Advertisement
ಸದ್ಯ ಚಿನ್ನದ ಬೆಲೆ 10 ಗ್ರಾಂ.ಗೆ 55,500 ರೂಪಾಯಿಗಳನ್ನು ದಾಟಿದೆ.
Related Articles
Advertisement
ಏನಿದು ಬಾಂಡ್?ಸಾರ್ವಭೌಮ ಗೋಲ್ಡ್ ಅಥವ ಸಾವರೀನ್ ಗೋಲ್ಡ್ ಬಾಂಡ್ ಸರಕಾರದ ಬಾಂಡ್ ಆಗಿದೆ. ಇದನ್ನು ಡಿಮ್ಯಾಟ್ ರೂಪದಲ್ಲಿ ಪರಿವರ್ತಿಸಬಹುದಾಗಿದೆ. ಇದರ ಮೌಲ್ಯವನ್ನು ರೂಪಾಯಿ ಅಥವಾ ಡಾಲರ್‌ಗಳ ಮುಖಬೆಲೆಯಲ್ಲಿ ಅಳೆಯಲಾಗುವುದಿಲ್ಲ. ಬದಲಾಗಿದೆ ಚಿನ್ನದ ಮಾರುಕಟ್ಟೆಯ ಮೂಲಕ ದರ ನಿಗದಿ ಪಡಿಸಲಾಗುತ್ತದೆ. ಬಾಂಡ್ 5 ಗ್ರಾಂ. ಚಿನ್ನದ್ದಾದ್ದರೆ, ಐದು ಗ್ರಾಂ ಚಿನ್ನದ ಬೆಲೆ ಬಾಂಡ್ ಬೆಲೆಗೆ ಸಮನಾಗಿರುತ್ತದೆ. ಸಾವರೀನ್ ಗೋಲ್ಡ್ ಬಾಂಡ್‌ಗಳನ್ನು ಸೆಬಿ (SEBI) ಡೀಲರ್‌ಗಳ ಮೂಲಕ ಖರೀದಿಸಬೇಕು. ಬಾಂಡ್ ಅನ್ನು ರಿಡೀಮ್ ಮಾಡುವ ಸಮಯದಲ್ಲಿ ಹಣವನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಬಾಂಡ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡುತ್ತದೆ. ಎಂಸಿಎಕ್ಸ್ ಪ್ರಕಾರ, ಆಗಸ್ಟ್ 6ರಂದು ಚಿನ್ನದ ದರವು 10 ಗ್ರಾಂ.ಗೆ 55,500 ರೂ. ದಾಟುವ ಸಾಧ್ಯತೆ ಇದೆ. ಅದರ ಅನ್ವಯ 1 ಗ್ರಾಂ. ಚಿನ್ನದ ಬೆಲೆ 5,550 ರೂ. ಆಗಲಿದ್ದು, ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಡಿಯಲ್ಲಿ ಪ್ರತಿ ಗ್ರಾಂ.ಗೆ 5,334 ರೂ. ಎಂದು ನಿಗದಿಪಡಿಸಲಾಗಿದೆ. ಅಂದರೆ ಪ್ರತಿ ಗ್ರಾಂ.ಗೆ 216 ರೂ. ಕಡಿಮೆ ಪಾವತಿಸಬೇಕಾಗುತ್ತದೆ. ಶೇ. 4ರ ಮರುಪಾವತಿ ಇದೆ
ಆಗಸ್ಟ್ 3ರಿಂದ ಆಗಸ್ಟ್ 7ರ ವರೆಗೆ ನಡೆಯಲಿರುವ ಸಾವರೀನ್ ಗೋಲ್ಡ್‌ಬಾಂಡ್‌ಗಳ ಮಾರಾಟವನ್ನು ಆರ್‌ಬಿಐ ಪ್ರಾರಂಭಿಸಲಿದೆ. ಇದರನ್ವಯ ಕೇವಲ 3 ದಿನಗಳಲ್ಲಿ ಶೇ. 4ರ ಲಾಭವನ್ನು ನೀಡಲಿದೆ. ಸ್ಥಿರ ಠೇವಣಿಗಳ ಮೇಲೆ ಒಂದು ವರ್ಷದಲ್ಲಿ ಇದರ ಲಾಭ ದೊರೆಯಲಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಮತ್ತು ಡಿಜಿಟಲ್ ಪಾವತಿ ಮೂಲಕ ಪಾವತಿಸುವವರು ಪ್ರತಿ ಗ್ರಾಂ.ಗೆ 50 ರೂಪಾಯಿ ರಿಯಾಯಿತಿ ಪಡೆಯಲಿದ್ದಾರೆ. ಶೇ. 2.50 ಬಡ್ಡಿ
ಸಾವರೀನ್ ಗೋಲ್ಡ್ ಬಾಂಡ್‌ಗಳು ಪ್ರತಿವರ್ಷ ಶೇ. 2.50ರಷ್ಟು ಬಡ್ಡಿಯನ್ನು ತಂದುಕೊಡಲಿವೆ. ಈ ಹಣವನ್ನು ಪ್ರತಿ 6 ತಿಂಗಳಿಗೊಮ್ಮೆ ಸ್ವಯಂಚಾಲಿತವಾಗಿ ಖರೀದಿದಾರನ ಖಾತೆಗೆ ಜಮಾ ಮಾಡಲಾಗುತ್ತದೆ. ಸದ್ಯಕ್ಕೆ ಇಂತಹ ಲಾಭ ಬೇರೆಯಾವುದೇ ಬಾಂಡ್ ಯೋಜನೆಗಳಲ್ಲಿ ಇಲ್ಲ. ಎನ್‌ಎಸ್‌ಇ ಮಾಹಿತಿಯ ಪ್ರಕಾರ, 8 ವರ್ಷಗಳ ಮುಕ್ತಾಯದ ಅವಧಿಯ ಬಳಿಕ ಸಾವರೀನ್ ಗೋಲ್ಡ್ ಬಾಂಡ್‌ಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. ಅಲ್ಲದೆ ಪ್ರತಿ ಆರು ತಿಂಗಳಿಗೊಮ್ಮೆ ಪಾವತಿಸುವ ಬಡ್ಡಿಗೆ ಯಾವುದೇ ಟಿಡಿಎಸ್ ಇರುವುದಿಲ್ಲ. ಎಷ್ಟು ಚಿನ್ನವನ್ನು ಖರೀದಿಸಬಹುದು?
ಒಬ್ಬ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ ಕನಿಷ್ಠ 1 ಗ್ರಾಂ. ಮತ್ತು ಗರಿಷ್ಠ 4 ಕೆ.ಜಿ.ಯ ಬಾಂಡ್‌ಗಳನ್ನು ಖರೀದಿಸಬಹುದು. ಆದರೆ ಒಂದು ಟ್ರಸ್ಟ್ ಅಥವ ಸಂಸ್ಥೆ ಪ್ರತಿವರ್ಷ ಗರಿಷ್ಠ 20 ಕೆ.ಜಿ. ಬಾಂಡ್‌ಗಳನ್ನು ಖರೀದಿಸಬಹುದಾಗಿದೆ. ಇದು 8 ತಿಂಗಳ ಅವಧಿಯನ್ನು ಹೊಂದಿದೆ. ಆದರೆ ಹೂಡಿಕೆದಾರ 5 ವರ್ಷಗಳ ಬಳಿಕ ಅಥವ 3 ವರ್ಷದ ಮೊದಲೇ ನಿರ್ಗಮಿಸಬಹುದಾಗಿದೆ. ಅಂತಹ ಸಂದರ್ಭದಲ್ಲಿ ಅದನ್ನು ನಗದು ರೂಪದಲ್ಲಿ ಪಡೆದುಕೊಳ್ಳಬಹುದು. ಎನ್‌ಎಸ್‌ಇ ಪ್ರಕಾರ, ಸಾವರೀನ್ ಗೋಲ್ಡ್ ಬಾಂಡ್‌ಗಳನ್ನು ಬ್ಯಾಂಕ್ ಸಾಲ ತೆಗೆದುಕೊಳ್ಳುವ ಸಂದರ್ಭ ಆಸ್ತಿಯ ರೂಪದಲ್ಲಿ ಬಳಸಬಹುದು. ಶೇ. 42ರಷ್ಟು ಆದಾಯ
ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಗಳು ಶೇ. 42ಕ್ಕಿಂತ ಹೆಚ್ಚಾಗಿದೆ. ಆಗಸ್ಟ್ 2019ರಂದು ಚಿನ್ನದ ಬೆಲೆ 38,950 ರೂ. ಆಗಿತ್ತು. ಇದೀಗ 10 ಗ್ರಾಂ.ಗೆ 55,500 ರೂ. ಆಗಿದೆ. ಕೊರೊನಾ ಕಾಲದಲ್ಲಿ ಇದೇ ಅನಿಶ್ಚಿತತೆ ಮುಂದುವರಿದರೆ ಅದರ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.