Advertisement

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

03:37 PM Jan 03, 2025 | Team Udayavani |

ಮಹಾರಾಷ್ಟ್ರ: ಸತ್ತ ವ್ಯಕ್ತಿಯೊಬ್ಬರ ಮೃತ ದೇಹವನ್ನು ಆಂಬುಲೆನ್ಸ್ ಮೂಲಕ ಮನೆಗೆ ತರುವ ವೇಳೆ ಬದುಕುಳಿದ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳಕಿಗೆ ಬಂದಿದೆ.

Advertisement

ಕಸಬಾ-ಬಾವಾಡದ ನಿವಾಸಿಯಾಗಿರುವ ಪಾಂಡುರಂಗ ಉಲ್ಪೆ(65) ಮರುಜನ್ಮ ಪಡೆದ ವ್ಯಕ್ತಿ.

ಏನಿದು ಪ್ರಕರಣ:
ಪಾಂಡುರಂಗ ಅವರಿಗೆ ಕಳೆದ ಡಿಸೆಂಬರ್ 16 ರಂದು ಮನೆಯಲ್ಲಿದ್ದ ವೇಳೆ ಹೃದಯಾಘಾತವಾಗಿತ್ತು ಕೂಡಲೇ ಅವರ ಮನೆಯವರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಪಾಂಡುರಂಗ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ, ಇನ್ನು ಅಂತ್ಯಕ್ರಿಯೆ ಮಾಡುವ ಉದ್ದೇಶದಿಂದ ಆಸ್ಪತ್ರೆಯ ಪ್ರಕ್ರಿಯೆ ಮುಗಿಸಿ ಆಂಬುಲೆನ್ಸ್ ಮೇಳಕ ತಮ್ಮ ಊರಿಗೆ ಮೃತದೇಹವನ್ನು ತರಲಾಗುತ್ತಿತ್ತು ಈ ವೇಳೆ ಆಂಬುಲೆನ್ಸ್ ಚಾಲಕ ರೋಡ್ ಹಂಪ್ ಅರಿಯದೆ ವೇಗವಾಗಿ ಆಂಬುಲೆನ್ಸ್ ಸಾಗಿಸಿದ್ದಾನೆ ಅಷ್ಟೋತ್ತಿಗೆ ಒಳಗಿದ್ದ ಪಾಂಡುರಂಗ ಅವರ ಕೈ ಬೆರಳುಗಳು ಚಲನೆಯಲ್ಲಿರುವುದು ಕುಟುಂಬ ಸದಸ್ಯರು ನೋಡಿದ್ದಾರೆ ಅಲ್ಲದೆ ಹೃದಯ ಬಡಿತ ಪರಿಶೀಲಿಸಿದಾಗ ಪಾಂಡುರಂಗ ಅವರು ಉಸಿರಾಡುತ್ತಿರುವುದು ಗಮನಕ್ಕೆ ಬಂದಿದೆ ಕೂಡಲೇ ಯೂ ಟರ್ನ್ ತೆಗೆದುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ವ್ಯಕ್ತಿ ಜೀವಂತವಾಗಿರುವುದನ್ನು ದೃಢಪಡಿಸಿದ್ದು ಕೂಡಲೇ ಅವರನ್ನು ಆಂಜಿಯೋಪ್ಲಾಸ್ಟಿಗೆ ಒಳಪಡಿಸಲಾಯಿತು ಇದಾದ ಬಳಿಕ ಸುಮಾರು 15 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕರೆತರಲಾಗಿದೆ.

ಈ ಕುರಿತು ಸ್ವತಃ ಪಾಂಡುರಂಗ ಅವರೇ ಹೇಳಿಕೆ ನೀಡಿದ್ದು ಮನೆಯಲ್ಲಿ ಚಹಾ ಕುಡಿಯುತ್ತಿರಬೇಕಾದರೆ ನನಗೆ ತಲೆ ಸುತ್ತು ಬಂತು ಇದಾದ ಬಳಿಕ ಉಸಿರಾಡಲು ಕಷ್ಟವಾಯಿತು ಕೂಡಲೇ ನಾನು ಬಾತ್ ರೂಮಿಗೆ ಹೋದೆ ಅಲ್ಲಿ ವಾಂತಿ ಮಾಡಿದೆ ಆ ಬಳಿಕ ಮನೆಯವರು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಗೊತ್ತಿದೆ ಆಮೇಲೆ ಏನಾಯಿತು ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Advertisement

ಆದರೆ ಮೊದಲು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದ ಆಸ್ಪತ್ರೆಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Advertisement

Udayavani is now on Telegram. Click here to join our channel and stay updated with the latest news.

Next