Advertisement
ರಾಜೇಶ್ ಅಂಚನ್ : ಸುಡು ಮದ್ದುಗಳ ಬದಲಿಗೆ ಮಣ್ಣಿನ ಸ್ವದೇಶಿ ನಿರ್ಮಿತ ದೀಪಗಳನ್ನು ಹಚ್ಚೋಣ. ಸಿಡಿಯುವ ಪಟಾಕಿಗಳನ್ನು ಹಚ್ಚದಿರೋಣ. ಪರಿಸರದ ಬಗ್ಗೆ ಹಾಗೆ ಮಕ್ಕಳ ಬಗ್ಗೆ ನಿಗಾವಹಿಸಿ ಹೆಚ್ಚು ಹೆಚ್ಚು ದೀಪಗಳನ್ನು ಬೆಳಗಿಸಿ,ಸರ್ವರಿಗೂ ಸಿಹಿ ಹಂಚಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸೋಣ.
Related Articles
Advertisement
ಸಚಿನ್ ಶಿವರಾಜ್: ಕತ್ತಲನ್ನು ಅಳಿಸಿ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬ ದೀಪಾವಳಿ ಮನೆ ಮನೆಯಲ್ಲಿ ದೀಪ ಹಚ್ಚಿ ಶಾಂತಿ ನೆಮ್ಮದಿಯಿಂದ ಸಿಹಿ ತಿಂಡಿಗಳನ್ನು ಮಾಡಿ ಕುಟುಂಬ ಸಮೇತ ಆಚರಿಸುವ ಹಬ್ಬ ದೀಪಾವಳಿ
ಸಚಿನ್ ಎಚ್ ಪಿ ಹಿಂದೂ: ಮಣ್ಣಿನಿಂದ ತಯಾರಿಸಿದ ದೀಪದಲ್ಲಿ ಮನೆಯನ್ನು ಅಲಂಕರಿಸುವುದು, ಪಟಾಕಿಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವುದು
ಯಶವಂತ್ ಕುಮಾರ್: ಪಟಾಕಿ ಸಿಡಿಸಿದರೆ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟು ಮಾಡುವುದು ಹಾಗೂ ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಶ್ವಾಸಕೋಶ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ನನ್ನ ಅನಿಸಿಕೆ
ಸಂತೋಷ್ ಜೈನ್: ದೀಪಾವಳಿ ದೀಪದ ಹಬ್ಬ. ಬೆಳಕಿನ ಹಬ್ಬ. ಕಷ್ಟದಲ್ಲಿ ಇರುವವವರ ಬಾಳಿನಲ್ಲಿ ಹೊಸ ಬೆಳಕು ಮೂಡಿ ಬರಲಿ. ಪಟಾಕಿ ಜಾಸ್ತಿ ಹಚ್ಚದೆ ಕಷ್ಟದಲ್ಲಿ ಇರುವವರಿಗೆ ಬಟ್ಟೆ ಊಟ ದಾನ ಮಾಡಿ ದೀಪಾವಳಿ ಆಚರಿಸೋಣ.