Advertisement

ಉತ್ತಮ ಮೈಲೇಜ್‌ ಪಡೆಯುವುದು ಹೇಗೆ? 

01:18 PM Nov 02, 2018 | |

ಕಾರು ಅಥವಾ ಬೈಕ್‌ ಇದೆ. ಆದರೆ ಸಾಕಷ್ಟು ಮೈಲೇಜ್‌ ಬರುತ್ತಾ ಇಲ್ಲ ಅಂದರೆ ಅದಕ್ಕೆ ನಿಮ್ಮ ಚಾಲನಾ ಹವ್ಯಾಸ ಮತ್ತು ವಾಹನದ ಎಂಜಿನ್‌ ಎಷ್ಟು ಸುಸ್ಥಿತಿಯಲ್ಲಿದೆ ಎಂಬುದು ಕಾರಣವಾಗುತ್ತದೆ. ಉತ್ತಮ ಚಾಲನಾ ಅಭ್ಯಾಸ, ಎಂಜಿನ್‌ ಸುಸ್ಥಿತಿಯಲ್ಲಿ ಡುವ ಕುರಿತು ಕೆಲವೊಂದು ಟಿಪ್ಸ್‌ ಗಳು ಇಲ್ಲಿವೆ.

Advertisement

ಕೋಲ್ಡ್‌ ಎಂಜಿನ್‌ ಸ್ಟಾರ್ಟ್‌ ವಿಧಾನ
6 ಗಂಟೆಗೆ ಮಿಕ್ಕಿ ನಿಮ್ಮ ವಾಹನ ನಿಂತಲ್ಲೇ ಇದ್ದರೆ, ಅದರ ಎಂಜಿನ್‌ ಕೂಲ್‌ ಆಗಿರುತ್ತದೆ. ಇಂತಹ ಸಂದರ್ಭದಲ್ಲಿ ಕಾರು/ಬೈಕು ಸ್ಟಾರ್ಟ್‌ ಮಾಡಿ 40 ಸೆಕೆಂಡ್‌ಗಳಷ್ಟಾದರೂ ಕಾದು ಬಳಿಕ ಹೊರಡಿ. ಬೆಳಗ್ಗಿನ ಜಾವ ಸ್ಟಾರ್ಟ್‌ ಮಾಡಿದರೆ ಕನಿಷ್ಠ 60 ಸೆಕೆಂಡ್‌ ಕಾಯುವುದು ಉತ್ತಮ. ಇದರಿಂದ ಎಂಜಿನ್‌ ಒಳಗಿನ ಆಯಿಲ್‌ ಇಡೀ ಭಾಗ ವ್ಯಾಪಿಸಿ, ಉತ್ತಮ ಫ್ರಿಕ್ಷನ್‌ ಗೆ ಸಹಾಯ ಮಾಡುತ್ತದೆ. ಎಂಜಿನ್‌ ಕಾರ್ಯಾಚರಣೆ ಸುಲಲಿತವಾಗಿ ಮೈಲೇಜ್‌ ಹೆಚ್ಚಲು ಸಹಾಯಕ.

2 ಸಾವಿರ ಆರ್‌ಪಿಎಂ ಒಳಗೆ ಚಾಲನೆ ಮಾಡಿ
ಕಾರಿನಲ್ಲಾದರೆ ವಾಹನವನ್ನು 2 ಸಾವಿರ ಆರ್‌ಪಿಎಂ (ರೆವೆಲ್ಯೂಷನ್ಸ್‌ ಪರ್‌ ಮಿನಿಟ್‌) ಒಳಗೆ ಚಾಲನೆ ಮಾಡುವುದರಿಂದ ಉತ್ತಮ ಮೈಲೇಜ್‌ ಪಡೆಯಬಹುದು. ಸಣ್ಣ ಕಾರುಗಳಾದರೆ ಮೈಲೇಜ್‌ ಪ್ರಮಾಣ ಸುಮಾರು 20-21 ಕಿ.ಮೀ.ಗಳಷ್ಟನ್ನು ಖಂಡಿತವಾಗಿ ಗಳಿಸಬಹುದು. ಬೈಕ್‌ಗಳಲ್ಲಾದರೆ ಮೂರೂವರೆ ಸಾವಿರ ಆರ್‌ಪಿಎಂ ಒಳಗೆ ಚಾಲನೆ ಮಾಡುವುದರಿಂದ ಬೈಕ್‌ ಗರಿಷ್ಠ ಮೈಲೇಜ್‌ ನೀಡುತ್ತದೆ.

ಏಕಾಏಕಿ ಎಕ್ಸಲರೇಶನ್‌ ಬೇಡ
ಚಾಲನೆ ವೇಳೆ ಏಕಾಏಕಿ ಎಕ್ಸಲರೇಶನ್‌, ಬ್ರೇಕಿಂಗ್‌, ಬ್ರೇಕ್‌ ಪೆಡಲ್‌ ಮೇಲೆ ಕಾಲಿಟ್ಟು ಚಾಲನೆ ಮಾಡುವುದರಿಂದ ಮೈಲೇಜ್‌ ಮೇಲೆ ಪರಿಣಾಮ ಬೀರುತ್ತದೆ. ಏಕಾಏಕಿ ಎಕ್ಸಲರೇಶನ್‌ನಿಂದ ಇಂಧನ ಹೆಚ್ಚು ವ್ಯಯವಾಗುತ್ತದೆ. ಹಾಗೆಯೇ ಏಕಾಏಕಿ ಬ್ರೇಕ್‌ ಹಾಕುವುದರಿಂದ ಶಕ್ತಿ ಕುಂಠಿತವಾಗಿ ಮತ್ತೆ ವೇಗ ಪಡೆಯಲು ಇಂಧನ ಹೆಚ್ಚು ವ್ಯಯವಾಗುತ್ತದೆ. ಚಾಲನೆ ವೇಳೆ ಒಂದೇ ಸ್ಪೀಡ್‌ ಮೈಂಟೇನ್‌ ಮಾಡುವುದು ಉತ್ತಮ. ಜತೆಗೆ ಬ್ರೇಕ್‌ ಪೆಡಲ್‌ ಮೇಲೆ ಕಾಲಿಟ್ಟು ಚಾಲನೆ ಮಾಡುವುದರಿಂದ ಅರಿವಿಲ್ಲದೆ ಬ್ರೇಕ್‌ ಅಪ್ಲೈ ಆಗುತ್ತಿರುತ್ತದೆ.

ಕ್ಲಚ್‌ ಡ್ರೈವಿಂಗ್‌ ಕಡಿಮೆ ಮಾಡಿ
ಟ್ರಾಫಿಕ್‌ ಸಮಸ್ಯೆ ವಿಪರೀತವಿದ್ದ ಕಡೆಗಳಲ್ಲಿ ತುಸು ಕಷ್ಟವಾದರೂ ಆಗಾಗ್ಗೆ ಗಿಯರ್‌ ಬದಲಿಸುವುದು, ಅರ್ಧ ಕ್ಲಚ್‌ ಪ್ರಸ್‌ ಮಾಡಿದ ಚಾಲನೆಯಿಂದ ಮೈಲೇಜ್‌ ಕಡಿಮೆಯಾಗುತ್ತದೆ. ಆಗಾಗ್ಗೆ ಗಿಯರ್‌ ಬದಲಿಸುವ ಬದಲು ಸೂಕ್ತ ಗಿಯರ್‌ ಮೊದಲೇ ಹಾಕಿ ಚಾಲನೆ ಸುಗಮವಾಗುವಂತೆ ಪ್ರಯತ್ನಿಸಬಹುದು. 

Advertisement

ಕಾಲಕಾಲಕ್ಕೆ ಸರ್ವೀಸ್‌
ವಾಹನಗಳ ಬಳಕೆದಾರರ ಪುಸ್ತಕದಲ್ಲಿ ಹೇಳಿದಂತೆ ಕಾಲಕಾಲಕ್ಕೆ ಸರ್ವೀಸ್‌ ಮಾಡಿಸುತ್ತಿರಬೇಕು. ಕೆಲವು ಕಾರುಗಳು 10 ಸಾವಿರಕ್ಕೊಮ್ಮೆ, 15 ಸಾವಿರಕ್ಕೊಮ್ಮೆ ಎಂದಿರುತ್ತದೆ. ಸರ್ವೀಸ್‌ ದೀರ್ಘ‌ ಅವಧಿಯಲ್ಲಿ ಬಂದರೂ ಸುಮಾರು 5 ಸಾವಿರ ಕಿ.ಮೀ.ಗಳಿಗೊಮ್ಮೆ ಸಾಮಾನ್ಯ ಚೆಕಪ್‌ ಮಾಡಿಸಿಕೊಳ್ಳಬೇಕು. ಕಾರುಗಳಲ್ಲಿ ವೀಲ್‌ ಅಲೈನ್‌ಮೆಂಟ್‌ 5 ಸಾವಿರಕ್ಕೊಮ್ಮೆ ಅಗತ್ಯ. ಹಾಗೆಯೇ ಬೈಕ್‌ಗಳಲ್ಲಿ 3/4 ಸಾವಿರ ಅಥವಾ ಕಂಪೆನಿ ಹೇಳಿದಂತೆ 6 ಸಾವಿರ ಕಿ.ಮೀ. ಗೊಮ್ಮೆ ಸಂಪೂರ್ಣ ಎಂಜಿನ್‌ ಆಯಿಲ್‌ ಬದಲಾಯಿಸಬೇಕು.

 ಈಶ

Advertisement

Udayavani is now on Telegram. Click here to join our channel and stay updated with the latest news.

Next