Advertisement
ಬಳ್ಳಿಯ ರೂಪದ ಗಿಡದಲ್ಲಿ ಬೆಳೆಯುವ ಸೋರೆಕಾಯಿ ಹೇರಳ ಪೌಷ್ಟಿಕಾಂಶ ಹೊಂದಿರುವ ತರಕಾರಿ. ಇತರ ಬೆಳೆಗಳಿಗೆ ಹೋಲಿಸಿದರೆ ಸೋರೆ ಸುಲಭ ಮತ್ತು ಕಡಿಮೆ ಖರ್ಚಿನ ತರಕಾರಿ ಬೆಳೆ ಮತ್ತು ನಿರ್ದಿಷ್ಟ ಸ್ಥಳಾವಕಾಶವನ್ನೂ ಸೋರೆ ಕೃಷಿ ಬಯಸುವುದಿಲ್ಲ. ಔಷಧದ ತಯಾರಿಯಲ್ಲಿ ಸೋರೆಕಾಯಿ ಪ್ರಯೋಜನಕಾರಿ.
ಪೌಷ್ಟಿಕಾಂಶಗಳು ಹೇರಳವಾಗಿ ಹೊಂದಿರುವ ಸೋರೆಕಾಯಿಯಿಂದ ಪಲ್ಯ, ಮೇಲೋಗರ, ಹುಳಿ ಸಾರು, ಸಾಂಬಾರು, ದೋಸೆ, ಪಾಯಸ, ಕೊಟ್ಟಿಗೆ ಇತ್ಯಾದಿಗಳನ್ನು ತಯಾರಿಸುತ್ತಾರೆ. ಗೊಬ್ಬರ
ಸೋರೆ ಕೃಷಿಗೆ ಗೊಬ್ಬರವಾಗಿ ಸೊಪ್ಪು, ನೆಲಗಡಲೆ ಹಿಂಡಿಯನ್ನು ಬಳಸಬಹುದು. ಹಿತ್ತಿಲಲ್ಲಿ ಸಿಗುವ ಬಾಡಿದ ಹೂಗಳು, ಪದಾರ್ಥಕ್ಕೆ ತರಕಾರಿ ತುಂಡರಿಸಿದಾಗ ಎಸೆಯುವ ತರಕಾರಿ ಸಿಪ್ಪೆ, ತಿರುಳು, ಚಹಾದ ಕರಿ, ಈರುಳ್ಳಿ ಕಸ ಇತ್ಯಾದಿಗಳನ್ನೂ ಬಳಸಬಹುದು.
Related Articles
ಬೆಳೆಯುವ ಸೋರೆಗೆ ಶೈತ್ಯ ಹವಾಗುಣ ಅಷ್ಟು ಸಹಕಾರಿಯಲ್ಲ. ಬೆಳಕು, ಹೆಚ್ಚಿನ ಉಷ್ಣತೆ ಇದ್ದಾಗ ಸೋರೆಯಲ್ಲಿ ಹೂಗಳು ಅಧಿಕ ಸಂಖ್ಯೆಯಲ್ಲಿ ಮೂಡುತ್ತವೆ. ಜೂನ್- ಜುಲೈ, ಅಕ್ಟೋಬರ್- ನವೆಂಬರ್ ಅಥವಾ ಫೆಬ್ರವರಿ- ಮಾರ್ಚ್ ತಿಂಗಳುಗಳು ಸೋರೆ ಬೆಳೆಯಲು ಸೂಕ್ತ ಸಮಯ ಹೀಗೆ ಬೆಳೆಯಿರಿ.
Advertisement
*ಬೀಜ ಬಿತ್ತನೆಯ ವಾರದಲ್ಲಿ ಗಿಡ ಮೊಳಕೆ ಬರುತ್ತವೆ
*ಗಿಡ ಮೊಳಕೆ ಬಂದು ಒಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಗೊಬ್ಬರ ಹಾಕಬೇಕು.*ಮತ್ತೂಂದು ವಾರದಲ್ಲಿ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ನೆಡಬಹುದು.
*ಬಳ್ಳಿ ಹಬ್ಬಿ ಬೆಳೆಯಲು ಚಪ್ಪರ ಹಾಕಿದರೆ ಉತ್ತಮ ಅಥವಾ ಸ್ಥಳಾವಕಾಶ ಬೇಕಾದಷ್ಟಿದ್ದರೆ ನೆಲದಲ್ಲಿಯೇ ಬಳ್ಳಿ ಹಬ್ಬಲು ಬಿಡಬಹುದು.
*ತಾರಸಿ ಮೇಲೆಯೂ ಬಳ್ಳಿಯನ್ನು ಬಿಟ್ಟರೆ ಸೋರೆಕಾಯಿ ಬೆಳೆಯುತ್ತದೆ.