Advertisement

ದೇಹದ ಅಂಗಾಂಗಗಳಿಗೆ ಶಕ್ತಿ ತುಂಬುವ ವೀರಭದ್ರಾಸನ

01:54 PM Jan 18, 2021 | Team Udayavani |

ಯೋಗದ ಪ್ರತಿಯೊಂದು ಆಸನವು ದೇಹದಲ್ಲಿರುವ ವಿವಿಧ ಅಂಗಾಂಗಗಳಿಗೆ ಶಕ್ತಿಯನ್ನು ತುಂಬುತ್ತದೆ. ಅದೇ ರೀತಿ ವೀರಭದ್ರಾಸನವು ಮುಖ್ಯವಾಗಿ ಕೈಗಳು, ಭುಜ, ತೊಡೆ, ಸ್ನಾಯುಗಳನ್ನು ಬಲಪಡಿಸುತ್ತದೆ. ವೀರಭದ್ರಾಸನವು ಆಕರ್ಷಕ ಯೋಗ ಭಂಗಿಯಾಗಿದ್ದು, ಇದು ದೇಹಕ್ಕೆ ಸೌಂದರ್ಯ ಮತ್ತು ಆಕರ್ಷಣೆಯನ್ನು ಒದಗಿಸುತ್ತದೆ. ಇದಕ್ಕಾಗಿ ಕಾಲುಗಳನ್ನು ಮೂರು ನಾಲ್ಕು ಅಡಿ ಅಗಲವಾಗಿ ನೇರವಾಗಿ ನಿಲ್ಲಬೇಕು. ಬಲ ಕಾಲನ್ನು 90 ಡಿಗ್ರಿ ಮತ್ತು ಎಡ ಕಾಲನ್ನು 15 ಡಿಗ್ರಿಯಲ್ಲಿಟ್ಟು ಬಲಕಾಲಿನ ಹಿಂಗಾಲು ಎಡಕಾಲಿನ ಪಾದದ ಮಧ್ಯೆ ನೇರವಾಗಿರಬೇಕು. ಅಂಗೈ ಪರಸ್ಪರ ಎದುರಾಗುವಂತೆ ಎರಡೂ ಕೈಗಳನ್ನು
ಮೇಲೆತ್ತಿಕೊಂಡಿರಬೇಕು.

Advertisement

ಉಸಿರನ್ನು ಬಿಡುತ್ತ ಮೊಣಕಾಲನ್ನು ಬಗ್ಗಿಸಿ. ಮೊಣಕಾಲುಗಳು ಹಿಂಗಾಲನ್ನು ಹಿಂದಿಕ್ಕಿ ಹೋಗಬಾರದು. ತಲೆಯನ್ನು ನೇರವಾಗಿ ಬಲಕ್ಕೆ ತಿರುಗಿಸಿ ಕೈಗಳನ್ನು ಎಳೆದುಕೊಳ್ಳಿ. ಶ್ರೋಣಿಯನ್ನು ಕೆಳಗೆ ಒತ್ತಲು ಪ್ರಯತ್ನಿಸಿ. ಯೋಧನ ಭಂಗಿಯಲ್ಲಿ ನಿಲ್ಲಬೇಕು. ಎರಡೂ ಬದಿಯಿಂದ ಕೈಗಳನ್ನು ಕೆಳಗೆ ತಂದು ಉಸಿರು ಬಿಡಿ. ಇದೇ ರೀತಿ ಎಡ ಬದಿಯಿಂದಲೂ ಮಾಡಿ. ವೀರಭದ್ರಾಸನದಿಂದ ಹಲವು ಲಾಭಗಳಿವೆ.

*ಇದು ಕೈಗಳು, ಕಾಲುಗಳು, ಬೆನ್ನಿನ ಕೆಳಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ.

*ದೇಹದಲ್ಲಿ ಸಮತೋಲನ ಸುಧಾರಿಸುತ್ತದೆ ಮತ್ತು ಶಕ್ತಿ ಹೆಚ್ಚಿಸುತ್ತದೆ.

ಇದನ್ನೂ ಓದಿ:ಸಾರಿಗೆ ನೌಕರರಿಗೆ ಅರ್ಧದಷ್ಟೇ ವೇತನ : ತರಬೇತಿ ಅವಧಿ ಸಿಬ್ಬಂದಿಗೆ 4 ಸಾವಿರಕ್ಕೂ ಕಡಿಮೆ ಸಂಬಳ

Advertisement

*ಜಡತ್ವ ನಿವಾರಣೆಗೆ, ಕುಳಿತು ಕೆಲಸ ಮಾಡುವವರಿಗೆ ಅತ್ಯುತ್ತಮ ಯೋಗ ಭಂಗಿಯಾಗಿದೆ.

*ಭುಜದ ಮೇಲೆ ನೋವಿದ್ದರೆ ಶಮನವಾಗುವುದು. ಧೈರ್ಯ ಹೆಚ್ಚಿಸುತ್ತದೆ, ಮನಸ್ಸಿನ ಶಾಂತಿ ಕಾಪಾಡುತ್ತದೆ.

ಅತಿಸಾರ, ಬೆನ್ನಿನ ಸಮಸ್ಯೆ, ದೀರ್ಘ‌ಕಾಲದ ಅನಾರೋಗ್ಯಕ್ಕೆ ಒಳಗಾದವರು ಈ ಯೋಗ ಭಂಗಿಯನ್ನು ಮಾಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತ್ಯುತ್ತಮ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಇದನ್ನು ಮಾಡಬಾರದು.

ಇದನ್ನೂ ಓದಿ:ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ : ಪುದುಚೇರಿ ವಿರುದ್ಧವೂ ಮುಂಬಯಿಗೆ ಮುಖಭಂಗ

ಎರಡು ಮತ್ತು ಮೂರನೇ ತ್ತೈಮಾಸಿಕದಲ್ಲಿರುವ ಗರ್ಭಿಣಿಯರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಗೋಡೆಗೆ ಸಮೀಪ ನಿಂತು ಮಾಡುವುದು
ಉತ್ತಮ. ಪ್ರಾರಂಭಕ್ಕೂ ಮೊದಲು ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಮೊಣಕಾಲು ನೋವು, ಸಂಧಿವಾತ ಇರುವವರು ವೈದ್ಯರ ಸಲಹೆ ಪಡೆದು
ಈ ಭಂಗಿಯನ್ನು ಮಾಡಬಹುದು ಆದರೆ ಬಲಕ್ಕಾಗಿ ಏನನ್ನಾದರೂ ಉಪಯೋಗಿಸುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next