Advertisement

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

12:46 AM May 25, 2020 | Sriram |

ಈ ಕೋವಿಡ್- 19 ಲಾಕ್‌ಡೌನ್‌ ಅವಧಿಯಲ್ಲಿ ತವರಿಗೆ ಮರಳುವ ಗಡಿಬಿಡಿಯಲ್ಲಿ ನೀವು ನಿಮ್ಮ ಆಧಾರ್‌ ವಿಶಿಷ್ಟ ಗುರುತಿನ ಸಂಖ್ಯೆ ಇಲ್ಲವೇ ದಾಖಲಾತಿ ಐಡಿ ಕಳೆದುಕೊಂಡಿದ್ದಲ್ಲಿ ಮೊದಲು, ನೀವು ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಬೇಕು. ದೂರಿನ ಎಫ್ಐಆರ್‌ ಕಾಪಿಯನ್ನಿಟ್ಟುಕೊಂಡು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದರೆ ನೀವು ಸುಲಭವಾಗಿ ನಿಮ್ಮ ಆಧಾರ್‌ ಸಂಖ್ಯೆಗನು ಗುಣವಾಗಿ ಹೊಸ ಕಾರ್ಡ್‌ ಪಡೆಯಬಹುದು.

Advertisement

ಏನೆಲ್ಲಾ ಬೇಕಾಗುತ್ತೆ?
-ಆಧಾರ್‌ ಸಂಖ್ಯೆ
-ಆಧಾರ್‌ ಜತೆ ಲಿಂಕ್‌ ಮಾಡಿ ರುವ ಮೊಬೈಲ್‌ ಸಂಖ್ಯೆ ಇಲ್ಲವೇ ಇಮೇಲ್‌ ವಿಳಾಸ
-ಆಧಾರ್‌ ಕಳೆದ ಬಗ್ಗೆ ಪೊಲೀಸ್‌ ಠಾಣೆಗೆ ನೀಡಿದ ದೂರಿನ ಪ್ರತಿ (ಎಫ್‌ಐಆರ್‌)

ವಿಧಾನ 1: ಆಧಾರ್‌ ಸಂಖ್ಯೆ, ಮೊಬೆ„ಲ್‌ ಸಂಖ್ಯೆ ಗೊತ್ತಿದ್ದರೆ, ಆ ಸಂಖ್ಯೆ ಈಗಲೂ ಕಾರ್ಯನಿರ್ವಹಿಸುತ್ತಿದ್ದು, ನಿಮ್ಮ ಬಳಿಯೇ ಇದ್ದರೆ ಶೇ.95 ಕೆಲಸ ಮುಗಿದಂತೆ. ಹಾಗಿ ದ್ದಲ್ಲಿ, ನೇರವಾಗಿ https://eaadhaar.uidai.gov.in/#/ ಗೆ ಲಾಗ್‌ಇನ್‌ ಆಗಿ ಅಥವಾ ಮೊಬೆ„ಲ್‌ನಲ್ಲಿರುವ ಎಂಆಧಾರ್‌ ಆ್ಯಪ್‌ ಮೂಲಕ ಇ ಆಧಾರ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಂಡು ಪ್ರಿಂಟ್‌ ತೆಗೆದುಕೊಳ್ಳಬಹುದು. ನಿಮಗೆ ಕಾರ್ಡ್‌ ಪೋಸ್ಟ್‌ ಮೂಲಕ ಬೇಕಿದ್ದರೆ ಅದೇ ವೆಬ್‌ಸೈಟ್‌ನಲ್ಲಿ 50 ರೂ. ಪಾವತಿಸಿ, ಮನವಿ ಸಲ್ಲಿಸಬೇಕು. 5-6 ದಿನಗಳಲ್ಲಿ ಆಧಾರ್‌ ಕಾರ್ಡ್‌ ಬರುತ್ತದೆ.

ವಿಧಾನ 2: ನಿಮಗೆ 12 ಅಂಕಿಗಳ ಆಧಾರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ/ಇಮೇಲ್‌ ಐಡಿ ಗೊತ್ತಿಲ್ಲದಿದ್ದರೆ ಮಾತ್ರ ಈ ವಿಧಾನ ಸಹಕಾರಿ. ಆಧಾರ್‌ ಸಹಾಯವಾಣಿ 1947ಕ್ಕೆ ಕರೆ ಮಾಡಿ. ಹೆಸರು, ಜನನ ದಿನಾಂಕ ಅಥವಾ ವರ್ಷ, ಪಿನ್‌ಕೋಡ್‌ ಸೇರಿ ಗ್ರಾಹಕ ಸೇವಾ ಪ್ರತಿನಿಧಿ  ಕೇಳುವ ಎಲ್ಲ ವಿವರಗಳನ್ನು ಒದಗಿಸಿ. ಬಳಿಕ ಪ್ರತಿನಿಧಿಯು ನೀಡುವ ದಾಖಲಾತಿ ಐಡಿ ಸಂಖ್ಯೆಯನ್ನು ಒಂದೆಡೆ ಬರೆದುಕೊಳ್ಳಿ. ಈ ದಾಖಲಾತಿ ಐಡಿ ಸಂಖ್ಯೆ ಬಳಸಿ ನಿಮ್ಮ ಆಧಾರ್‌ ಪ್ರಿಂಟ್‌ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next