Advertisement

ಸಾಷ್ಟಾಂಗ ನಮಸ್ಕಾರ ದೇಹಾರೋಗ್ಯಕ್ಕೂ ಒಳ್ಳೆಯದು

11:27 AM Dec 10, 2020 | Nagendra Trasi |

ಗುರು ಹಿರಿಯರು ಎದುರು ಬಂದಾಗ ನಮಸ್ಕಾರ, ಪ್ರಣಾಮ ಸಲ್ಲಿಸುವುದು ಗೌರವದ ಸಂಕೇತ. ಪ್ರಣಾಮ ಎಂದರೆ ಪೂರ್ಣ ಎಂಬ ಅರ್ಥವಿದೆ. ಪ್ರಣಾಮ ಸಲ್ಲಿಸುವ ಹಿಂದಿನ ಉದ್ದೇಶ ನಿಮ್ಮಲ್ಲಿರುವ ಒಳ್ಳೆಯ ಗುಣಗಳು ನನ್ನಲ್ಲಿ ತುಂಬಲಿ ಎನ್ನುವುದಾಗಿದೆ.

Advertisement

ಇನ್ನು ದೇವರ ಮುಂದೆ ಕೈ ಮುಗಿದು ನಮಸ್ಕರಿಸುತ್ತೇವೆ. ಕೆಲವರು ನಿಂತು, ಇನ್ನು ಕೆಲವರು ಕುಳಿತು, ಮತ್ತೆ ಕೆಲವರು ಉದ್ಧಂಡ ನಮಸ್ಕಾರ ಹಾಕುತ್ತಾರೆ. ಇದು ಬೇರೆಬೇರೆ ಅರ್ಥವನ್ನು ಕೊಡುತ್ತದೆಯಾದರೂ ದೇವರ ಮುಂದೆ ಹೆಚ್ಚಿನವರು ಅದರಲ್ಲೂ ಪುರುಷರು ಸಾಷ್ಟಾಂಗ (ದಂಡಕಾರ, ಉದ್ಧಂಡ) ನಮಸ್ಕಾರ ಮಾಡುತ್ತಾರೆ. ಹೀಗೆ ಸಾಷ್ಟಾಂಗ ನಮಸ್ಕಾರ ಮಾಡುವುದು ದೇವರ ಮುಂದೆ ಸಂಪೂರ್ಣ ಶರಣಾಗತಿಯನ್ನು ಸೂಚಿಸುತ್ತದೆ.

ನಿಂತು, ಕುಳಿತು ನಮಸ್ಕರಿಸುವಾಗ ದೇಹಕ್ಕೆ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಆದರೆ ಸಾಷ್ಟಾಂಗ ನಮಸ್ಕಾರ ದಲ್ಲಿ ಇದು ಬಹಳ ಕಡಿಮೆ. ಇದು ನಮ್ಮ
ಅಹಂಕಾರವನ್ನು ಬದಿಗಿಟ್ಟು ಮಾನವೀಯತೆಯನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ.

ಇದನ್ನೂ ಓದಿ:ಸುಪ್ರೀಂ ಮುಖ್ಯ ನ್ಯಾಯಮೂರ್ತಿ ತಾಯಿಗೆ 2.5 ಕೋಟಿ ರೂ. ವಂಚನೆ: ಆರೋಪಿ ಬಂಧನ

ಸಾಷ್ಟಾಂಗ ನಮಸ್ಕಾರ ಮಾಡುವಾಗ ಪುರುಷರ ಕೈ, ಹೊಟ್ಟೆ, ಮಂಡಿ ಕಾಲುಗಳು ಭೂಮಿಗೆ ಸ್ಪರ್ಶವಾಗುವಂತಿರಬೇಕು ಮತ್ತು ಸ್ತ್ರೀಯರು ಕೈ ಮತ್ತು ಮಂಡಿಯನ್ನು ಮಡಚಿ ಭೂಮಿಗೆ ಸ್ಪರ್ಶಿಸಬೇಕು ಎನ್ನಲಾಗಿದೆ.

Advertisement

ಮಹಿಳೆಯರು ಸಾಮಾನ್ಯವಾಗಿ ಉದ್ಧಂಡ ನಮಸ್ಕಾರ ಮಾಡುವುದಿಲ್ಲ. ಇದನ್ನು ವೇದಗಳಲ್ಲೂ ನಿಷಿದ್ಧ ಎನ್ನಲಾಗಿದೆ. ನಂಬಿಕೆಗಳು ಏನೇ ಇದ್ದರೂ ವೈಜ್ಞಾನಿಕವಾಗಿ ಮಹಿಳೆ ಗರ್ಭ ಧರಿಸುವಾಗ, ಮಗುವಿಗೆ ಹಾಲುಣಿಸುವಾಗ ಸಮಸ್ಯೆ ಉಂಟಾಗದಿರಲಿ ಎನ್ನುವ ಕಾರಣ ಇದಕ್ಕಿದೆ. ಒಟ್ಟಿನಲ್ಲಿ ನಂಬಿಕೆಗಳು ಏನೇ ಇರಲಿ ದೇವರ ಮುಂದೆ ನಮಸ್ಕಾರ ಮಾಡುವ ಪ್ರಕ್ರಿಯೆಯು ದೇಹಕ್ಕೆ ಪರಿಪೂರ್ಣ ವ್ಯಾಯಾಮವನ್ನು ಒದಗಿಸುತ್ತದೆ ಎಂಬುದು ವೈಜ್ಞಾನಿಕ ಸಂಶೋಧನೆಗಳಿಂದಲೂ ಸಾಬೀತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next