Advertisement

ವಜ್ರಾಸನದಿಂದ ಅಜೀರ್ಣ ಸಮಸ್ಯೆ ದೂರ; ವಜ್ರಾಸನದ ಪ್ರಯೋಜನ

03:29 PM Nov 30, 2020 | Nagendra Trasi |

ಅಜೀರ್ಣ ಸಮಸ್ಯೆಯು ಬಹುತೇಕರನ್ನು ಕಾಡುತ್ತದೆ. ಕಿರಿಕಿರಿ ಉಂಟು ಮಾಡುವ ಇದನ್ನು ನಿರ್ಲಕ್ಷಿಸಿದರೆ ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ಅಜೀರ್ಣವು ಹೊಟ್ಟೆಯುಬ್ಬರ, ಹೈಪರ್‌ ಆ್ಯಸಿಡಿಟಿ, ಮಲಬದ್ಧತೆ, ಹೊಟ್ಟೆಯ ಉರಿಯೂತ, ಅಲ್ಸರ್‌ ಮತ್ತು ಇತರ ಜೀರ್ಣಾಂಗವ್ಯೂಹದ ತೊಂದರೆಗಳಿಗೆ ಕಾರಣವಾಗುತ್ತದೆ.

Advertisement

ನಾವು ತಿಂದ ಆಹಾರವು ಜೀರ್ಣವಾಗಲು ಜಠರವು ಸರಿಯಾಗಿ ಕಾರ್ಯವನ್ನು ನಿರ್ವಹಿಸಬೇಕು. ಈ ವ್ಯವಸ್ಥೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಅಜೀರ್ಣ, ಹೊಟ್ಟೆಯ ಸಮಸ್ಯೆ ಕಾಣಿಸುತ್ತದೆ. ಅಜೀರ್ಣ ಉಂಟಾದರೆ ನಮ್ಮ ದೇಹದ ಎಲ್ಲ ಅಂಗಗಳ ಕಾರ್ಯ ವ್ಯವಸ್ಥೆಗೆ ಅಡಚಣೆಯುಂಟಾಗುತ್ತದೆ.

ಇದರಿಂದಾಗಿ ಜೀರ್ಣಕ್ರಿಯೆಯು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಆವಶ್ಯಕ. ಹಾಗಾಗಿ ತುಂಬಾ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಪ್ರತಿದಿನ ಒಂದು ನಿಮಿಷ ವಜ್ರಾಸನ ಮಾಡಿದರೆ ಸಾಕು ನಿಮ್ಮ ಸಮಸ್ಯೆ ದೂರವಾಗುವುದು. ಊಟವಾದ ಬಳಿಕ ಈ ಆಸನದಲ್ಲಿ ಕೂರುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಇಲ್ಲಿ ವಜ್ರಾಸನ ಭಂಗಿ ಹಾಗೂ ಪ್ರಯೋಜನಗಳ ಬಗ್ಗೆ ಮಾಹಿತಿ  ನೀಡಲಾಗಿದೆ.

ಇದನ್ನೂ ಓದಿ:ಪಟ್ಟು ಬಿಡದ ರೈತರು-ಗಡಿಯಲ್ಲಿ ಮುಂದುವರಿದ ಹೋರಾಟ: ಅಮಿತ್ ಶಾ, ಟೋಮರ್ ಮಾತುಕತೆ ಅಂತ್ಯ

ವಜ್ರಾಸನ ಮಾಡುವ ವಿಧಾನ
ಸುಖಾಸನ ಸ್ಥಿತಿಯಲ್ಲಿ ನೇರವಾಗಿ ಕುಳಿತು, ಕಾಲುಗಳನ್ನು ಒಂದಾದ ಬಳಿಕ ಒಂದರಂತೆ ಮುಂದಕ್ಕೆ ಚಾಚಿ, ಅನಂತರ ಒಂದಾದ ಬಳಿಕ ಒಂದರಂತೆ ಕಾಲುಗಳನ್ನು ಮಡಚಿ, ಕೈಯಗಳನ್ನು ತೊಡೆಯ ಮೇಲೆ ಇಟ್ಟು ಕುಳಿತು ನಿಧಾನಕ್ಕೆ ಉಸಿರು ಎಳೆದು ಬಿಡಿ.

Advertisement

ವಜ್ರಾಸನದ ಪ್ರಯೋಜನ
*ರಕ್ತ ಸಂಚಾರ ಸರಾಗವಾಗಿ ನಡೆಯುವುದು

*ಅಜೀರ್ಣ ಸಮಸ್ಯೆ ಇದ್ದವರು ಈ ಯೋಗ ಮಾಡಿದರೆ ಜೀರ್ಣಕ್ರಿಯೆಗೆ ಸಹಕಾರಿ. ಊಟವಾದ ಬಳಿಕ ಈ ಆಸನದಲ್ಲಿ 1 ನಿಮಿಷ ಕುಳಿತುಕೊಳ್ಳಿ.

*ಬೆನ್ನು ಮೂಳೆಗೆ ಉತ್ತಮ ವ್ಯಾಯಾಮ.

*ಕಿಬ್ಬೊಟ್ಟೆಯ ಸ್ನಾಯುಗಳು ಬಲವಾಗುತ್ತವೆ.

*ತೊಡೆ ದಪ್ಪಗಿರುವವರು ಈ ವ್ಯಾಯಾಮದಿಂದ ಆಕರ್ಷಕ ತೊಡೆಗಳನ್ನು ಪಡೆಯಬಹುದು.

*ಮಂಡಿಯ ಆರೋಗ್ಯಕ್ಕೆ ಒಳ್ಳೆಯದು.

*ಕಾಲಿನ ಮಣಿಗಂಟನ್ನು ಬಲವಾಗಿಸುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next