Advertisement
ಮ್ಯೂಚುವಲ್ ಫಂಡ್ ಹೂಡಿಕೆ ಮತ್ತಷ್ಟು ಜನಪ್ರಿಯವಾಗುತ್ತಿದೆ. ನೇರವಾಗಿ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಹುತೇಕ ಜನ ಹಿಂಜರಿಯುತ್ತಾರೆ. ಕಾರಣ ಅಲ್ಲಿರುವ ನಷ್ಟಕ್ಕೊಳಗಾಗಬಹುದಾದ ಅಂಜಿಕೆ, ಅನುಭವ, ಮಾಹಿತಿ ಕೊರತೆ. ಮ್ಯೂಚುವಲ್ ಫಂಡ್ ಪರಿಕಲ್ಪನೆ ತುಂಬಾ ಹಳೆಯದು. ಹಿಂದೆ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಇದನ್ನು 1964ರಲ್ಲೇ ಜಾರಿಗೆ ತಂದಿತ್ತು. ಅದೊಂದು ಯೋಜನೆಗೆ ಯುನಿಟ್-64 ಎಂದೇ ಹೆಸರಿತ್ತು. ಅದರಲ್ಲಿ ಹೂಡಿಕೆ ಮಾಡುವವರಿಗೆ ಎನ್.ಎ.. ಆಧಾರದ ಮೇಲೆ ಯುನಿಟ್ ಗಳ ಹೂಡಿಕೆಯಾಗುತ್ತಿತ್ತು. ಖಾಸಗಿ ಸಂಸ್ಥೆಗಳು ಮ್ಯೂಚುವಲ್ ಫಂಡ್ ವಹಿವಾಟು ಆರಂಭಿಸುವ ಮೊದಲು ಇದ್ದ ಏಕೈಕ ಮ್ಯೂಚುವಲ್ ಫಂಡ್ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಆಗಿತ್ತು. ಆಗಲೂ ಸಹ ತಿಂಗಳಿಗೊಮ್ಮೆ ಯು.ಟಿ.ಐ. ಯುನಿಟ್‌ಗಳ ಪರ್ಚೇಸ್ ಮತ್ತು ರಿಪರ್ಚೆಸ್ ದರಗಳು ಘೋಷಣೆಯಾಗುತ್ತಿದ್ದವು. ಆ ದಿನಗಳಲ್ಲಿ ಈ ಯುನಿಟ್‌ಗಳನ್ನು ಬ್ಯಾಂಕಿನಲ್ಲಿ ಅಡಮಾನವಿಟ್ಟು ಸಾಲ ಪಡೆಯಬಹುದಿತ್ತು. 1990ರ ದಶಕದ ತನಕವೂ ಯುನಿಟ್ ಟ್ರಸ್ಟ್ ಆಫ್ ಇಂಡಿಯಾದ ಈ ಯೋಜನೆ ಅತ್ಯಾಕರ್ಷಕವಾಗಿತ್ತು, ಬ್ಯಾಂಕ್ ಡಿಪಾಜಿಟ್‌ನಲ್ಲಿ ಸಿಗುವ ಇಳುವರಿಗಿಂತ ಹೆಚ್ಚಿನ ಲಾಭ ಇಲ್ಲಿ ಹೂಡಿಕೆದಾರರಿಗೆ ದಕ್ಕುತ್ತಿತ್ತು.
Related Articles
Advertisement
ಸಾಲ ಉಂಟು, ನೇರವಾಗಲ್ಲಬ್ಯಾಂಕಿನಲ್ಲಿರುವ ಫಿಕ್ಸೆಡ್ ಡಿಪಾಜಿಟ್. ಜೀವವಿಮೆಯ ಖಾತೆಯಲ್ಲಿ ಜಮೆಯಾಗಿರುವ ಮೊತ್ತದ ಮೇಲೆ ಸಾಲ ಪಡೆಯುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಎಲ್.ಐ.ಸಿ. ಪಾಲಿಸಿಗಳ ಸರೆಂಡರ್ ವಾಲ್ಯೂ ಮೇಲೆ ಶೇ:70-80 ರ ತನಕದ ಸಾಲ ನೀಡಿಕೆ ಸೌಲಭ್ಯ ಇದೆ. ಅಂತಹ ಸಾಲವನ್ನು ಆಯಾ ಜೀವವಿಮಾ ಕಚೇರಿಯಿಂದ ಪಡೆಯಬಹುದು, ಇಲ್ಲವೇ ಬ್ಯಾಂಕುಗಳಿಗೆ ಪಾಲಿಸಿ ಅಡಮಾನ ಮಾಡಿಯೂ ಸಾಲವನ್ನು ಪಡೆಯಬಹುದು. ಬಡ್ಡಿದರವೂ ಬೇರೆ ಸಾಲಗಳಿಗಿರುವ ಬಡ್ಡಿದರಕ್ಕಿಂತ ಕಡಿಮೆ ಇರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ನೀವು ಒಂದು ನಿರ್ದಿಷ್ಟ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತಿದ್ದೀರಿ, ಮಾಹೆಯಾನ ನಿರ್ದಿಷ್ಟ ಮೊತ್ತ ನಿಮ್ಮ ಬ್ಯಾಂಕ್ ಖಾತೆಯಿಂದ ಎಸ್.ಐ.ಪಿ. ಮೂಲಕ ಹೂಡಿಕೆಯಾಗುತ್ತಾ ಇದೆ ಎಂದಿಟ್ಟುಕೊಳ್ಳಿ. ನಿಮಗೆ ಯಾವುದೇ ತುರ್ತು ಉದ್ದೇಶಕ್ಕೆ ಹಣಕಾಸಿನ ಅಗತ್ಯವಿದ್ದಲ್ಲಿ ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆಯ ಮೇಲೆ ಸಾಲವನ್ನು ಪಡೆಯಬಹುದು. ಈ ರೀತಿ ಸಾಲ ಪಡೆಯುವುದಕ್ಕೂ ನಿಮ್ಮ ನಿಯಮಿತ ಎಸ್.ಐ.ಪಿ. ಮೂಲಕ ಆಗುವ ಅಂಶಿಕ ಹೂಡಿಕೆಗೂ ಸಂಬಂಧವಿಲ್ಲ. ನೀವು ಮ್ಯೂಚುವಲ್ ಫಂಡ್‌ನ ಹೂಡಿಕೆಯನ್ನು ಕೊನೆಗೊಳಿಸುವ ಅಗತ್ಯವೂ ಇಲ್ಲ. ಅದು ಅದರಷ್ಟಕ್ಕೆ ಆಗುತ್ತಿರುತ್ತದೆ. ಈ ರೀತಿಯ ಸಾಲವನ್ನು ಮ್ಯೂಚುವಲ್ ಫಂಡ್ ನಿರ್ವಹಣೆ ಮಾಡುತ್ತಿರುವ ಕಂಪನಿಗಳು ಕೊಡುವುದಿಲ್ಲ. ಗಮನಿಸಿ: ಬ್ಯಾಂಕ್, ಎಲ್.ಐ.ಸಿ. ಅಥವಾ ಬೇರೆ ವಿಮಾ ಕಂಪನಿಗಳಲ್ಲಿ ಹೂಡಿಕೆ ಪಡೆದಿರುವ ಆಯಾ ಸಂಸ್ಥಾಪನೆಗಳೇ ಹೂಡಿಕೆದಾರರಿಗೆ ಸಾಲವನ್ನು ಕೊಡುತ್ತವೆ. ಆದರೆ ಮ್ಯೂಚುವಲ್ ಫಂಡ್ ಕಂಪನಿಗಳು ತಮ್ಮ ಬಳಿ ಹೂಡಿಕೆ ಮಾಡಿರುವವರಿಗೆ ನೇರವಾಗಿ ಸಾಲವನ್ನು ಕೊಡುವುದಿಲ್ಲ. ಯಾವುದೇ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್.ಬಿ.ಎಫ್.ಸಿ.) ಗಳನ್ನು ಸಂಪರ್ಕಿಸಿ ಮ್ಯೂಚುವಲ್ ಫಂಡ್ ಹೂಡಿಕೆಯ ಮೇಲೆ ಸಾಲವನ್ನುಪಡೆಯಬಹುದು ನಿಮ್ಮ ಹೂಡಿಕೆಯ ಮೊತ್ತ, ನಿಮ್ಮ ಸಾಲದ ಅವಧಿ ಇದೆಲ್ಲವೂ ಇಲ್ಲಿ ಪರಿಗಣನೆಗೆ ಬರುತ್ತದೆ. ನೀವು ನಿಮ್ಮ ಹೂಡಿಕೆಯ ಯೂನಿಟ್ ಗಳನ್ನು ಸಾಲ ಕೊಡುವ ಸಂಸ್ಥೆಗೆ/ಬ್ಯಾಂಕಿಗೆ ಅಡಮಾನ ಇಡಬೇಕಾಗುತ್ತದೆ. ಈ ರೀತಿಯ ಸಾಲಕ್ಕೆ ಬಡ್ಡಿದರವೂ ಕಡಿಮೆ ಇರುತ್ತದೆ. ಅಂದಾಜು ಶೇ:10-11 ರ ಆಸುಪಾಸಿನಲ್ಲಿರುತ್ತದೆ. ಇದು ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಯವಾಗಬಹುದು. ನಿಮ್ಮ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ನಿಮಗೆ ಸಾಲಕೊಡುವ ಬ್ಯಾಂಕಿಗೆ ಅಥವಾ ಸಂಸ್ಥೆಗೆ ಲೀನ್ ಮಾಡಿ ಕೊಡಬೇಕಾಗುತ್ತದೆ. ಅದಕ್ಕೆ ಬೇಕಾಗುವ ಕೆಲವು ಕಾಗದಪತ್ರಗಳಿಗೆ ನೀವು ಸಹಿ ಮಾಡಬೇಕಾಗುತ್ತದೆ. ಸಾಲ ಪಡೆಯುವ ಮುನ್ನ ನಿಮ್ಮ ಹೂಡಿಕೆಯ ಮ್ಯೂಚುವಲ್ ಫಂಡ್‌ಗೆ ಈ ವಿಚಾರವನ್ನು ತಿಳಿಸಬೇಕಾಗುತ್ತದೆ. ಸಾಮಾನ್ಯವಾಗಿ ಹಳೆಯ ಪದ್ಧತಿಯಲ್ಲಾದರೆ ಮ್ಯೂಚುವಲ್ ಫಂಡ್
ಯೂನಿಟ್‌ಗಳನ್ನು ಸರ್ಟಿಫಿಕೇಟ್‌ಗಳ ರೂಪದಲ್ಲಿ ಅಂದರೆ ಭೌತಿಕ ಸ್ವರೂಪದಲ್ಲಿ ಹೊಂದಿರುತ್ತಿದ್ದೆವು. ಅಲ್ಲದೇ, ಆದರೆ ಈಗ ಎಲ್ಲವೂ ಎಲೆಕ್ಟ್ರಾನಿಕ್ ರೂಪದಲ್ಲಿರಬೇಕೆಂಬ ನಿಯಮ ಜಾರಿಗೆ ಬಂದಿರುವ ಕಾರಣ ನಿಮ್ಮ ಹೂಡಿಕೆ ಡಿಮ್ಯಾಟ್ ಸ್ವರೂಪದಲ್ಲಿ ಇರಬೇಕಾದ್ದು ಅಗತ್ಯ ಮತ್ತು ಅನಿವಾರ್ಯ. ನಿಮ್ಮ ಸಾಲ ಪೂರ್ಣ ತೀರುವಳಿಯಾದಾಗ ಬ್ಯಾಂಕಿನಿಂದ ಮ್ಯೂಚುವಲ್ ಫಂಡ್ ಕಂಪನಿಗೆ ಈಮೇಲ್ ರವಾನಿಸುವಂತೆ ಮಾಡಿ ಪೂರ್ಣ ಯುನಿಟ್‌ಗಳನ್ನು ಅಡಮಾನದಿಂದ ಮುಕ್ತಗೊಳಿಸಬಹುದು. ಒಂದೊಮ್ಮೆ ಸಾಲ ಮರುಪಾವತಿಗೆ ಹೂಡಿಕೆದಾರ ತಪ್ಪಿದಲ್ಲಿ ಆಗ ಬ್ಯಾಂಕಿನವರು ನಿಗದಿತ ಸಾಲದ ಅವಧಿ ಕಳೆದ ನಂತರದಲ್ಲಿ ಆ ಯುನಿಟ್‌ಗಳನ್ನು ಮಾರಾಟ ಮಾಡಿ ಉಳಿಕೆಯಾಗಬಹುದಾದ ಮೊತ್ತವನ್ನು ಹೂಡಿಕೆದಾರನಿಗೆ ಮರಳಿಸಿ ವ್ಯವಹಾರ ಸಮಾಪ್ತಿಗೊಳಿಸಬಹುದು. ಒಂದುವೇಳೆ ಸಾಲದ ಅವಧಿಯ ನಡುವಿನಲ್ಲಿ ಸದ್ರಿ ಅಡಮಾನ ಮಾಡಿದ ಫಂಡಿನ ಎನ್.ಎ.. ಕುಸಿತ ಕಂಡಲ್ಲಿ ಮತ್ತು ಬ್ಯಾಂಕು ನೀಡಿರುವ ಸಾಲದ ಮೊತ್ತಕ್ಕಿಂತ ಅದು ಕೆಳಕ್ಕಿಳಿಯುವ ಸಂಭವ ಬಂದಲ್ಲಿ ಬ್ಯಾಂಕಿನವರು ಸಾಲ ಪಡೆದಾತನಿಗೆ ಕೂಡಲೇ ಸಾಲವನ್ನು ಸಮಾಪ್ತಿಗೊಳಿಸುವಂತೆ ಆಗ್ರಹಿಸಬಹುದು. ಅಂತಹ ಸಂದರ್ಭ ಎದುರಾದಾಗ ಕೆಲವು ಬ್ಯಾಂಕುಗಳಲ್ಲಿ ತಾವೇ ಸ್ವಯಂ ವಿವೇಚನೆಯಿಂದ ಯೂನಿಟ್ ಗಳನ್ನು ಮಾರಾಟ ಮಾಡಿ ಅಪಾಯದಿಂದ ಪಾರಾಗುವ ವ್ಯವಸ್ಥೆಯೂ ಇದೆ. ಸಾಲ ಪಡೆಯುವುದರಿಂದ ಏನು ಪ್ರಯೋಜನ?
ನಿಮ್ಮ ಹೂಡಿಕೆಯ ಮೇಲೆ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಣ ಹಿಂಪಡೆಯುವುದಕ್ಕೆ ಇದೊಂದು ಮಾರ್ಗ. ಈ ಮೂಲಕ ಬಹಳ ಬೇಗ ಹೆಚ್ಚಿನ ಕಷ್ಟವಿಲ್ಲದೇ ಸಾಲಸೌಲಭ್ಯ ಪಡೆಯಬಹುದಾಗಿದೆ. ತುರ್ತು ಅಗತ್ಯಗಳಿಗೆ ಹಣಕಾಸಿಗಾಗಿ ಅಲ್ಲಿ ಇಲ್ಲಿ ಅಡ್ಡಾಡುವುದಕ್ಕಿಂತ ನಿಮ್ಮ ಬಳಿಯೇ ಇರುವ ಹೂಡಿಕೆಯನ್ನು ಬಳಸಿಕೊಂಡು ಸಾಲ ಪಡೆಯುವುದು ಮತ್ತು ತುರ್ತು ಹಣಕಾಸಿನ ದರ್ದಿಗೆ ಬಳಸಿಕೊಳ್ಳುವುದು ಕ್ಷೇಮಕರ. ತುರ್ತು ಹಣಕಾಸು ಅಗತ್ಯವಿದ್ದಾಗ ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆದರೆ ಬೀಳುವ ಬಡ್ಡಿ ದೊಡ್ಡದಾಗಿರುತ್ತದೆ. ಏಕೆಂದರೆ ಪರ್ಸನಲ್ ಲೋನ್‌ಗೆ ಬ್ಯಾಂಕುಗಳು ವಿಧಿಸುವ ಬಡ್ಡಿ ಶೇ:18 ಕ್ಕಿಂತ ಹೆಚ್ಚು ಇರುತ್ತದೆ. ಆದರೆ ಮ್ಯೂಚುವಲ್‌ಫಂಡ್ ಹೂಡಿಕೆಯ ಮೇಲಿನ ಸಾಲಕ್ಕೆ ತೆರಬೇಕಾದ ಬಡ್ಡಿದರ ಕಡಿಮೆ ಇರುತ್ತದೆ. ಯಾವುದರಿಂದ ಲಾಭ?
ಎಲ್.ಐ.ಸಿ. ಬಾಂಡಿನ ಮೇಲೆ ಸಾಲ ಪಡೆಯುವುದು ಬಹಳ ಸುಲಭವೆನಿಸಬಹುದು. ಕೆಲವೇ ಗಂಟೆಗಳಲ್ಲಿ ನಿಮ್ಮ ಸಾಲ ಕೈಸೇರುತ್ತದೆ. ಅಲ್ಲಿ ಸಿಗುವ ಸಾಲದ ಪ್ರಮಾಣವೂ ಬಹುತೇಕ ಹೂಡಿಕೆಯಶೇ:70 ರಷ್ಟು ಇರುತ್ತದೆ. ಆದರೆ ಮ್ಯೂಚುವಲ್ ಫಂಡಿನಲ್ಲಿ ಸಿಗುವ ಸಾಲದ ಪ್ರಮಾಣ ಹೂಡಿಕೆಯ ಶೇ. 50 ರಷ್ಟಿದೆ. ಸಾಲ ಪಡೆಯುವುದಕ್ಕೆ ಕೊಂಚ ಹೆಚ್ಚು ಸಮಯ ಬೇಕಾದೀತು. ಮ್ಯೂಚುವಲ್ ಫಂಡ್ ಗಳ ವಿಧ:
ಮ್ಯೂಚುವಲ್ ಫಂಡ್ ಗಳಲ್ಲಿ (1) ಡೆಬ್r ಫಂಡ್ (2) ಈಕ್ವಿಟಿ ಫಂಡ್ (3) ಹೈಬ್ರಿಡ್ ಫಂಡ್ಸ್ (4) ಎಫ್.ಒ.ಪಿ. ಮತ್ತು ಈ.ಟಿ.ಎಫ್. ಫಂಡ್ (5) ಸ್ಪೆಷಲ್ ಸಿಚುವೇಶನ್ ಫಂಡ್ – ಹೀಗೆ ಅನೇಕ ಬಗೆಯ ಹೂಡಿಕೆ ಫಂಡುಗಳಿವೆ. ಯಾವುದು ಯಾವ ಸಂದರ್ಭಕ್ಕೆ ಒಳಿತು ಮತ್ತು ಅವುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ಸ್ವತಃ ಅಧ್ಯಯನ ಅಥವಾ ನುರಿತವರ ಮಾರ್ಗದರ್ಶನ ಪಡೆಯುವು ದರಿಂದ ತಿಳಿದುಕೊಳ್ಳಬಹುದು. ಪ್ರಸ್ತುತ ಭಾರತದಲ್ಲಿ 43 ಮ್ಯೂಚವಲ್ ಫಂಡ್ ಕಂಪನಿಗಳಿದ್ದು, ಒಟ್ಟಾರೆ 2, 599 ಫಂಡ್ ಸ್ಕೀಮ್‌ಗಳಿವೆ. ಬ್ಯಾಂಕುಗಳು ಮತ್ತು ಬ್ಯಾಂಕೇತರ ಆರ್ಥಿಕ ಸಂಸ್ಥೆಗಳು ಮ್ಯೂಚುವಲ್ ಫಂಡ್ ಉದ್ಯಮದಲ್ಲಿ ಸಕ್ರಿಯವಾಗಿದ್ದು, ತಾವು ಸಂಗ್ರಸಿದ ಮೊತ್ತವನ್ನು ವಿವಿಧ ಅನುಪಾತಗಳಲ್ಲಿ ಶೇರು ಮಾರುಕಟ್ಟೆ, ಡೆಟ್ ಫಂಡ್ ಮತ್ತು ಇನ್ನಿತರ ಆರ್ಥಿಕ ಚಾರಗಳಲ್ಲಿ ಹೂಡಿಕೆ ಮಾಡುತ್ತವೆ. ಒಂದು ವಿಚಾರ ಏನೆಂದರೆ, ತುರ್ತು ಹಣಕಾಸು ಅಗತ್ಯವಿದ್ದರೆ ಮಾತ್ರ ಮ್ಯೂಚುವಲ್ ಫಂಡ್ ಮೇಲೆ ಸಾಲ ಮಾಡಲು ಮುಂದಾಗಿ. ಸೌಲಭ್ಯ ಇದೆ ಎಂದು ಸಾಲ ಪಡೆಯಬೇಡಿ. ಸಾಲ ಎಂದಿದ್ದರೂ ಶೂಲ. ಯೂನಿಟ್ ಮುಖ್ಯ, ಮೊತ್ತವಲ್ಲ
ಗಮನಿಸಬೇಕಾದ ಸಂಗತಿ ಎಂದರೆ, ಯಾವುದೇ ಮ್ಯೂಚುವಲ್ ಫಂಡ್‌ನ ಲೀನ್ ದಾಖಲಿಸುವಾಗ ಧಾರಕನು ಹೊಂದಿರುವ ಯುನಿಟ್‌ಗಳ ಸಂಖ್ಯೆಯನ್ನುಪರಿಗಣಿಸಲಾಗುತ್ತದೆಯೇ ಹೊರತು ಮೊತ್ತವನ್ನಲ್ಲ. ಸಾಲವನ್ನು ಪಡೆಯುವಾಗ ಬಹುಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ನೀವು ಯಾವ ಸ್ವರೂಪದ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಮಾಡಿದ್ದೀರಿ ಎಂಬುದಾಗಿದೆ. ಉದಾಹರಣೆಗೆ, ಈಕ್ವಿಟಿ ಲಿಂಕ್ಡ್ ಹೂಡಿಕೆಯಾದರೆ ಅದಕ್ಕೆ ಸಿಗುವ ಸಾಲದ ಪ್ರಮಾಣ ಉತ್ತಮವಾಗಿರುತ್ತದೆ. ಸದ್ರಿ ಹೂಡಿಕೆಯ ಇಂದಿನ ನೆಟ್ ಅಸೆಟ್ ವಾಲ್ಯೂ (ಎನ್.ಎ.) ಮೇಲೆ ಶೇ. 50ರಷ್ಟು ಸಾಲವು ದೊರೆಯುತ್ತದೆ. ಮ್ಯೂಚುವಲ್ ಫಂಡ್ ಮೇಲೆ ಸಾಲ ಕೊಡುವ ವಿಚಾರದಲ್ಲಿ ಬ್ಯಾಂಕಿನವರಿಗೂ ಕನಿಷ್ಠ ಮತ್ತು ಗರಿಷ್ಠ ಮಿತಿಯ ಕುರಿತಾಗಿ ಕೆಲವು ನಿರ್ಬಂಧಗಳು ಮತ್ತು ನಿಬಂಧನೆಗಳು ಇವೆ. ಅವುಗಳ ಅನುಸಾರವಾಗಿಯೇ ಬ್ಯಾಂಕುಗಳು ಸಾಲ ನೀಡಿಕೆಯನ್ನು ಪರಿಗಣಿಸುತ್ತವೆ. ಇನ್ನು ಬ್ಯಾಂಕಿಗೆ ಅಡಮಾನ ಮಾಡಿರುವ ಯುನಿಟ್‌ಗಳ ಲೀನ್ ಹಿಂಪಡೆಯುವ ವಿಚಾರಕ್ಕೆ ಬಂದರೆ ನೀವು ಸಾಲ ಪಾವತಿ ಮಾಡುತ್ತ ಹೋದಂತೆ, ಅದಕ್ಕೆ ಅನುಗುಣವಾಗಿ ಭಾಗಶಃ ಯುನಿಟ್‌ಗಳನ್ನು ರಿಲೀಸ್ ಮಾಡಿಸಿಕೊಳ್ಳಬಹುದು. ಇಲ್ಲವೇ ಮತ್ತೆ ಪುನಃ ಸಾಲವನ್ನು ಕೇಳಬಹುದು. ಬ್ಯಾಂಕಿನಲ್ಲಿ ಸಾಲ ಪಡೆಯುವಾಗ ಇರುವ ಓವರ್ ಡ್ರಾಫ್ಟ್ (ಒ.ಡಿ) ಸೌಲಭ್ಯದಂತೆ ಇದನ್ನು ನಿರ್ವಹಿಸಬಹುದು. – ನಿರಂಜನ