Advertisement
ಹೌದು, ನನ್ನ ನೌಕರಿಯ ಕೊನೆಯ ದಿನದಂದು ವಿಭಾಗದ ಅಧ್ಯಾಪಕರೆಲ್ಲ ಸೇರಿ ನನಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟಿದ್ದರು. “”ಸರ್, ನಾಳೆಯಿಂದ ನೀವಿಲ್ಲದ ವಿಭಾಗವನ್ನು ಊಹಿಸಲೂ ಸಾಧ್ಯವಾಗಲಾರದು” ಎಂದಿದ್ದರು ನನ್ನ ಸಹೋದ್ಯೋಗಿಗಳು. “”ಯಾರೂ ಈ ಪ್ರಪಂಚದಲ್ಲಿ ಯಾವುದಕ್ಕೂ ಅನಿವಾರ್ಯರಲ್ಲ” ಎಂದೆ ನಾನು ಅವರಿಗೆಲ್ಲ ಶುಭಾಶಯವನ್ನು ಕೋರುತ್ತ. ಅಂದು ನನ್ನನ್ನು ಕೇಳಲಾದ ಪ್ರಶ್ನೆ ಒಂದೇ- “”ಮುಂದೇನು ಮಾಡುತ್ತೀರಿ?” ಎಂದು. ನಾನು ಕೊಟ್ಟ ಉತ್ತರವೂ ಒಂದೇ. “ಓದು ಮತ್ತು ಬರಹ’! ಆ ದಿನ ನನ್ನ ಪತ್ನಿಯನ್ನೂ ವೇದಿಕೆಯ ಮೇಲೆ ಕುಳ್ಳಿರಿಸಿದರು. ನನಗೆ ಸನ್ಮಾನ ಮಾಡುತ್ತಿ¨ªಾಗ ಆಕೆಯ ಕಣ್ಣಂಚಿನಲ್ಲಿ ಒಂದೆಡು ಹನಿ ಉದುರಿದುದನ್ನು ನಾನು ಗಮನಿಸಿ¨ªೆ. ಕಾರ್ಯಕ್ರಮ ಮುಗಿದ ಬಳಿಕ ಶಾಲು, ಹೂಹಾರ, ಫಲಕ, ಹಣ್ಣುಗಳೊಂದಿಗೆ ಸಂತೋಷದಿಂದಲೇ ಮನೆಗೆ ಹಿಂದಿರುಗಿದೆವು. ಮಲ್ಲಿಗೆಯ ಹಾರ ನನ್ನವಳಿಗಾಯಿತು!
Related Articles
Advertisement
“”ಇನ್ನು ನಾನೂ ನಿಮ್ಮಂತೆಯೇ, ಪೂರ್ಣ ಸ್ವಾತಂತ್ರ್ಯದ ಹಕ್ಕಿ” ಎಂದೆ. ನಗುನಗುತ್ತ ಮಾತಿಗೆ ತೊಡಗಿದೆ. ಅವರ ಮಡದಿಯೂ ಹರಟೆಯಲ್ಲಿ ಪಾಲ್ಗೊಂಡರು. ಅಂದಿನಂತೆ ನಾನು ಎಂದೂ ಗಪ್ಪಾ ಹೊಡೆದದ್ದಿಲ್ಲ. ಕಾಫಿಯಾಯಿತು, ತಿಂಡಿಯೂ ಆಯಿತು, ಮಾತು ಮಾತು ಎಂದೂ ಮುಗಿಯದ, ಗುರಿಯಿಲ್ಲದ, ಅರ್ಥವಿಲ್ಲದ, ಸ್ವಾರ್ಥವಿಲ್ಲದ, ಕೊನೆಮೊದಲಿಲ್ಲದ ಮಾತು. ಗೂಡಿನಿಂದ ಹೊರಬಂದ ಹಕ್ಕಿಯಾದೆ, ದಂಡೆ ಕಡಿದ ನೀರಾದೆ, ಗಗನದಲ್ಲಿ ಹಾರಾಡುವ ಗಿಡುಗವಾದೆ. ಚಿಟ್ಟೆಯಾದೆ, ಹೂವಾದೆ, ದುಂಬಿಯಾದೆ ಇನ್ನು ಏನೇನೋ ಆದೆ. ಯಾವ ಯೋಚನೆಯೂ ಪರಿವೆಯೂ ಇಲ್ಲದೆ ನಮ್ಮ ಹರಟೆ ಸಾಗಿತು.
ಮಧ್ಯಾಹ್ನವಾಯಿತು. ಮನೆಯ ನೆನಪಾಯಿತು. ಅವರನ್ನು ಬೀಳ್ಕೊಂಡು ಮನೆಗೆ ಬಂದೆ. ಎಂದೂ ಉಣ್ಣದಷ್ಟು ಉಂಡೆ. ಆ ದಿನ ನನ್ನವಳು ಪಾಯಸ ಮಾಡಿದ್ದಳು, ಚಪಾತಿಯೂ ಇತ್ತು, ಕೇಳಬೇಕೆ? ಉಂಡು ಚೆನ್ನಾಗಿ ನಿದ್ರಿಸಿದೆ. ನಿ¨ªೆ ಮನಸ್ಸಿಗೆ ಮುದ ನೀಡಿತು. ಅಪರಾಹ್ನದ ನಿ¨ªೆಯಲ್ಲೂ ಕನಸುಗಳು! ಎದ್ದು ಚಹಾ ಕುಡಿದು ಪೇಟೆಯ ಕಡೆಗೆ ಈರ್ವರೂ ಹೊರಳಿದೆವು. ಅದು ಕಾಲೇಜು ಬಿಡುವ ಸಮಯವಾಗಿತ್ತು. ಮಾರ್ಗವನ್ನು ವರ್ಣಮಯವನ್ನಾಗಿಸಿ ಸಾಗುತ್ತಿದ್ದ ನನ್ನ ವಿದ್ಯಾರ್ಥಿಗಳ ನಮಸ್ಕಾರಗಳ ಸುರಿಮಳೆಗೆ ತುತ್ತಾದೆ.
ಅಲ್ಲಿಂದ ಮುಂದೆ ಹೊಟೇಲಿಗೆ ಹೋಗಿ ಕುಳಿತು ಹರಟುತ್ತ ಒಂದೊಂದು ಗಡ್‌ಬಡ್ ತಿಂದೆವು. ರಾತ್ರಿಯ ಊಟವೂ ಅÇÉೇ ಮುಗಿಯಿತು. ಫೊಟೋಗಳನ್ನು ತೆಗೆದೆವು. ಹೊಟ್ಟೆ ತುಂಬಿ ಮನಸ್ಸು ತಂಪಾಯಿತು. “ನಾಳೆಯಿಂದ ಮನೆಯಲ್ಲಿ ಕುಳಿತು ನಾನೇನು ಮಾಡಲಿ?’ ಎಂದೆ. “ಮನೆಗೆೆಲಸದಲ್ಲಿ ನನಗೆ ಸಹಕರಿಸಿ, ಅಗತ್ಯ ಬಿ¨ªಾಗ ಒಂದು ಕಾಫಿ ಮಾಡಲೂ ನಿಮಗೆ ಬರುವುದಿಲ್ಲ, ನಾನು ಕಲಿಸುತ್ತೇನೆ’ ಎಂದಳು. “ಹೌದು ಕಣೇ, ನೀನು ನನಗೆ ಗುರುವಾಗುವ ಯೋಗ ಬಂದಿದ್ದರೆ ತಪ್ಪಿಸಲಿಕ್ಕಾಗುತ್ತದೆಯೆ?’ ಎಂದೆ. “ಅಷ್ಟೇ ಅಲ್ಲ , ನಿಮಗೆ ಎಲ್ಲ ಅಡುಗೆಯ ವಿಧಾನವನ್ನು ಕಲಿಸುತ್ತೇನೆ’ ಎಂದಳು ಧೈರ್ಯ ತುಂಬಿ. ಯಾವುದೋ ಮೂಡಲ್ಲಿದ್ದ ನಾನು “ಹೂಂ’ ಎಂದೆ. ಹೀಗೆ ಹರಟುತ್ತ ಮನೆಗೆ ಹಿಂದಿರುಗಿದೆವು. ಯೋಚನಾಮಗ್ನನಾದೆ.
ನನ್ನ ಬರವಣಿಗೆ ಮುಂದುವರಿಯಬೇಕೆಂದು ಯೋಚಿಸಿದೆ. ಕಂಪ್ಯೂಟರಿನಲ್ಲಿ ಪ್ರಾವೀಣ್ಯವನ್ನು ಹೊಂದಿದ ನನ್ನ ತಂಗಿಯ ಮಗ ಆಗ ತಾನೇ ಮನೆಗೆ ಬಂದಿದ್ದ. ಕೈಯಲ್ಲಿ ಬರೆಯುವ ಕಷ್ಟವನ್ನು ಅವನೊಂದಿಗೆ ಹಂಚಿಕೊಂಡಾಗ ಆತ, “ನುಡಿಯಲ್ಲಿ ಬರೆಯಿರಿ’ ಎಂದು ನುಡಿದ. ಅದರ ಬಗೆಗೆ ಚರ್ಚಿಸುತ್ತ ಒಂದೆರಡು ದಿನದಲ್ಲಿ ಮನೆಗೆ ಕಂಪ್ಯೂಟರ್ ಪ್ರವೇಶಿಸಿತು.ನುಡಿಯಲ್ಲಿ ಬೆರಳಚ್ಚು ಮಾಡಲು ಅವನೇ ಕಲಿಸಿದ. ಸುಮಾರು ಒಂದು ತಿಂಗಳೊಳಗೆ ಅದರಲ್ಲಿ ಪರಿಣತಿಯನ್ನು ಗಳಿಸಿದೆ. ಲೇಖನಗಳನ್ನು ಬರೆದೆ, ಪುಸ್ತಕಗಳನ್ನು ಪ್ರಕಟಿಸಿದೆ, ಕಂಪ್ಯೂಟರ್ ಲೋಕ ನನಗೆ ವರವಾಗಿ ಪರಿಣಮಿಸಿತು. ನನ್ನ ಬರವಣಿಗೆ ಅದರÇÉೇ ಮುಂದುವರಿಯುತು. ಬರಬರುತ್ತ ಕಾಲೇಜು, ಪಾಠ ಎಲ್ಲ ಮರೆತು ಹೋಯಿತು. ಅದರÇÉೇ ಸುಖವನ್ನು ಕಂಡೆ. ನನ್ನವಳೂ ಕಲಿತಳು! ಅದರಲ್ಲಿ ಇಡಿಯ ಪ್ರಪಂಚವನ್ನೇ ನೋಡಿದೆ. ಅನಂತರ ಅದೇ ನನ್ನ ಆತ್ಮೀಯ ನೇಹಿಗನ ಸ್ಥಾನವನ್ನು ಉಳಿಸಿಕೊಂಡಿತು. ಕಂಪ್ಯೂಟರ್ ಎಂಬ ಬ್ರಹ್ಮಾಂಡದಲ್ಲಿ ಏನೇನು ಅಡಗಿದೆ? ಎಂಬುದನ್ನು ತಿಳಿಯಲು ನನ್ನಿಂದ ಇನ್ನೂ ಸಾಧ್ಯವಾಗಲಿಲ್ಲ! ಒಂದೊಂದೇ ಹೆಜ್ಜೆಯಿಡುತ್ತ ನಿಧಾನವಾಗಿ ಮುಂದೆ ಸಾಗುತ್ತಿದ್ದೇನೆ. ಹೀಗೆ ನಿವೃತ್ತನಾಗಿಯೂ ಪ್ರವೃತ್ತನಾಗುವ ಸುಯೋಗ ಒದಗಿ ಬಂದ ಆ ದಿನವನ್ನು ಹೇಗೆ ಮರೆಯಲು ಸಾಧ್ಯ? – ಎನ್. ಜಿ. ಪಟವರ್ಧನ್