Advertisement

ಲಸಿಕೆ ಪ್ರಮಾಣ ಪತ್ರದಲ್ಲಿ ನಿಮ್ಮ ವಿವರಗಳು ತಪ್ಪಿದೆಯೇ..? ಹೀಗೆ ಮಾಡಿ.

04:50 PM Jul 16, 2021 | Team Udayavani |

ನವ ದೆಹಲಿ : ದೇಶದ ಎಲ್ಲರಿಗೂ ಲಸಿಕೆ ತಲುಪಿಸಬೇಕೆಂಬ ಕಾರಣಕ್ಕೆ ಭಾರತ ಸರ್ಕಾರ ಆನ್ ​ಲೈನ್​ ನೋಂದಣಿ ಮಾಡಿಕೊಳ್ಳದವರಿಗೂ, ಸೂಕ್ತ ದಾಖಲೆಗಳನ್ನು ಹೊಂದಿಲ್ಲದವರಿಗೂ ಲಸಿಕೆ ನೀಡಲು ಕ್ರಮಕೈಗೊಂಡಿದೆ. ಆನ್​ ಲೈನ್​ ಮೂಲಕ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆದವರಿಗೆ ಅದಕ್ಕೆ ಸಂಬಂಧಿಸಿದಂತೆ ಪ್ರಮಾಣ ಪತ್ರವೊಂದು ಕಾಣುತ್ತದೆ.

Advertisement

ನೋಂದಣಿ ಮಾಡಿಕೊಳ್ಳುವಾಗ ಒಂದು ವೇಳೆ ಅದರಲ್ಲಿ ಹೆಸರು, ವಯಸ್ಸು, ಲಿಂಗ ಇತ್ಯಾದಿ ವಿವರಗಳೇನಾದರೂ ತಪ್ಪಾಗಿ ನಮೂದಿಸಲ್ಪಟ್ಟರೆ ಏನು ಮಾಡಬೇಕು? ಅದನ್ನು ಕೊವಿನ್​ ಪೋರ್ಟಲ್ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ. ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಏನೇ ತಪ್ಪುಗಳಿದ್ದರೂ ನೀವು ಚಿಂತೆ ಮಾಡಬೇಕಿಲ್ಲ. ಏಕೆಂದರೆ ಅದನ್ನು ಸುಲಭವಾಗಿ ಸರಿಪಡಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ : ಮೂರನೇ ಕೋವಿಡ್ ಅಲೆ ಎದುರಿಸಲು ಸಜ್ಜಾಗಿ: ಕಲಬುರಗಿ ಜನಕ್ಕೆ ಮುರುಗೇಶ್ ನಿರಾಣಿ ಸೂಚನೆ

ಈ ಕುರಿತಾಗಿ ಆರೋಗ್ಯ ಸೇತುವಿನ ಅಧಿಕೃತ ಟ್ವಿಟರ್​ ಖಾತೆಯ ಮೂಲಕ ಮಾಹಿತಿ ನೀಡಿದ್ದು, ಹೆಸರು, ಭಾವಚಿತ್ರ, ಗುರುತಿನ ಚೀಟಿ ಸಂಖ್ಯೆ, ಜನ್ಮ ದಿನಾಂಕ ಹಾಗೂ ಲಿಂಗ ಇತ್ಯಾದಿ ವಿವರಗಳನ್ನು ಕೊವಿನ್​ ಪೋರ್ಟಲ್ ​ನಲ್ಲೇ ಸರಿಪಡಿಸಬಹುದಾಗಿದೆ ಎಂದು ಹೇಳಿದೆ.


ಲಸಿಕೆ ಪ್ರಮಾಣ ಪತ್ರದಲ್ಲಿ ನಿಮ್ಮ ವಿವರಗಳನ್ನು ಸರಿಪಡಿಸಿಕೊಳ್ಳಬಹುದಾದ ವಿವರಗಳು 

Advertisement

* ಕೊವಿನ್​​ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ

* ನೋಂದಾಯಿತ ಮೊಬೈಲ್​ ಸಂಖ್ಯೆ ಹಾಗೂ ಓಟಿಪಿ ಸಹಾಯದಿಂದ ಲಾಗಿನ್​ ಆಗಿ

*ವೆಬ್ ​ಸೈಟ್ ​ನ ಮೇಲ್ಭಾಗದ ಬಲತುದಿಯಲ್ಲಿ ರೈಸ್​ ಆ್ಯನ್ ಇಶ್ಯೂ ಎಂಬ ಆಯ್ಕೆ ಕಾಣ ಸಿಗುತ್ತದೆ.

*ಅದರಲ್ಲಿ ಕರೆಕ್ಷನ್​ ಇನ್​ ವ್ಯಾಕ್ಸಿನ್​ ಸರ್ಟಿಫಿಕೇಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ

*ನಿಮ್ಮ ವಿವರಗಳನ್ನು ಈಗ ಸರಿಪಡಿಸಿ ನಂತರ ಮುಂದುವರೆಯಿರಿ

*ನೀವು ಏನೇನು ಬದಲಾವಣೆ ಮಾಡಿದ್ದೀರಿ ಎನ್ನುವುದು ಕಾಣಲಿದೆ.

ಅದನ್ನು ಮತ್ತೊಮ್ಮೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ.

ವಿ.ಸೂ: ಈ ಬದಲಾವಣೆಯನ್ನು ಒಮ್ಮೆ ಮಾತ್ರ ಮಾಡಲು ಸಾಧ್ಯವಿರುವ ಕಾರಣದಿಂದಾಗಿ, ಜಾಗರೂಕತೆಯಿಂದ ಮಾಡುವುದು ಒಳಿತು.

ಇದನ್ನೂ ಓದಿ : ಕರ್ಪ್ಯೂ ನಿಯಮ ಉಲ್ಲಂಘಿಸಿದವರಿಗೆ ಮಧ್ಯರಾತ್ರಿ ವ್ಯಾಯಾಮ ಮಾಡಿಸಿದ ಪೊಲೀಸರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next