Advertisement

ಸ್ತ್ರೀ  ಪುರುಷರು ಕುಂಕುಮವನ್ನು ಹೇಗೆ ಹಚ್ಚಿಕೊಳ್ಳಬೇಕು?

05:25 AM Nov 24, 2018 | |

ಸ್ತ್ರೀಯರು ತಮ್ಮ ಆಜಾnಚಕ್ರದ ಮೇಲೆ ಕೆಂಪು ಗೋಲಾಕಾರ ರೂಪದಲ್ಲಿ  ಕುಂಕುಮದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ.  ಪುರುಷರು ತಮ್ಮ ಆಜಾnಚಕ್ರದ ಮೇಲೆ ಉದ್ದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ. ಸ್ತ್ರೀಯರು ಹಣೆಯ ಮೇಲೆ ಹಚ್ಚಿಕೊಂಡಿರುವ ಕುಂಕುಮದಿಂದ, ತಮ್ಮಲ್ಲಿರುವ ಜಗನ್ಮಾತೆ ಶ್ರೀದುರ್ಗಾದೇವಿಯ ತಣ್ತೀದ ಪೂಜೆಯನ್ನು ಮಾಡುತ್ತಾರೆ. ಸ್ತ್ರೀಯರು ತಮ್ಮ ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವುದೆಂದರೆ ತಮ್ಮಲ್ಲಿರುವ ಶಕ್ತಿತಣ್ತೀದ ಪೂಜೆಯನ್ನು ಮಾಡುವುದೇ ಆಗಿದೆ. ಕೆಂಪು ಗೋಲಾಕಾರದ ಕುಂಕುಮವು  ಶ್ರೀದುರ್ಗಾದೇವಿಯ ತಣ್ತೀದ ಅಪ್ರಕಟ ಶಕ್ತಿಯ ಪ್ರತೀಕವಾಗಿದೆ. ಗೋಲಾಕಾರ ಕುಂಕುಮದಿಂದ ಶಕ್ತಿಯು ಅಲ್ಲಿಯೇ ತಿರುಗುತ್ತಿರುತ್ತದೆ. ಅದು ಅವಶ್ಯಕತೆಗನುಸಾರ ಕೇಂದ್ರಬಿಂದುನಿಂದ ಪ್ರಕಟವಾಗುತ್ತದೆ.

Advertisement

 ಪುರುಷರು ಹಣೆಯ ಮೇಲೆ ಹಚ್ಚಿಕೊಂಡಿರುವ ಉದ್ದ ತಿಲಕದಿಂದ ತಮ್ಮಲ್ಲಿರುವ ಶಿವತಣ್ತೀದ ಪೂಜೆಯನ್ನು ಮಾಡಿದಂತಾಗುತ್ತದೆ. ಕೆಂಪು ಕುಂಕುಮದ ತಿಲಕವು ಶಿವತಣ್ತೀದ ಪ್ರಕಟಶಕ್ತಿಯ ಪ್ರತೀಕವಾಗಿದೆ. ಈ ಉದ್ದ ತಿಲಕದ ಮೇಲಿನ ತುದಿಯಿಂದ ಶಿವನ ಪ್ರಕಟಶಕ್ತಿಯು ಹೊರಬೀಳುತ್ತದೆ.

ಅರುಣ್‌ ಹೆಚ್‌.ವಿ (ಆಧಾರ : ಸನಾತನ ಸಂಸ್ಥೆ)

Advertisement

Udayavani is now on Telegram. Click here to join our channel and stay updated with the latest news.

Next