾನ್ಯವಾಗಿ ಏರ್‌ ಫಿಲ್ಟರ್‌ ಗಳು 12- 18 ಸಾವಿರ ಕಿ.ಮೀ. ವರೆಗೆ ಬಾಳಿಕೆ ಬರುತ್ತವೆ. ಇದರ ಭವಿಷ್ಯ ನಿಮ್ಮ ರಸ್ತೆ, ಚಲಿಸುವ ಪರಿಸರವನ್ನು ಹೊಂದಿಕೊಂಡಿರುತ್ತದೆ. ನಿಮ್ಮ ಬೈಕ್‌ ಅತಿ ಧೂಳಿನ ರಸ್ತೆಯಲ್ಲೇ ಓಡಾಡುತ್ತಿದೆ ಎಂದರೆ ಏರ್‌ಫಿಲ್ಟರ್‌ ಆಯುಷ್ಯ ಕಡಿಮೆಯಾಗಬಹುದು. ಆದರೂ ಸಾಮಾನ್ಯ ಟಾರು ರಸ್ತೆಯಲ್ಲಿ ಸಂಚರಿಸುವ ಬೈಕ್‌ಗಳ ಏರ್‌ಫಿಲ್ಟರ್‌ ಅನ್ನು ಪರಿಶೀಲಿಸುತ್ತ ಉತ್ತಮ ನಿರ್ವಹಣೆ ಮಾಡುತ್ತಿದ್ದಲ್ಲಿ 22 ಸಾವಿರ ಕಿ.ಮೀ. ವರೆಗೂ ಸಮಸ್ಯೆಯಾಗದು. ಬೈಕ್‌ ಪಿಕಪ್‌, ಸ್ಟಾರ್ಟಿಂಗ್‌ ಸಮಸ್ಯೆ, ಎಂಜಿನ್‌ ಎಕ್ಸಲರೇಶನ್‌ ಸಮಸ್ಯೆ ಇದ್ದರೆ ಏರ್‌ಫಿಲ್ಟರ್‌ ಅನ್ನು ಕೂಡಲೇ ಬದಲಾಯಿಸುವುದು ಉತ್ತಮ

 ಈಶ 

Advertisement

Udayavani is now on Telegram. Click here to join our channel and stay updated with the latest news.

Next