Advertisement

ಭಗವಂತನ ಪ್ರೀತಿಯ ಭಕ್ತನಾಗುವುದು ಹೇಗೆ?

03:25 AM Dec 22, 2018 | |

ನಮ್ಮೊಳಗಿಂದ ಭಾವವೊಂದು ಹುಟ್ಟಬೇಕಾದರೆ ಅದಕ್ಕೆ ಸೂಕ್ತವಾದ ಅವಕಾಶಬೇಕು; ಸಂದರ್ಭವೂ ಬೇಕು. ಅಳು ಬರುವ ಸಮಯದಲ್ಲಿ ನಗಲಾಗದು. ನಕ್ಕರೂ ಅದು ಕೃತಕ, ಸುಳ್ಳು ನಗು. ಭಕ್ತಿಯ ಭಾವವೂ ಅಷ್ಟೇ, ಅದಕ್ಕೆ ತಕ್ಕುದಾದ ಸಂಸ್ಕಾರ ಉಂಟಾದಾಗ ಮಾತ್ರ ಭಕ್ತಿಯು ಹುಟ್ಟುತ್ತದೆ. 

Advertisement

ಭಕ್ತಿಯಿಂದ ದೇವರನ್ನು ಆರಾಧಿಸುವವನು ಭಕ್ತ. ಶುದ್ಧವಾದ ಮನದಿಂದ ದೇವನಲ್ಲಿ ಶ್ರದ್ಧೆಯನ್ನಿಟ್ಟುಕೊಳ್ಳುವವನು ಭಕ್ತ. ಪೂಜೆ, ಭಜನೆ, ನಾಮಸ್ಮರಣೆ, ಧ್ಯಾನ ಎಲ್ಲವೂ ಭಕ್ತಿಯ ಮಾರ್ಗಗಳೇ. ಆದರೆ, ದೇವನು ಯಾವಾಗ ನಮ್ಮನ್ನು ಇಷ್ಟ ಪಡುತ್ತಾನೆ? ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ದೇವರಿಗೆ ಪ್ರಿಯವಾದ ಕೆಲಸವನ್ನೇ ಮಾಡು ಎಂಬ ಮಾತಿದೆ. ಅಂದರೆ, ತಪ್ಪಿಲ್ಲದ ನೀತಿಯುತವಾದ ಕಾರ್ಯಗಳು ನಮ್ಮಿಂದಾಗಲಿ ಎಂದರ್ಥ. ದೇವರೆಂದರೆ ಭರವಸೆ. ಆ ಭರವಸೆಯಲ್ಲಿಟ್ಟ ನಂಬಿಕೆಯೇ ನಮ್ಮ ಭಕ್ತಿ. ಹಾಗಾದರೆ, ನಾವು ನಂಬಿ ಭಜಿಸುವ ದೇವರು ನಮ್ಮನ್ನು ಮೆಚ್ಚುತ್ತಾನಾ? ಅವನಿಗೆ ನಾನು ಪ್ರಿಯವಾದೆನಾ? ಎಂಬಿತ್ಯಾದಿ ಪ್ರಶ್ನೆಗಳು ಉದಯಿಸುವುದು ಸಹಜ.

ದೇವರು ಯಾವ ರೀತಿಯ ಭಕ್ತರನ್ನು ಇಷ್ಟಪಡುತ್ತಾನೆ ಎಂಬುದನ್ನು ಭಗವದ್ಗೀತೆಯ ಹನ್ನೆರಡನೇ ಅಧ್ಯಾಯದಲ್ಲಿ ಹೇಳಲಾಗಿದೆ.

ಅದ್ವೇಷ್ಟಾ ಸರ್ವ ಭೂತಾನಾಂ ಮೈತ್ರಃ ಕರುಣ ಏವ ಚ|
ನಿರ್ಮಮೋ ನಿರಂಹಕಾರಃ ಸಮದುಃಖಸುಖಃ ಕ್ಷಮೀ ||
ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ
ಮಯ್ಯರ್ಪಿತಮನೋ ಬುದ್ಧಿ ರ್ಯೋ ಮಧºಕ್ತಃ ಸ ಮೇ ಪ್ರಿಯಃ ||

ಯಾವ ಮನುಷ್ಯನು ಎಲ್ಲ ಪ್ರಾಣಿಗಳಲ್ಲಿಯೂ ದ್ವೇಷ-ಭಾವರಹಿತನಾಗಿ, ಸ್ವಾರ್ಥರಹಿತನಾಗಿ ಎಲ್ಲರ ಪ್ರೇಮಿಯಾಗಿರುತ್ತಾನೋ ಮತ್ತು ಕಾರಣವಿಲ್ಲದೆ ದಯಾಳುವಾಗಿದ್ದಾನೋ ಹಾಗೂ ಮಮತಾರಹಿತನೋ, ಅಹಂಕಾರರಹಿತನೋ ಸುಖದುಃಖವನ್ನು ಸಮಾನವಾಗಿ ಸ್ವೀಕರಿಸುವನೋ, ಮಾನವಂತನಾಗಿರುವನೋ ಹಾಗೂ ಯಾವ ಯೋಗಿಯು, ನಿರಂತರವಾಗಿ ಶರೀರವನ್ನು ವಶದಲ್ಲಿಟ್ಟುಕೊಂಡಿರುವನೋ ಮತ್ತು ನನ್ನಲ್ಲಿ ದೃಢನಿಶ್ಚಯವನ್ನು ಹೊಂದಿರುವನೋ, ಅಂಥವನು ಹಾಗೂ ನನ್ನಲ್ಲಿ ಮನಸ್ಸು ಬುದ್ಧಿಗಳನ್ನು ಅರ್ಪಿಸುವ ಭಕ್ತನು ನನಗೆ ಪ್ರಿಯವಾಗಿದ್ದಾ ನೆ.

Advertisement

ಭಕ್ತಿ ಎಂಬುದು ವಿಶೇಷವಾದ ಭಾವವೂ ಹೌದು. ನಮ್ಮೊಳಗಿಂದ ಭಾವವೊಂದು ಹುಟ್ಟಬೇಕಾದರೆ ಅದಕ್ಕೆ ಸೂಕ್ತವಾದ ಅವಕಾಶಬೇಕು; ಸಂದರ್ಭವೂ ಬೇಕು. ಅಳು ಬರುವ ಸಮಯದಲ್ಲಿ ನಗಲಾಗದು. ನಕ್ಕರೂ ಅದು ಕೃತಕ, ಸುಳ್ಳು ನಗು. ಭಕ್ತಿಯ ಭಾವವೂ ಅಷ್ಟೇ, ಅದಕ್ಕೆ ತಕ್ಕುದಾದ ಸಂಸ್ಕಾರ ಉಂಟಾದಾಗ ಮಾತ್ರ ಭಕ್ತಿಯು ಹುಟ್ಟುತ್ತದೆ. ಈ ಭಕ್ತಿಯು ಶುದ್ಧವಾಗಿರಬೇಕೆಂದರೆ ಮೊದಲು ಎಲ್ಲ ಪ್ರಾಣಿಗಳಲ್ಲೂ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಯಾವ ಪ್ರಾಣಿಯ ಬಗೆಗೂ ದ್ವೇಷವನ್ನಿಟ್ಟುಕೊಳ್ಳದೆ ಪ್ರೇಮದಿಂದ ನೋಡುವ ಪರಿಪಾಠವನ್ನು ಬೆಳಸಿಕೊಳ್ಳಬೇಕು. ಆಗ ಮನಸ್ಸು ಶುದ್ಧವಾಗಿರುವ ಕಾರಣ, ಸದ್ಭಕ್ತಿ ಹುಟ್ಟಲು ಸಾಧ್ಯ. ಇನ್ನು ಯಾರನ್ನೂ ನಮ್ಮ ಸ್ವಾರ್ಥಕ್ಕಾಗಿಯೋ, ನಮ್ಮ ಸ್ವಕಾರ್ಯ ಸಾಧನೆಗಾಗಿಯೋ ಪ್ರೀತಿಸದೆ ನಿಸ್ವಾರ್ಥದಿಂದ ಎಲ್ಲರನ್ನೂ ಪ್ರೇಮಿಸಿದಾಗ, ಪರಸ್ಪರರಲ್ಲಿ ಉತ್ತಮ ಸಂಬಂಧ ಬೆಳೆದು ಅÇÉೊಂದು ಧನಾತ್ಮಕ ಶಕ್ತಿಯನ್ನು ಬೆಳಸಿದಂತಾಗುತ್ತದೆ.

ಧನಾತ್ಮಕ ಶಕ್ತಿ ಇದ್ದಲ್ಲಿ ಭಕ್ತಿಯೂ ದೃಢವಾಗಿರುತ್ತದೆ. ಕಾರಣವಿಲ್ಲದೆ ದಯಾಳು ಆಗಬೇಕು. ಮುಂದೊಂದು ದಿನ ಉಪಕಾರವಾಗುವುದೆಂಬ ಕಾರಣಕ್ಕೋ, ತಾನು ಪ್ರಸಿದ್ಧಿಗೆ ಬರುವ ಹಂಬಲಕ್ಕೋ ನಾವು ದಯಾಳುಗಳಾಗಬಾರದು. ಅಹಂ ಅನ್ನು ಸಂಪೂರ್ಣವಾಗಿ ತ್ಯಜಿಸಬೇಕು. “ಅಹಂ’ ಎಂಬುದು ನಮ್ಮನ್ನು ಕುರುಡರನ್ನಾಗಿಸುವುದರಿಂದ ನಮ್ಮ ಬುದ್ಧಿಗೆ ಸರಿತಪ್ಪುಗಳು ಅರಿವಿಗೆ ಬರುವುದಿಲ್ಲ. ಆಗ ಭಕ್ತಿ ಹುಟ್ಟುವುದೇ ಇಲ್ಲ. ಸುಖದುಃಖಗಳು ಬದುಕಿನಲ್ಲಿ ಬರುವುದು ಸಹಜ. ಅವನ್ನು ಸಮಾನವಾಗಿ ಸ್ವೀಕರಿಸುವ ಚಾತುರ್ಯವನ್ನು ಅರಿತು ಅಳವಡಿಸಿಕೊಳ್ಳಬೇಕು. ಕ್ಷಮಿಸುವ ಬುದ್ಧಿಯು ಧಾರಾಳವಾಗಿರಬೇಕು. ತನ್ನ ಶರೀರವನ್ನು ನಿಯಂತ್ರಣದಲ್ಲಿಟ್ಟುಕೊಂಡು ಭಗವಂತನಲ್ಲಿ ದೃಢವಾದ ನಂಬಿಕೆಯನ್ನು ಇಟ್ಟುಕೊಂಡವನ ಭಕ್ತಿಯನ್ನು ದೇವನು ಮೆಚ್ಚುತ್ತಾನೆ. ಅಂಥ ಮನುಷ್ಯನು ದೇವನಿಗೆ ಪ್ರಿಯವಾದವನೂ ಆಗುತ್ತಾನೆ.

ಭಕ್ತಿಯು ಡಾಂಭಿಕವಾಗಿರಬಾರದು ಎಂಬುದನ್ನು ಇಲ್ಲಿ ಸೂಚ್ಯವಾಗಿ ಹೇಳಲಾಗಿದೆ. 
ಭಕ್ತನಾಗುವುದು ಎಂದರೆ ಉತ್ತಮವಾದ ವ್ಯಕ್ತಿಣ್ತೀವನ್ನು ಬೆಳೆಸಿಕೊಳ್ಳುವುದು ಎಂದರ್ಥ. ಹಾಗಾಗಿ, ಪ್ರತಿಯೊಬ್ಬರೂ ದೇವನಿಗೆ ಪ್ರಿಯವಾಗುವಂಥ ಭಕ್ತನಾಗಬೇಕು. ಹೀಗೆ ಮಾಡಿದರೆ, ಈ ಭುವಿಯೇ ಮುಂದೊಂದು ದಿನ ಸ್ವರ್ಗವಾಗುತ್ತದೆ.

ವಿಷ್ಣು ಭಟ್‌ ಹೊಸ್ಮನೆ 

Advertisement

Udayavani is now on Telegram. Click here to join our channel and stay updated with the latest news.

Next