Advertisement
ಡಿಜಿಟಲೀಕರಣದ ಇನ್ನೊಂದು ಹೆಜ್ಜೆವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ಪ್ರತಿಯೊಂದನ್ನೂ ಕೇಂದ್ರ ಸರ್ಕಾರ ಡಿಜಿಟಲೀಕರಣ ಮಾಡುತ್ತಿದೆ. ಅಂದರೆ ಆನ್‌ಲೈನ್ ಮೂಲಕವೇ ಯಾವುದನ್ನೇ ಆದರೂ ಪಡೆಯುವುದು. ಆಧಾರ್ ಕಾರ್ಡ್‌ನಿಂದ ಹಿಡಿದು, ಪಾನ್‌ಕಾರ್ಡ್‌ವರೆಗೆ ಈಗ ಆನ್‌ಲೈನ್ ಮೂಲಕವೇ ಪಡೆದುಕೊಳ್ಳಲು ಸಾಧ್ಯವಿದೆ. ಪಾನ್‌ಕಾರ್ಡ್ ಅನ್ನು ಡಿಜಿಟಲ್ ರೂಪದಲ್ಲಿ ಪಡೆಯುವುದು, ಕೇಂದ್ರದ ಅತ್ಯಂತ ಮಹತ್ವದ ಹೆಜ್ಜೆ.
ಮೇ 28ರಿಂದ ಅಧಿಕೃತ ಆರಂಭ
ಪಾನ್‌ಕಾರ್ಡ್ ಅನ್ನೂ ಡಿಜಿಟಲ್ ರೂಪದಲ್ಲಿ ನೀಡಲಾಗುವುದು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷದ ಮುಂಗಡಪತ್ರದಲ್ಲೇ ತಿಳಿಸಿದ್ದರು. ಆದರೆ ಫೆ.20ರಿಂದಲೇ ಆದಾಯ ತೆರಿಗೆ ಇಲಾಖೆಯ ಇ- ಫೈಲಿಂಗ್ ವೆಬ್‌ಸೈಟ್‌ನಲ್ಲಿ ಪಾನ್‌ಕಾರ್ಡ್ ಪಡೆಯುವ ಪ್ರಾಯೋಗಿಕ ಆವೃತ್ತಿ ಲಭ್ಯವಿತ್ತು. ಮೇ 28ರಿಂದ ಈ ವ್ಯವಸ್ಥೆಯನ್ನು ಅಧಿಕೃತವಾಗಿ ಆರಂಭಿಸಲಾಗಿದೆ.
ಕೇಂದ್ರಸರ್ಕಾರ ಈಗಾಗಲೇ ಡಿಜಿಟಲ್ ಪಾನ್ ಪಡೆಯಲು ಇ-ಕೆವೈಸಿ ಎಂಬ ವ್ಯವಸ್ಥೆಯನ್ನು ಜಾರಿ ಮಾಡಿದೆ. ನಿಮ್ಮ ಬಳಿ ಆಧಾರ್ ಸಂಖ್ಯೆ ಹಾಗೂ ಆಧಾರ್‌ನಲ್ಲಿ ನೋಂದಾಯಿಸಲ್ಪಟ್ಟಿರುವ ಮೊಬೈಲ್ ಸಂಖ್ಯೆ ಇದ್ದರೆ, ಡಿಜಿಟಲ್ ಪಾನ್ ಪಡೆಯಬಹುದು.